Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG vs MI: ಕೆ.ಎಲ್ ರಾಹುಲ್ ಮತ್ತೊಂದು ಶತಕ, ಮುಂಬೈ ಇಂಡಿಯನ್ಸ್‌ಗೆ 169ರನ್ ಟಾರ್ಗೆಟ್‌

KL Rahul

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅಮೋಘ ಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್‌ 6 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿದೆ. ಈ ಮೂಲಕ ಮುಂಬೈ ಇಂಡಿಯನ್ಸ್‌ 169ರನ್ ಟಾರ್ಗೆಟ್‌ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ 10 ರನ್‌ಗೆ ಜಸ್ಪ್ರೀತ್‌ ಬುಮ್ರಾಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ನಾಯಕ ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆಗೆ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ್ರು.

ಕೆ.ಎಲ್ ರಾಹುಲ್ ಅಬ್ಬರದ ಆಟವಾಡಿದ್ರೆ, ಮನೀಶ್ ಪಾಂಡೆ 22 ಎಸೆತಗಳಲ್ಲಿ 22 ರನ್ ಕಲೆಹಾಕಿ ಕಿರಾನ್ ಪೊಲಾರ್ಡ್‌ ಬೌಲಿಂಗ್‌ನಲ್ಲಿ ಔಟಾದ್ರೆ, ಇದ್ರ ಬೆನ್ನಲ್ಲೇ ಲಕ್ನೋ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿತು. ಮಾರ್ಕಸ್ ಸ್ಟೋಯ್ನಿಸ್ 0, ಕೃನಾಲ್‌ ಪಾಂಡ್ಯ 1ರನ್‌ಗೆ ಬೇಗನೆ ವಿಕೆಟ್ ಒಪ್ಪಿಸಿದ್ರು.

ದೀಪಕ್ ಹೂಡ ಆಟ ಕೂಡ 10 ರನ್‌ಗೆ ಮುಕ್ತಾಯವಾಯಿತು. ಆದ್ರೆ ಕೆ.ಎಲ್ ರಾಹುಲ್ ನಾಯಕನ ಆಟವಾಡುವ ಮೂಲಕ ಅಬ್ಬರಿಸಿದ್ರು. ಕೇವಲ 61 ಎಸೆತಗಳಲ್ಲಿ ಕೆ.ಎಲ್ ರಾಹುಲ್ ಪ್ರಸಕ್ತ ಸೀಸನ್‌ನಲ್ಲಿ ಎರಡನೇ ಶತಕ ಹಾಗೂ ಒಟ್ಟಾರೆ ಐಪಿಎಲ್‌ನಲ್ಲಿ ನಾಲ್ಕನೇ ಶತಕ ಸಿಡಿಸಿದ ಸಾಧನೆ ಮಾಡಿದ್ರು. ಇನ್ನು ವಿಶೇಷ ಅಂದ್ರೆ ಮುಂಬೈ ಇಂಡಿಯನ್ಸ್ ವಿರುದ್ಧವೇ ರಾಹುಲ್ ಎರಡನೇ ಶತಕ ದಾಖಲಿಸಿದ್ದಾರೆ.

ಕೊನೆಯಲ್ಲಿ ಯುವ ಬ್ಯಾಟರ್ ಆಯುಷ್ ಬದೋನಿ 14 ರನ್‌ಗಳ ಕೊಡುಗೆ ಜೊತೆಗೆ ಕೆ.ಎಲ್ ರಾಹುಲ್ 62 ಎಸೆತಗಳಲ್ಲಿ ಅಜೇಯ 103 ರನ್ ಕಲೆಹಾಕಿದರು. ಲಕ್ನೋ ಸೂಪರ್ ಜೈಂಟ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕುವಷ್ಟು ಶಕ್ತವಾಯಿತು. ಕೊನೆಯ ಎರಡು ಎಸೆತಗಳಲ್ಲಿ ಜೇಸನ್‌ ಹೋಲ್ಡರ್ ರನ್ ಕಲೆಹಾಕಲು ವಿಫಲರಾದರು.

8 ಸೋಲಿನೊಂದಿಗೆ IPL ಟೂರ್ನಿಯಿಂದ ಹೊರ ಬಿದ್ದಿದ್ದಕ್ಕೆ ರೋಹಿತ್ ಶರ್ಮಾ ಏನಂದ್ರು ನೋಡಿ | Oneindia Kannada

Story first published: Sunday, April 24, 2022, 21:38 [IST]
Other articles published on Apr 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+