Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs KKR: ಐಪಿಎಲ್‌ನಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಪಡೆದ ಬುಮ್ರಾ

jasprit bumrah

ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಅಕ್ಷರಶಃ ಅಬ್ಬರಿಸಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐದು ವಿಕೆಟ್‌ಗಳ ಗೊಂಚಲು ಪಡೆದ ಬುಮ್ರಾ ದಾಳಿಗೆ ಕೆಕೆಆರ್ ತತ್ತರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್‌ಗಳಷ್ಟೇ ಕಲೆಹಾಕಿತು. ಪವರ್‌ಪ್ಲೇ ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ ನಷ್ಟಕ್ಕೆ 60 ರನ್ ಕಲೆಹಾಕಿದ್ದ ಕೆಕೆಆರ್‌ಗೆ ಕಡಿವಾಣ ಹಾಕಿದ್ದು ಮುಂಬೈ ಪ್ರೈಮ್ ಬೌಲರ್ ಜಸ್ಪ್ರೀತ್ ಬುಮ್ರಾ.

18ನೇ ಓವರ್‌ನಲ್ಲಿ ಮೇಡನ್ ಸೇರಿದಂತೆ ಮೂರು ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದು ಕೇವಲ ಐಪಿಎಲ್‌ ಅಷ್ಟೇ ಅಲ್ಲದೆ ಟಿ20 ಫಾರ್ಮೆಟ್‌ನಲ್ಲಿ ಬುಮ್ರಾ ಬೆಸ್ಟ್ ಫಿಗರ್ ಆಗಿದೆ.

4 ಓವರ್‌ಗೆ ಕೇವಲ 10 ರನ್‌ ನೀಡಿ 1 ಮೇಡನ್ ಸೇರಿದಂತೆ 5 ವಿಕೆಟ್ ಪಡೆದ ದಾಖಲೆಯನ್ನ ಬುಮ್ರಾ ಮಾಡಿದ್ದಾರೆ. ಅದ್ರಲ್ಲೂ ಕೊನೆಯ ಓವರ್‌ನಲ್ಲಿ ಕೇವಲ 1 ರನ್‌ ನೀಡಿದ ಬುಮ್ರಾ ಬೌಲಿಂಗ್ ದಾಳಿಗೆ ಕೆಕೆಆರ್‌ 165ರನ್‌ಗಳಿಸಲಷ್ಟೇ ಶಕ್ತವಾಯಿತು.

2020ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 14 ರನ್‌ ನೀಡಿ 4 ವಿಕೆಟ್ ಪಡೆದಿದ್ದು ಬುಮ್ರಾರ ಇದುವರೆಗಿನ ಬೆಸ್ಟ್ ಬೌಲಿಂಗ್ ಆಗಿತ್ತು.

ಮುಂಬೈ ಸೋಲಿಗೆ ರೋಹಿತ್ ಶರ್ಮಾ ಹೊಣೆ ಹಾಕಿದ್ದು ಯಾರ ಮೇಲೆ? | Oneindia Kannada

Story first published: Tuesday, May 10, 2022, 9:23 [IST]
Other articles published on May 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+