IPL 2022: GT vs LSG: ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟ ಇತ್ತಂಡಗಳ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್‌ನ 57ನೇ ಪಂದ್ಯ ಇಂದು ಮಂಗಳವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೊಸಿಯೇಶನ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೂರ್ನಿಯ ಎರಡು ಅಗ್ರ ಕ್ರಮಾಂಕದ ತಮಡಗಳು ಮುಖಾಮುಖಿಯಾಗುತ್ತಿರುವುದು ಪಂದ್ಯದ ಕುತೂಹಲ ಹೆಚ್ಚಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದರೂ ಇತ್ತಂಡಗಳು ಅದ್ಭುತ ಪ್ರದರ್ಶನ ನಿಡಿ ಮುನ್ನುಗ್ಗುತ್ತಿದೆ. ಆಡಿರುವ 11 ಪಂದ್ಯಗಳಲ್ಲಿ ಎರಡು ತಂಡಗಳು ಕೂಡ 3೦ ಪಂದ್ಯಗಳಲ್ಲಿ ಮಾತ್ರವೇ ಸೋಲು ಅನುಭವಿಸಿರುವುದು ಈ ತಂಡಗಳ ಪರಾಕ್ರಮಕ್ಕೆ ಸಾಕ್ಷಿಯಾಗಿದೆ.
ಈ ಎರಡು ತಂಡಗಳು ಕೂಡ ಈ ಬಾರಿಯ ಟೂರ್ನಿಯಲ್ಲಿ ಈಗಾಗಲೇ ಒಂದು ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಗುಜರಾತ್ ಟೈಟನ್ಸ್ ತಂಡ ಗೆದ್ದುಕೊಂಡಿತ್ತು. ಹೀಗಾಗಿ ಹೆಡ್ ಟು ಹೆಡ್ ಅಂಕಿಅಂಶದಲ್ಲಿ ಗುಜರಾತ್ ತಂಡ 1-0 ಅಂತರದಿಂದ ಮುನ್ನಡೆಯಲ್ಲಿದೆ. ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸತತ ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದರೆ ಆರಂಭದಲ್ಲಿ ಸತತ ಗೆಲುವು ದಾಖಳಿಸಿ ಮಿಂಚಿದ್ದ ಜಿಟಿ ಕಳೆದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು ಸ್ವಲ್ಪ ಮಟ್ಟಿಗೆ ಹಿನ್ನೆಡೆ ಅನುಭವಿಸಿದೆ.
ಮೈಲಿಗಲ್ಲುಗಳ ಮೇಕೆ ಕಣ್ಣಿಟ್ಟಿರುವ ಎರಡು ತಂಡಗಳ ಆಟಗಾರರ ವಿವರ
* ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಐಪಿಎಲ್‌ನಲ್ಲಿ 100 ಸಿಕ್ಸರ್ ಗಳಿಸಿದ ಆಟಗಾರರ ಪಟ್ಟಿಗೆ ಸೇರುವ ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ಅವರು ಇಂದಿನ ಪಂದ್ಯದಲ್ಲಿ 6 ಸಿಕ್ಸರ್‌ಗಳನ್ನು ಸಿಡಿಸಬೇಕಿದೆ.
* ಗುಜರಾತ್ ಟೈಟನ್ಸ್ ತಂಡದ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಕೂಡ ಮೈಲಿಗಲ್ಲೊಂದರ ಸನಿಹದಲ್ಲಿದ್ದಾರೆ. ಐಪಿಎಲ್‌ನಲ್ಲಿ 50 ಸಿಕ್ಸರ್ ಸಿಡಿಸುವ ಅವಕಾಶ ಗಿಲ್ ಮುಂದಿದೆ. ಇದಕ್ಕಾಗಿ ಇಂದಿನ ಪಂದ್ಯದಲ್ಲಿ 5 ಸಿಕ್ಸರ್ ಬಾರಿಸಬೇಕಿದೆ.
* ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಕೂಡ ಐಪಿಎಲ್‌ನಲ್ಲಿ 50 ಸಿಕ್ಸರ್‌ಗಳನ್ನು ಬಾರಿಸುವ ಅವಕಾಶ ಹೊಂದಿದ್ದಾರೆ ಇದಕ್ಕಾಗಿ ಅವರು ಕೇವಲ 1 ಸಿಕ್ಸರ್‌ನಷ್ಟು ದೂರದಲ್ಲಿದ್ದಾರೆ.
* ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಕೂಡ ಐಪಿಎಲ್‌ನಲ್ಲಿ 50 ಸಿಕ್ಸರ್‌ಗಳನ್ನು ಪೂರೈಸಲು 5 ಸಿಕ್ಸರ್‌ಗಳನ್ನು ಸಿಡಿಸಬೇಕಿದೆ.
* ಗುಜರಾತ್ ಟೈಟನ್ಸ್ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಐಪಿಎಲ್‌ನಲ್ಲಿ 100 ವಿಕೆಟ್ ಮೈಲುಗಲ್ಲು ತಲುಪುವ ಅವಕಾಶವಿದೆ. ಆದರೆ ಇದಕ್ಕೆ ಅವರು ಈ ಪಂದ್ಯದಲ್ಲಿ 6 ವಿಕೆಟ್‌ಗಳನ್ನು ಪಡೆಯಬೇಕಿದೆ.
* ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್‌ರೌಂಡರ್ ಜೇಸನ್ ಹೋಲ್ಡರ್‌ಗೆ ಐಪಿಎಲ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಲು ಇನ್ನೂ 3 ವಿಕೆಟ್‌ಗಳ ಅಗತ್ಯವಿದೆ.
* ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಲು ಇನ್ನೂ 4 ವಿಕೆಟ್‌ಗಳ ಅಗತ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications