Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: ಸ್ಟೀವ್ ಸ್ಮಿತ್ ಮತ್ತು ಮಿಸ್ಟರ್ ಐಪಿಎಲ್ ಖರೀದಿಸಲು ಯಾರೂ ಮುಂದೆ ಬರಲೇ ಇಲ್ಲ!

IPL 2022 Mega Auction: Suresh Raina and Steve Smith are Go Unsold

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬೃಹತ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರ ಹರಾಜು ಜರುಗಲಿದೆ. ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕುತೂಹಲ ಮೂಡಿಸಿದ್ದ ಆಟಗಾರರ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಿಂದ ರಿಟೈನ್ ಆಗದೇ ಹೊರಬಿದ್ದಿದ್ದ ಸುರೇಶ್ ರೈನಾ ಕೂಡ ಓರ್ವ. ಹೌದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಪ್ರಮುಖ ಆಟಗಾರ ಎನಿಸಿಕೊಂಡಿದ್ದ ಸುರೇಶ್ ರೈನಾ ರಿಟೈನ್ ಆಗದೆ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ಮೂಲಬೆಲೆಯೊಂದಿಗೆ ನೋಂದಾಯಿಸಿಕೊಂಡಿದ್ದರು. ಸುರೇಶ್ ರೈನಾ ಮೇಲೆ ಇತರೆ ಫ್ರಾಂಚೈಸಿಗಳು ದೊಡ್ಡ ಮಟ್ಟದಲ್ಲಿಯೇ ಬಿಡ್ ಮಾಡಲಿವೆ ಎಂಬ ನಿರೀಕ್ಷೆಗಳು ಇದ್ದವು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸುರೇಶ್ ರೈನಾ ಮೇಲೆ ಹಣ ಹೂಡಿ ಮತ್ತೆ ತಂಡಕ್ಕೆ ಕರೆ ತರಲಿದೆ ಎನ್ನುವ ನಿರೀಕ್ಷೆಗಳು ಸಹ ಇದ್ದವು.

ಆದರೆ ಬೇರೆ ಫ್ರಾಂಚೈಸಿಗಳಾಗಲಿ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಾಗಲಿ ಸುರೇಶ್ ರೈನಾ ಮೇಲೆ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಮಾಡಲು ಮುಂದಾಗಲೇ ಇಲ್ಲ. 2 ಕೋಟಿ ಮೂಲಬೆಲೆಯೊಂದಿಗೆ ಭಾಗವಹಿಸಿದ್ದ ಸುರೇಶ್ ರೈನಾ ಬಿಕರಿಯಾಗದೇ ಉಳಿದಿದ್ದು, ಆಶ್ಚರ್ಯವನ್ನು ಮೂಡಿಸಿದೆ. ಅದರ ಜೊತೆಗೆ ಆಸ್ಟ್ರೇಲಿಯಾ ಮೂಲದ ಸ್ಟೀವನ್ ಸ್ಮಿತ್ ಕೂಡ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ತಂಡದಿಂದಲೂ ಕೂಡ ಖರೀದಿಸಲ್ಪಡದೇ ಅನ್ ಸೋಲ್ಡ್ ಆಗಿದ್ದಾರೆ. ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿದಿದ್ದ ಸ್ಟೀವ್ ಸ್ಮಿತ್ ಕೇವಲ 8 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು.

Story first published: Saturday, February 12, 2022, 13:59 [IST]
Other articles published on Feb 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+