Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಎಲ್ಲಾ 15 ಆವೃತ್ತಿಗಳ ಫೈನಲ್ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿ

IPL 2022: List of man of the match award winners in every IPL final match

ಕಳೆದ ಮಾರ್ಚ್ ತಿಂಗಳ ಅಂತಿಮ ವಾರದಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ನಿನ್ನೆ ( ಮೇ 29 ) ನಡೆದ ಫೈನಲ್ ಪಂದ್ಯದ ಮೂಲಕ ತೆರೆಬಿದ್ದಿದೆ.

ಗುಜರಾತ್‌‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ತಾನೂ ಪದಾರ್ಪಣೆ ಮಾಡಿದ ಐಪಿಎಲ್ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮುವುದರ ಮೂಲಕ ಹೊಸ ಇತಿಹಾಸ ಬರೆದಿದೆ.

ಇನ್ನು ಈ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಮಿಂಚಿದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲಿಗೆ 4 ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಕೇವಲ 17 ರನ್ ನೀಡಿ 3 ವಿಕೆಟ್ ಪಡೆದರು. ಹಾಗೂ ನಂತರ 30 ಎಸೆತಗಳಲ್ಲಿ 34 ರನ್ ಕಲೆಹಾಕಿದ ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನವನ್ನು ನೀಡಿ ಮ್ಯಾನ್ ಆಫ್ ದಿ ಮ್ಯಾಚ್ ಎನಿಸಿಕೊಂಡರು. ಹೀಗೆ ಈ ಬಾರಿ ಹಾರ್ದಿಕ್ ಪಾಂಡ್ಯಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು ಐಪಿಎಲ್ ಉದ್ಘಾಟನಾ ಆವೃತ್ತಿಯಿಂದ ಇಲ್ಲಿಯವರೆಗೂ ಫೈನಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಎಲ್ಲಾ ಆಟಗಾರರ ಪಟ್ಟಿ ಮುಂದೆ ಇದೆ ಓದಿ.

ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ

ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ

2008 - ಯೂಸುಫ್ ಪಠಾಣ್ ( ರಾಜಸ್ಥಾನ್ ರಾಯಲ್ಸ್ ) - ಫೈನಲ್ ಪಂದ್ಯದಲ್ಲಿ 39 ಎಸೆತಗಳಲ್ಲಿ 56 ರನ್ ಕಲೆಹಾಕಿದ್ದರು ಮತ್ತು 22 ರನ್ ನೀಡಿ 2 ವಿಕೆಟ್ ಪಡೆದಿದ್ದರು.


2009- ಅನಿಲ್ ಕುಂಬ್ಳೆ ( ರಾಯಲ್ ಚಾಲೆಂಜರ್ಸ್ ಬೆಂಗಳೂರು ) - 16 ರನ್ ನೀಡಿ 4 ವಿಕೆಟ್ ಪಡೆದಿದ್ದರು.


2010 - ಸುರೇಶ್ ರೈನಾ ( ಚೆನ್ನೈ ಸೂಪರ್ ಕಿಂಗ್ಸ್ ) - 35 ಎಸೆತಗಳಲ್ಲಿ ಅಜೇಯ 57 ರನ್ ಬಾರಿಸಿದ್ದರು ಮತ್ತು 21 ರನ್ ನೀಡಿ 1 ವಿಕೆಟ್ ಪಡೆದಿದ್ದರು

2011- ಮುರಳಿ ವಿಜಯ್ ( ಚೆನ್ನೈ ಸೂಪರ್ ಕಿಂಗ್ಸ್ ) - 52 ಎಸೆತಗಳಲ್ಲಿ 95 ರನ್ ಬಾರಿಸಿದ್ದರು

2012 - ಮನ್ವಿಂದರ್ ಬಿಸ್ಲಾ ( ಕೋಲ್ಕತ್ತಾ ನೈಟ್ ರೈಡರ್ಸ್ ) - 48 ಎಸೆತಗಳಲ್ಲಿ 89 ರನ್ ಬಾರಿಸಿದ್ದರು

2013 - ಕೀರನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್ ( 32 ಎಸೆತಗಳಲ್ಲಿ ಅಜೇಯ 60 ರನ್ ಬಾರಿಸಿದ್ದರು ಮತ್ತು 34 ರನ್ ನೀಡಿ 1 ವಿಕೆಟ್ ಪಡೆದಿದ್ದರು.


2014 - ಮನೀಷ್ ಪಾಂಡೆ ( ಕೋಲ್ಕತ್ತಾ ನೈಟ್ ರೈಡರ್ಸ್ ) - 50 ಎಸೆತಗಳಲ್ಲಿ 94 ರನ್ ಬಾರಿಸಿದ್ದರು

2015 - ರೋಹಿತ್ ಶರ್ಮಾ ( ಮುಂಬೈ ಇಂಡಿಯನ್ಸ್ ) - 26 ಎಸೆತಗಳಲ್ಲಿ 50 ರನ್ ಬಾರಿಸಿದ್ದರು

2016 - ಬೆನ್ ಕಟಿಂಗ್ ( ಸನ್ ರೈಸರ್ಸ್ ಹೈದರಾಬಾದ್ ) 15 ಎಸೆತಗಳಲ್ಲಿ ಅಜೇಯ 39 ರನ್ ಬಾರಿಸಿದ್ದರು ಮತ್ತು 35 ರನ್‌ಗಳಿಗೆ 2 ವಿಕೆಟ್ ಪಡೆದಿದ್ದರು.


2017 - ಕೃನಾಲ್ ಪಾಂಡ್ಯ ( ಮುಂಬೈ ಇಂಡಿಯನ್ಸ್ ) - 38 ಎಸೆತಗಳಲ್ಲಿ 47 ರನ್ ಬಾರಿಸಿದ್ದರು

2018 - ಶೇನ್ ವಾಟ್ಸನ್ ( ಚೆನ್ನೈ ಸೂಪರ್ ಕಿಂಗ್ಸ್ ) - 57 ಎಸೆತಗಳಲ್ಲಿ ಅಜೇಯ 117 ರನ್ ಚಚ್ಚಿದ್ದರು

2019 - ಜಸ್ ಪ್ರೀತ್ ಬುಮ್ರಾ ( ಮುಂಬೈ ಇಂಡಿಯನ್ಸ್ ) - 14 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.

2020- ಟ್ರೆಂಟ್ ಬೌಲ್ಟ್ ( ಮುಂಬೈ ಇಂಡಿಯನ್ಸ್ ) - 30 ರನ್ ನೀಡಿ 3 ವಿಕೆಟ್ ಪಡೆದಿದ್ದರು.

2021 - ಫಾಫ್ ಡು ಪ್ಲೆಸಿಸ್ ( ಚೆನ್ನೈ ಸೂಪರ್ ಕಿಂಗ್ಸ್ ) - 59 ಎಸೆತಗಳಲ್ಲಿ 86 ರನ್ ಬಾರಿಸಿದ್ದರು.

2022- ಹಾರ್ದಿಕ್ ಪಾಂಡ್ಯಾ ( ಗುಜರಾತ್ ಟೈಟನ್ಸ್) - 30 ಎಸೆತಗಳಲ್ಲಿ 34 ರನ್ ಬಾರಿಸಿದ್ದಾರೆ 17 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ.

ಎದುರಾಳಿಗಳ ಪ್ರಮುಖ ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ

ಎದುರಾಳಿಗಳ ಪ್ರಮುಖ ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ

ಇನ್ನು ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಹಾರ್ದಿಕ್ ಪಾಂಡ್ಯ ಎದುರಾಳಿ ರಾಜಸ್ಥಾನ್ ರಾಯಲ್ಸ್ ಪರ ತಂಡದ ಪರ ದೊಡ್ಡ ಮೊತ್ತ ಕಲೆ ಹಾಕಬಲ್ಲ ಆಟಗಾರರಾದ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ ಮತ್ತು ಶಿಮ್ರಾನ್ ಹೆಟ್ಮೆಯರ್ ವಿಕೆಟ್‍ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗೆದ್ದ ಹಾರ್ದಿಕ್ ಪಾಂಡ್ಯ & ಸೋತ ಸಂಜು ಸ್ಯಾಮ್ಸನ್ ಸೋಲು-ಗೆಲುವಿನ ಬಗ್ಗೆ ಏನು ಹೇಳಿದ್ರು? | #cricket | OneIndia
ಕಮ್ ಬ್ಯಾಕ್ ಮೂಲಕ ಟೀಕಾಕಾರರಿಗೆ ಪಾಂಡ್ಯ ಚಾಟಿಯೇಟು

ಕಮ್ ಬ್ಯಾಕ್ ಮೂಲಕ ಟೀಕಾಕಾರರಿಗೆ ಪಾಂಡ್ಯ ಚಾಟಿಯೇಟು

ಇನ್ನು ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಸಮಸ್ಯೆಯಿಂದಾಗಿ ಬೌಲಿಂಗ್ ಮಾಡಲಾಗದೆ ಭಾರತ ರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದರು ಹಾಗೂ ಆಲ್ ರೌಂಡರ್ ಆಟಗಾರನಾಗಿ ಬೌಲಿಂಗ್ ಮಾಡಲಾಗುವುದಿಲ್ಲ ಎಂದು ಭಾರೀ ಟೀಕೆಗಳನ್ನು ಎದುರಿಸಿದ್ದರು. ಆದರೆ ಇದೀಗ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಹಾರ್ದಿಕ್ ಪಾಂಡ್ಯ 487 ರನ್ ದಾಖಲಿಸಿದ್ದು, 8 ವಿಕೆಟ್ ಪಡೆದಿದ್ದಾರೆ.ಈ ಮೂಲಕ ಟೀಕಾಕಾರರಿಗೆಲ್ಲಾ ಹಾರ್ದಿಕ್ ಪಾಂಡ್ಯ ಟಾಂಗ್ ನೀಡಿದ್ದಾರೆ.

Story first published: Monday, May 30, 2022, 14:37 [IST]
Other articles published on May 30, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+