
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬೃಹತ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರ ಹರಾಜು ಜರುಗಲಿದ್ದು, ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಹರಾಜಾದ ಮೊದಲನೇ ಆಟಗಾರ ಶಿಖರ್ ಧವನ್.
ಚುಟುಕು ಕ್ರಿಕೆಟ್ ಕದನದಲ್ಲಿ ವೇಗವಾಗಿ ಬ್ಯಾಟ್ ಬೀಸಬಲ್ಲ ಆರಂಭಿಕ ಆಟಗಾರ ಶಿಖರ್ ಧವನ್ 2 ಕೋಟಿ ಮೂಲಬೆಲೆಯೊಂದಿಗೆ ಈ ಬಾರಿಯ ಮೆಗಾ ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಶಿಖರ್ ಧವನ್ ಮೇಲೆ ಸಾಲು ಸಾಲು ಬಿಡ್ಡಿಂಗ್ ನಡೆಸಿದವು. ಅಂತಿಮವಾಗಿ ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 8.25 ಕೋಟಿ ರುಪಾಯಿಗೆ ಖರೀದಿ ಮಾಡಿದೆ. ಅಂತಿಮ ಹಂತದವರೆಗೂ ಶಿಖರ್ ಧವನ್ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ನೋಡಿದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೊನೆಯ ಹಂತದಲ್ಲಿ ಶಿಖರ್ ಧವನ್ ಅವರನ್ನು ಖರೀದಿ ಮಾಡುವುದರಿಂದ ಹಿಂದೆ ಸರಿಯಿತು.