Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Lucknow Super Giants logo : ಐಪಿಎಲ್ 2022: ಲಕ್ನೋ ಸೂಪರ್‌ಜಿಯಂಟ್ಸ್ ತಂಡದ ಅಧಿಕೃತ ಲೋಗೋ ಬಿಡುಗಡೆ

IPL 2022, Lucknow logo, Lucknow Supergiants logo, Lucknow SuperGiants official logo unveiled, ಐಪಿಎಲ್ 2022, ಲಕ್ನೋ ಲೋಗೋ, ಲಕ್ನೋ ಸೂಪರ್‌ಜಿಯಂಟ್ಸ್ ಅಧಿಕೃತ ಲೋಗೋ ಬಿಡುಗಡೆ,

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಇನ್ನೂ 3 ತಿಂಗಳು ಬಾಕಿ ಇದ್ದು ಟೂರ್ನಿ ತನ್ನದೇ ಆದ ವಿಶೇಷತೆಗಳಿಂದ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದ ಸದ್ದು ಮಾಡಲು ಆರಂಭಿಸಿದೆ. ಹೌದು, ಕಳೆದ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಿಂದಲೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾದ ಚಟುವಟಿಕೆಗಳು ಆರಂಭವಾಗಿದ್ದು, ಹೊಸದಾಗಿ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆಯಾಯಿತು. ಹೀಗೆ ಈ ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗಿರುವುದರಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಟ್ರೋಫಿಗಾಗಿ 8 ತಂಡಗಳ ಬದಲಾಗಿ ಹತ್ತು ತಂಡಗಳ ನಡುವೆ ಪೈಪೋಟಿ ನಡೆಯಲಿದೆ.

ಐಪಿಎಲ್ 2022: ಹೆಚ್ಚು ಹಣ ಕೇಳಿರುವ ಈ 5 ಆಟಗಾರರು ಟೂರ್ನಿಯಿಂದ ಹೊರಬೀಳುವುದು ಖಚಿತ!

ಹೀಗೆ ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ಫ್ರಾಂಚೈಸಿ ಇನ್ನೂ ಕೂಡ ತನ್ನ ತಂಡದ ಹೆಸರನ್ನು ಘೋಷಿಸಿಲ್ಲ. ಆದರೆ ಲಕ್ನೋ ಫ್ರಾಂಚೈಸಿ ಮಾತ್ರ ಈ ಹಿಂದೆಯಷ್ಟೆ ತನ್ನ ತಂಡದ ಹೆಸರನ್ನು ಘೋಷಣೆ ಮಾಡಿಕೊಂಡಿತ್ತು ಹಾಗೂ ಇದೀಗ ತನ್ನ ತಂಡದ ಲೋಗೋವನ್ನು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆಗೊಳಿಸಿದೆ. ಹೌದು, ಲಕ್ನೋ ಫ್ರಾಂಚೈಸಿ ಲಕ್ನೋ ಸೂಪರ್‌ಜಿಯಂಟ್ಸ್ ಎಂದು ತನ್ನ ತಂಡಕ್ಕೆ ನಾಮಕರಣವನ್ನು ಮಾಡಿತ್ತು. ಸಂಜೀವ್ ಗೊಯಂಕಾ ಮಾಲೀಕತ್ವದ ಲಕ್ನೋ ಫ್ರಾಂಚೈಸಿಗೆ ಈ ಹಿಂದೆ ಇದೇ ಸಂಜೀವ್ ಗೊಯಂಕಾ ಮಾಲೀಕನಾಗಿದ್ದ ರೈಸಿಂಗ್ ಪುಣೆ ಸೂಪರ್‌ಜಿಯಂಟ್ಸ್ ತಂಡದ ಹೆಸರನ್ನೇ ಬಳಸಲಾಗಿದೆ.

ಇದೀಗ ಲಕ್ನೋ ಫ್ರಾಂಚೈಸಿ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ತನ್ನ ಲಕ್ನೋ ಸೂಪರ್‌ಜಿಯಂಟ್ಸ್ ತಂಡದ ಲೋಗೋವನ್ನು ಬಿಡುಗಡೆಗೊಳಿಸಿದ್ದು, ಇದೀಗ ಈ ಲೋಗೋ ಚರ್ಚೆಯ ಕೇಂದ್ರ ಬಿಂದುವಾಗಿದೆ. ಈ ಲೋಗೋ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ ಚೆಂಡನ್ನು ಹೊಂದಿರುವಂತಹ ಬ್ಯಾಟ್ ಮಧ್ಯದಲ್ಲಿದ್ದು, ಅದರ ಎಡ ಬದಿ ಹಾಗೂ ಬಲ ಬದಿಗಳಲ್ಲಿ ತ್ರಿವರ್ಣ ಧ್ವಜದ ರೆಕ್ಕೆಗಳಿವೆ. ಈ ಲೋಗೋದಲ್ಲಿ ಬಳಸಿರುವ ರೆಕ್ಕೆಯ ವಿನ್ಯಾಸವನ್ನು ಹಿಂದೂ ಪುರಾಣದ ಶ್ರೇಷ್ಠ ಪಕ್ಷಿ ಎಂದೇ ಕರೆಸಿಕೊಂಡಿರುವ ಗರುಡನಿಂದ ಸ್ಫೂರ್ತಿ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಈ ರೆಕ್ಕೆಗಳಿಗೆ ಭಾರತ ದೇಶದ ಧ್ವಜದ ಬಣ್ಣಗಳಾದ ಕೇಸರಿ, ಬಿಳಿ ಮತ್ತು ಹಸಿರನ್ನು ಬಳಸಲಾಗಿದ್ದು ಈ ಮೂಲಕ ಲಕ್ನೋ ಸೂಪರ್‌ಜಿಯಂಟ್ಸ್ ತಂಡ ಕೇವಲ ಒಂದು ರಾಜ್ಯದ ತಂಡ ಮಾತ್ರವಲ್ಲ ಬದಲಾಗಿ ಇಡೀ ದೇಶದ ತಂಡ ಎಂಬುದನ್ನು ಪರೋಕ್ಷವಾಗಿ ತಿಳಿಸಲಾಗಿದೆ. ಹಾಗೂ ಈ ಲೋಗೋದಲ್ಲಿ ಪಕ್ಷಿಯ ದೇಹಕ್ಕೆ ನೀಲಿ ಬಣ್ಣವನ್ನು ಬಳಸಲಾಗಿದ್ದು, ಲೋಗೋದಲ್ಲಿ ಬಳಸಲಾಗಿರುವ ಚೆಂಡಿಗೆ ಕೆಂಪು ಬಣ್ಣವನ್ನು ಬಳಸಲಾಗಿದೆ ಮತ್ತು ಇದು ಜೈ ತಿಲಕ ಎಂದು ಲಕ್ನೋ ಸೂಪರ್‌ಜಿಯಂಟ್ಸ್ ಮಾಲೀಕರು ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿ ತಿಳಿಸಿದ್ದಾರೆ.

Virat Kohli ನಾಯಕತ್ವದ ಬಗ್ಗೆ Ponting ಹೇಳಿದ್ದೇನು | Oneindia Kannada

Story first published: Tuesday, February 1, 2022, 10:28 [IST]
Other articles published on Feb 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+