Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG VS DC: ಕೆ.ಎಲ್ ರಾಹುಲ್ ಅಬ್ಬರ, ಡೆಲ್ಲಿ ಕ್ಯಾಪಿಟಲ್ಸ್‌ಗೆ 196ರನ್ ಟಾರ್ಗೆಟ್ ನೀಡಿದ ಲಕ್ನೋ

KL RAHUL

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 3 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ 196 ರನ್‌ಗಳ ಗುರಿಯನ್ನ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆ.ಎಲ್ ರಾಹುಲ್ ಮತ್ತೊಂದು ಬೊಂಬಾಟ್ ಇನ್ನಿಂಗ್ಸ್ ಆಡುವ ಮೂಲಕ ತಂಡದ ಮೊತ್ತವನ್ನ ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದರು. ಮೊದಲ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದ ರಾಹುಲ್ ಟಾಪ್ ಆರ್ಡರ್‌ ಬ್ಯಾಟರ್‌ಗಳ ಜೊತೆಗೆ ಅಬ್ಬರಿಸಿದ್ರು.

ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಕ್ವಿಂಟನ್ ಡಿಕಾಕ್ 23ರನ್‌ಗಳಿಸಿದ್ದಾಗ ಲಲಿತ್ ಯಾದವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಆದ್ರೆ ಎರಡನೇ ವಿಕೆಟ್ ಜೊತೆಯಾದ ರಾಹುಲ್ ಹಾಗೂ ದೀಪಕ್ ಹೂಡಾ ಉತ್ತಮ ಜೊತೆಯಾಟದ ಮೂಲಕ ಮಿಂಚಿದರು.

34 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್‌ಗಳ ನೆರವಿನಿಂ ಹೂಡಾ 52ರನ್‌ಗಳಿಸಿದ್ರೆ, ಕೆ.ಎಲ್ ರಾಹುಲ್ 5 ಅಮೋಘ ಸಿಕ್ಸರ್ ಹಾಗೂ 4 ಬೌಂಡರಿ ಮೂಲಕ 51 ಎಸೆತಗಳಲ್ಲಿ 77 ರನ್‌ ಸಿಡಿಸಿದ್ರು. ಐಪಿಎಲ್‌ನಲ್ಲಿ 29ನೇ ಅರ್ಧಶತಕ ದಾಖಲಿಸಿದ ಕೆ.ಎಲ್ ರಾಹುಲ್‌ ಮೈದಾನದ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ್ರು.

ಎರಡನೇ ವಿಕೆಟ್‌ಗೆ ಜೊತೆಯಾಗಿದ್ದ ಈ ಜೋಡಿಯನ್ನ ಶಾರ್ದೂಲ್ ಠಾಕೂರ್ ಬೇರ್ಪಡಿಸದ್ರು. 52 ರನ್ ಕಲೆಹಾಕಿದ್ದ ಹೂಡಾ ಕಾಟನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಅದ್ಭುತ ಆಟವಾಡಿದ ರಾಹುಲ್ 19ನೇ ಓವರ್‌ನಲ್ಲಿ ಲಲಿತ್ ಯಾದವ್ ಬೌಂಡರಿ ಲೈನ್‌ನಲ್ಲಿ ಹಿಡಿದ ಉತ್ತಮ ಕ್ಯಾಚ್‌ನಿಂದಾಗಿ ಔಟಾಗಿ ಇನ್ನಿಂಗ್ಸ್ ಮುಗಿಸಿದ್ರು. ರಾಹುಲ್‌ ತಂಡದ ಪರ ಗರಿಷ್ಠ ಸ್ಕೋರರ್ ಆಗಿ 77ರನ್ ಕಲೆಹಾಕಿದರು.

ಕೆಳಕ್ರಮಾಂಕದಲ್ಲಿ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಸಿಕ್ಕ ಒಂದು ಜೀವದಾನದಿಂದಾಗಿ 16 ಎಸೆತಗಳಲ್ಲಿ 17ರನ್‌ಗಳಿಸಲಷ್ಟೇ ಶಕ್ತರಾದರು. ಕೃನಾಲ್ ಪಾಂಡ್ಯ 9 ರನ್‌ಗಳ ಕೊಡುಗೆ ನೀಡಿದರು. ಪರಿಣಾಮ ಲಕ್ನೋ ಮೂರು ವಿಕೆಟ್ ನಷ್ಟಕ್ಕೆ 195ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪರ ಶಾರ್ದೂಲ್ ಠಾಕೂರ್ ಏಕೈಕ ವಿಕೆಟ್ ಟೇಕರ್ ಆಗಿದ್ದು, 4 ಓವರ್‌ಗಳಲ್ಲಿ 40ರನ್ ನೀಡಿ 3 ವಿಕೆಟ್ ಪಡೆದರು.

Story first published: Sunday, May 1, 2022, 17:33 [IST]
Other articles published on May 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+