IPL 2022: ಅತಿಹೆಚ್ಚು ಬಾರಿ ಡಕ್‌ಔಟ್ ಆದ ಆಟಗಾರರಿವರು; ಈ ಕೆಟ್ಟ ದಾಖಲೆಯಲ್ಲಿ ಯಾರು ಟಾಪ್?

ಕಳೆದ ಭಾನುವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಕಳೆದೆರಡು ತಿಂಗಳುಗಳಿಂದ ನಡೆಯುತ್ತಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿತ್ತು. ಇತ್ತ ರಾಜಸ್ಥಾನ್ ರಾಯಲ್ಸ್ ನೀಡಿದ್ದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟನ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ತಾನು ಪದಾರ್ಪಣೆ ಮಾಡಿದ ಆವೃತ್ತಿಯಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಲವಾರು ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿ ಮಿಂಚಿ ಕ್ರಿಕೆಟ್ ಅಭಿಮಾನಿಗಳು ಮತ್ತು ಆಯ್ಕೆಗಾರರ ಗಮನ ಸೆಳೆದರೆ, ಕಳಪೆ ಪ್ರದರ್ಶನ ಮತ್ತು ಫಿಟ್‌ನೆಸ್ ಸಮಸ್ಯೆಯಿಂದ ಟೀಮ್ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿದ್ದ ಇನ್ನೂ ಕೆಲ ಅನುಭವಿ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿ ಕಮ್‌ಬ್ಯಾಕ್ ಮಾಡಿದ್ದಾರೆ. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯನ್ನು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಕೆಲ ಕ್ರಿಕೆಟಿಗರು ವೇದಿಕೆಯನ್ನಾಗಿ ಉಪಯೋಗಿಸಿಕೊಂಡರೆ, ಇನ್ನೂ ಕೆಲ ಅನುಭವಿ ಕ್ರಿಕೆಟಿಗರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಂಕಾದರು ಹಾಗೂ ಹಲವು ಕ್ರಿಕೆಟಿಗರು ಡಕ್ ಔಟ್ ಆಗಿ ನಿರಾಸೆ ಮೂಡಿಸಿದರು.
ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡಕ್ ಔಟ್ ಆಗಿ ನಿರಾಸೆ ಮೂಡಿಸಿದ ಆಟಗಾರರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಬಲಿಷ್ಟ ಆಟಗಾರರೂ ಸಹ ಸ್ಥಾನ ಪಡೆದುಕೊಂಡಿದ್ದು, ಈ ಪಟ್ಟಿಯಲ್ಲಿರುವ ಟಾಪ್ 5 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

1. ವಿರಾಟ್ ಕೊಹ್ಲಿ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 3 ಬಾರಿ ಡಕ್ ಔಟ್ ಆಗಿದ್ದು, ಈ ಮೂರೂ ಡಕ್ಔಟ್ ಕೂಡ ಗೋಲ್ಡನ್ ಡಕ್ಔಟ್ ಆಗಿವೆ. ಹೀಗೆ ಮೂರು ಬಾರಿ ಗೋಲ್ಡನ್ ಡಕ್ಔಟ್ ಆದ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅತಿಹೆಚ್ಚು ಬಾರಿ ಡಕ್ ಔಟ್ ಆದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡು ಬೇಡವಾದ ದಾಖಲೆ ಮಾಡಿದ್ದಾರೆ.

2. ಕೆಎಲ್ ರಾಹುಲ್
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೂತನ ತಂಡ ಲಕ್ನೋ ಸೂಪರ್‌ಜೈಂಟ್ಸ್ ನಾಯಕನಾಗಿ ಪ್ಲೇಆಫ್ ಹಂತದವರೆಗೂ ತಂಡವನ್ನು ಕರೆತಂದಿದ್ದ ಕೆ ಎಲ್ ರಾಹುಲ್ ಒಟ್ಟು 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 3 ಬಾರಿ ಡಕ್ ಔಟ್ ಆಗಿದ್ದಾರೆ. ಈ ಪೈಕಿ 2 ಗೋಲ್ಡನ್ ಡಕ್ ಔಟ್ ಆದರೆ, ಇನ್ನುಳಿದ 1 ಡಕ್ ಔಟ್ ಡೈಮಂಡ್ ಡಕ್ ಔಟ್. ಡೈಮಂಡ್ ಡಕ್ ಔಟ್ ಎಂದರೆ ಬ್ಯಾಟ್ಸ್‌ಮನ್ ಯಾವುದೇ ಎಸೆತವನ್ನು ಎದುರಿಸದೇ ಔಟ್ ಆಗುವುದಾಗಿದೆ ಹಾಗೂ ಗೋಲ್ಡನ್ ಡಕ್‌ಔಟ್ ಎಂದರೆ ಬ್ಯಾಟ್ಸ್‌ಮನ್ ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸುವುದಾಗಿದೆ.

3. ಸುನಿಲ್ ನರೈನ್
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಿರೀಕ್ಷಿಸಿದ ಪ್ರದರ್ಶನ ನೀಡುವಲ್ಲಿ ವಿಫಲರಾಗಿ ನೆಲಕಚ್ಚಿದ ಆಟಗಾರರಲ್ಲಿ ಸುನಿಲ್ ನರೈನ್ ಕೂಡ ಒಬ್ಬರು. ಈ ಹಿಂದಿನ ಆವೃತ್ತಿಗಳಲ್ಲಿ ಕೇವಲ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲಿಯೂ ಸಹ ಮಿಂಚುತ್ತಿದ್ದ ಸುನಿಲ್ ನರೈನ್ ಈ ಬಾರಿ ಎರಡರಲ್ಲೂ ಮುಗ್ಗರಿಸಿದ್ದಾರೆ. ಈ ಬಾರಿ 10 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ನರೈನ್ 3 ಬಾರಿ ಡಕ್ ಔಟ್ ಆಗಿದ್ದಾರೆ. ಈ ಪೈಕಿ 2 ಗೋಲ್ಡನ್ ಡಕ್ ಔಟ್ ಆದರೆ, ಇನ್ನುಳಿದ 1 ಡಕ್ ಔಟ್ ಡೈಮಂಡ್ ಡಕ್ ಔಟ್ ಆಗಿದೆ.

4. ರಶೀದ್ ಖಾನ್
ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಗುಜರಾತ್ ಟೈಟನ್ಸ್ ತಂಡದ ಆಟಗಾರನಾಗಿದ್ದ ರಶೀದ್ ಖಾನ್ ಒಟ್ಟು 8 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿದ್ದು, 3 ಬಾರಿ ಡಕ್ ಔಟ್ ಆಗಿದ್ದು, 2 ಬಾರಿ ಗೋಲ್ಡನ್ ಡಕ್ ಔಟ್ ಆಗಿದ್ದಾರೆ ಹಾಗೂ ಉಳಿದೊಂದು ಡಕ್ ಔಟ್ ಸಾಮಾನ್ಯ ಡಕ್ ಔಟ್ ಆಗಿದೆ.

5. ಟಿಮ್ ಸೌಥಿ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಟಿಮ್ ಸೌಥಿ ಕೂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 3 ಬಾರಿ ಡಕ್ ಔಟ್ ಆಗಿದ್ದಾರೆ. ಈ ಪೈಕಿ 2 ಬಾರಿ ಗೋಲ್ಡನ್ ಡಕ್ ಔಟ್ ಆಗಿದ್ದಾರೆ ಹಾಗೂ ಉಳಿದೊಂದು ಡಕ್ ಔಟ್ ಸಾಮಾನ್ಯ ಡಕ್ ಔಟ್ ಆಗಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications