ಶ್ರೇಷ್ಠ ಟಿ20 ಆಟಗಾರ ಈತನೇ: ಐಪಿಎಲ್ ಮೆಗಾ ಆಕ್ಷನ್‌ನಲ್ಲಿ ದುಬಾರಿ ಆಟಗಾರನನ್ನು ಹೆಸರಿಸಿದ ಚೋಪ್ರ

ಮುಂದಿನ ಬಾರಿಯ ಐಪಿಎಲ್‌ಗೆ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಮೂಲಕ ಮುಂದಿನ ಐಪಿಎಲ್‌ನಲ್ಲಿ ಎಲ್ಲಾ ತಂಡಗಳು ಬಹುತೇಕ ಹೊಸ ಸ್ವರೂಪದೊಂದಿಗೆ ಕಣಕ್ಕಿಳಿಯಲಿದೆ. ಮಹಾ ಹರಾಜಿಗೂ ಮುನ್ನ ಯಾವೆಲ್ಲಾ ಆಟಗಾರರನ್ನು ತಂಡಗಳು ರೀಟೈನ್ ಮಾಡಿಕೊಳ್ಳಲಿದೆ ಎಂಬುದು ಕೂಡ ಸದ್ಯಕ್ಕಿರುವ ಕುತೂಹಲವಾಗಿದೆ. ಅದಾದ ನಂತರ ಹರಾಜಿನಲ್ಲಿ ಯಾವ್ಯಾವ ಆಟಗಾರರು ಎಷ್ಟೆಷ್ಟು ಮೊತ್ತವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವೂ ಮನೆ ಮಾಡಿದೆ.

ಟಿ20 ವಿಶ್ವಕಪ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ ಭಾರತೀಯ ಕ್ರಿಕೆಟ್ ತಮಡದ ಮಾಜಿ ಆಟಗಾರ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲಲ್ಇ ಅವರು ಈ ಬಾರಿಯ ಐಪಿಎಲ್ ಮಹಾ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತವನ್ನು ಜೇಬಿಗಿಳಿಸುವ ಆಟಗಾರ ಯಾರಾಗಲಿದ್ದಾರೆ ಎಂದು ಊಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾದ ಈ ಆಟಗಾರ ಸದ್ಯ ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಎಂದು ಬಣ್ಣಿಸಿದ್ದಾರೆ.

ನಾನು ಯಾವಾಗಲೂ ನಿಮ್ಮ ನಂ.1 ಫ್ಯಾನ್: ABD ನಿವೃತ್ತಿ ಸುದ್ದಿ ಕೇಳಿ ತೀವ್ರ ನೊಂದುಕೊಂಡ ವಿರಾಟ್ ಕೊಹ್ಲಿನಾನು ಯಾವಾಗಲೂ ನಿಮ್ಮ ನಂ.1 ಫ್ಯಾನ್: ABD ನಿವೃತ್ತಿ ಸುದ್ದಿ ಕೇಳಿ ತೀವ್ರ ನೊಂದುಕೊಂಡ ವಿರಾಟ್ ಕೊಹ್ಲಿ

ಚುಟುಕು ಮಾದರಿಯಲ್ಲಿ ಭಾರತದ ಅತ್ಯುತ್ತಮ ಆಟಗಾರ ಯಾರು?

ಚುಟುಕು ಮಾದರಿಯಲ್ಲಿ ಭಾರತದ ಅತ್ಯುತ್ತಮ ಆಟಗಾರ ಯಾರು?

ಭಾರತದಲ್ಲಿ ಟಿ20 ಕ್ರಿಕೆಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್ ವಿಭಾಗದ ಶ್ರೇಷ್ಠ ಮೂವರು ಆಟಗಾರರಾಗಿದ್ದಾರೆ. ಈ ಮೂವರು ಟೀಮ್ ಇಂಡಿಯಾದ ಪ್ರಮುಖ ಭಾಗವಾಗಿದ್ದಾರೆ. ಹೀಗಾಗಿ ಈ ಮೂವರಲ್ಲಿ ಶ್ರೇಷ್ಠ ದಾಂಡಿಗರನ್ನು ಆಯ್ಕೆ ಮಾಡುವುದು ಕಠಿಣ ಕೆಲಸ. ಆಕಾಶ್ ಚೋಪ್ರ ಈ ಮೂವರ ಮಧ್ಯೆ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿದ್ದು ಟಿ20 ಮಾದರಿಯಲ್ಲಿ ರಾಹುಲ್ ಅತ್ಯುತ್ತಮ ಆಟಗಾರ ಎಂದಿದ್ದಾರೆ.

ದುಬಾರಿ ಆಟಗಾರನಾಗಲಿದ್ದಾರೆ ಕೆಎಲ್

ದುಬಾರಿ ಆಟಗಾರನಾಗಲಿದ್ದಾರೆ ಕೆಎಲ್

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ಪ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ಬಿಡುಗಡೆಗೊಳಿಸಿದರೆ ರಾಹುಲ್ ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರನಾಗಲಿದ್ದಾರೆ ಎಂದು ಆಕಾಶ್ ಚೋಪ್ರ ಹೇಳಿಕೊಂಡಿದ್ದಾರೆ.

ಪ್ರಶಂಸೆ ವ್ಯಕ್ತಪಡಿಸಿದ ಆಕಾಶ್ ಚೋಪ್ರ

ಪ್ರಶಂಸೆ ವ್ಯಕ್ತಪಡಿಸಿದ ಆಕಾಶ್ ಚೋಪ್ರ

ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನು ಆಡಿದರು. "ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಎಂತಾ ಅದ್ಭುತವಾದ ಹೊಂದಾಣಿಯನ್ನು ಹೊಂದಿದ್ದಾರೆ. ವಿಶೇಷವಾಗಿ ಕೆಎಲ್ ರಾಹುಲ್ ಬಗ್ಗೆ ನಾನು ಮತ್ತೆ ಹೇಳುತ್ತೇನೆ, ಆತ ಭಾರತದ ಅತ್ಯುತ್ತಮ ಟಿ20 ಆಟಗಾರ. ಆತನಿಗಿಂತ ಅತ್ಯುತ್ತಮವಾದ ಬ್ಯಾಟರ್ ಭಾರತದಲ್ಲಿ ಬೇರೆ ಯಾರೂ ಇಲ್ಲ. ಆತ ಮುಂದಿನ ಐಪಿಎಲ್ ಹರಾಜಿಗೆ ಹರಾಜು ಪಟ್ಟಿಗೆ ಹೋದರೆ ಆತನೇ ಅತ್ಯಂತ ದುಬಾರಿ ಆಟಗಾರನಾಗಲಿದ್ದಾರೆ" ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.

ರಾಹುಲ್ ಫಾರ್ಮ್‌ ಬಗ್ಗೆ ಚೋಪ್ರ ಮಾತು

ರಾಹುಲ್ ಫಾರ್ಮ್‌ ಬಗ್ಗೆ ಚೋಪ್ರ ಮಾತು

"ಇನ್ನು ಇದೇ ಸಂದರ್ಭದಲ್ಲಿ ಕೆಎಲ್ ರಾಹುಲ್ ಅವರ ಅದ್ಭುತ ಫಾರ್ಮ್ ಬಗ್ಗೆ ಮಾತನಾಡಿದ ಚೋಪ್ರ "ಆತ ಈಗ ಅಮೋಘ ಫಾರ್ಮ್‌ನಲ್ಲಿದ್ದಾರೆ. ಕಳೆದ ಐದು ಪಂದ್ಯಗಳಲ್ಲಿ ಗಮನಿಸಿದರೆ ಆತ ಮೂರು-ನಾಲ್ಕು ಅರ್ಧ ಶತಕ ಬಾರಿಸಿದ್ದಾರೆ. ಆತ ಪಾಕಿಸ್ತಾನ ಹಾಘೂ ನ್ಯೂಜಿಲೆಡ್ ವಿರುದ್ಧ ರನ್ ಗಳಿಸಿಲ್ಲ ಎಂಬುದು ಗೊತ್ತಿದೆ. ಆದರೂ ಆತನ ಫಾರ್ಮ್ ಮಾತ್ರ ಈಗ ಮತ್ತೊಂದು ಹಂತದಲ್ಲಿದೆ" ಎಂದಿದ್ದಾರೆ. ಇನ್ನು ವೇಗದ ಬೌಲರ್‌ಗಳ ಎಸೆತಕ್ಕೆ ಕವರ್‌ನತ್ತ ಸಿಕ್ಸರ್ ಬಾರಿಸುವ ರೀತಿ ಅದ್ಭುತ. ಎಷ್ಟೇ ವೇಗದ ಬೌಲಿಂಗ್ ದಾಳಿಗೂ ಅವರು ಸುಂದರವಾಗಿ ಸಕ್ಸರ್ ಬಾರಿಸುತ್ತಾರೆ" ಎಂದಿದ್ದಾರೆ ಆಕಾಶ್ ಚೋಪ್ರ.

For Quick Alerts
ALLOW NOTIFICATIONS
For Daily Alerts
Story first published: Sunday, November 21, 2021, 12:39 [IST]
Other articles published on Nov 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X