LSG vs KKR: ಪಂದ್ಯದ ಸಂಭಾವ್ಯ ಪ್ಲೇಯಿಂಗ್ 11, ಹೆಡ್ ಟು ಹೆಡ್ ರೆಕಾರ್ಡ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನ 53ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮಖಾಮುಖಿಯಾಗುತ್ತಿವೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಎರಡು ಬಲಿಷ್ಠ ತಂಡಗಳ ಮುಖಾಮುಖಿಗೆ ಅಖಾಡ ಸಜ್ಜಾಗಿದೆ.
ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಆಡಿರುವ 10 ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಜಯಗಳಿಸಿದೆ. ಮೂರು ಪಂದ್ಯಗಳಲ್ಲಿ ಸೋಲನ್ನ ಕಂಡಿರುವ ಲಕ್ನೋ 14 ಪಾಯಿಂಟ್ಸ್ ಕಲೆಹಾಕಿದೆ. ಇನ್ನು ಎದುರಾಳಿ ಕೊಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಲಯ ಕಂಡುಕೊಳ್ಳುವಲ್ಲಿ ವಿಫಲಗೊಂಡಿತು. ಹೀಗಾಗಿ ಆಡಿದ 10 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯ ಜಯಿಸಿ 8 ಪಾಯಿಂಟ್‌ಗಳೊಂದಿಗೆ 8ನೇ ಸ್ಥಾನದಲ್ಲಿದೆ.

ಸತತ 3 ಪಂದ್ಯ ಗೆದ್ದಿರುವ ಲಕ್ನೋ ಸೂಪರ್‌ಜೈಂಟ್ಸ್
ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸತತ ಮೂರು ಪಂದ್ಯ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿತು. ಕಳೆದ ಮೂರು ಪಂದ್ಯದಲ್ಲಿ ಮುಂಬೈ, ಪಂಜಾಬ್ ಮತ್ತು ಡೆಲ್ಲಿ ವಿರುದ್ಧ ಜಯಗಳಿಸಿದೆ.
ಆದ್ರೆ ಕೆಕೆಆರ್ ತಂಡವು ಸತತ ಐದು ಪಂದ್ಯಗಳನ್ನ ಸೋತ ಬಳಿಕ ಕೊನೆಗೂ ರಾಜಸ್ತಾನ್ ರಾಯಲ್ಸ್ ವಿರುದ್ಧ ಪಂದ್ಯವನ್ನ ಜಯಿಸಿದೆ. ಇನ್ನು ಎರಡೂ ತಂಡಗಳ ಮುಖಾಮುಖಿಯ ದಾಖಲೆ ನೋಡುವುದಾದ್ರೆ, ಇದೇ ಮೊದಲ ಬಾರಿಗೆ ಉಭಯ ತಂಡಗಳು ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿವೆ.
PBKS vs RR: ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ಬಲಿಷ್ಠ ತಂಡ ಯಾವುದು?

ಎಲ್‌ಎಸ್‌ಜಿ ಮತ್ತು ಕೆಕೆಆರ್ ಕೀ ಪ್ಲೇಯರ್ಸ್
ಲಕ್ನೋ ಸೂಪರ್ ಜೈಂಟ್ಸ್ ಪರ ಕೆ.ಎಲ್ ರಾಹುಲ್ ಮತ್ತು ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಕೀ ಪ್ಲೇಯರ್‌ಗಳಾಗಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಪರ ಶ್ರೇಯಸ್ ಅಯ್ಯರ್ ಮತ್ತು ಸ್ಫೋಟಕ ಆಲ್‌ರೌಂಡರ್ ಆ್ಯಂಡ್ರ್ಯೂ ರೆಸೆಲ್ ಪ್ರಮುಖ ಆಟಗಾರರಾಗಿದ್ದಾರೆ.
ಈ ಪಂದ್ಯದಲ್ಲಿ ಮೊಹ್ಸಿನ್ ಖಾನ್ ವರ್ಸಸ್ ನಿತಿಶ್ ರಾಣಾ, ಉಮೇಶ್ ಯಾದವ್ ವರ್ಸಸ್ ಕೆ.ಎಲ್ ರಾಹುಲ್ ಮುಖಾಮುಖಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಪಂದ್ಯವು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ರಾತ್ರಿ 7.30ಕ್ಕೆ ನಡೆಯಲಿದ್ದು, 7 ಗಂಟೆಗೆ ಟಾಸ್ ಆಗಲಿದೆ.
PBKS vs RR: ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ಬಲಿಷ್ಠ ತಂಡ ಯಾವುದು?

ಎಲ್‌ಎಸ್‌ಜಿ ಮತ್ತು ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ 11
LSG: ಕೆ.ಎಲ್ ರಾಹುಲ್, ಕ್ವಿಂಟನ್ ಡಿಕಾಕ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಮಾರ್ಕಸ್ ಸ್ಟೊಯ್ನಿಸ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಜೇಸನ್ ಹೋಲ್ಡರ್, ದುಶ್ಮಂತ ಚಮೀರ, ಮೊಹ್ಸಿನ್ ಖಾನ್, ರವಿ ಬಿಷ್ನೋಯಿ
KKR: ಆ್ಯರೋನ್ ಫಿಂಚ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್, ಬಾಬಾ ಇಂದ್ರಜಿತ್(ವಿಕೆಟ್ ಕೀಪರ್), ನಿತಿಶ್ ರಾಣಾ, ಅಂಕುಲ್ ರಾಯ್, ಆ್ಂಡ್ರೆ ರಸೆಲ್, ರಿಂಕು ಸಿಂಗ್, ಉಮೇಶ್ ಯಾದವ್, ಟಿಮ್ ಸೌಥಿ, ಶಿವಂ ಮಾವಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications