For Quick Alerts
ALLOW NOTIFICATIONS  
For Daily Alerts
 

Covid in IPL 2022: ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್: ವಿದೇಶಿ ಆಟಗಾರ ಮಿಚೆಲ್ ಮಾರ್ಷ್‌ಗೆ ಕೋವಿಡ್-19 ಪಾಸಿಟಿವ್ ?

Mitchel marsh

ಐಪಿಎಲ್ 2022ರ ಸೀಸನ್‌ಗೆ ಕೊರೊನಾ ಕಾಟ ಶುರುವಾದಂತಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ ವಿದೇಶಿ ಆಟಗಾರ ಮಿಚೆಲ್‌ ಮಾರ್ಷ್‌ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೊರೊನಾ ಭೀತಿಗೆ ಒಳಗಾಗಿದ್ದು, ಅಭ್ಯಾಸ ಪಂದ್ಯವನ್ನ ತ್ಯಜಿಸಿ ಸಂಪೂರ್ಣ ತಂಡದ ಆಟಗಾರರು ಕ್ವಾರಂಟೈನ್ ಆಗಿದ್ದಾರೆ.

ತಂಡದ ಫಿಸಿಯೋ ಪ್ಯಾಟ್ರಿಕ್ ಪರ್ಹಾರ್ಟ್‌ ಕೋವಿಡ್-19 ಪಾಸಿಟಿವ್ ಆಗಿದ್ದರ ಪರಿಣಾಮ ಐಸೋಲೆಟ್ ಆಗಿದ್ದರು. ಹೀಗಾಗಿ ಪ್ರತಿಯೊಬ್ಬ ಆಟಗಾರರು ಕೋವಿಡ್-19 ಪಾಸಿಟಿವ್ ಪರೀಕ್ಷೆಗೆ ಒಳಪಡುವ ಮುನ್ನ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‌ನಲ್ಲಿ ಮಿಚೆಲ್ ಮಾರ್ಷ್‌ ಪಾಸಿಟಿವ್ ಆಗಿದ್ದಾನೆ. ಹೀಗಾಗಿ ಆರ್‌ಟಿಪಿಸಿಆರ್‌ ಟೆಸ್ಟ್ ಫಲಿತಾಂಶ ಬರುವವರೆಗೂ ಡೆಲ್ಲಿ ಕ್ಯಾಪಿಟಿಲ್ಸ್ ಕಾಯ್ದಿದ್ದು, ಇದೀಗ ಫಲಿತಾಂಶ ಪಾಸಿಟಿವ್ ಆಗಿದೆ.

ಕೋವಿಡ್-19 ಕೇಸ್ ತಂಡದಲ್ಲಿ ಕಾಣಿಸಿಕೊಂಡಿರುವ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್‌ನ ಎಲ್ಲಾ ಆಟಗಾರರು ಹೋಟೆಲ್‌ನ ರೂಂನಲ್ಲಿಯೇ ಉಳಿದುಕೊಂಡಿದ್ದಾರೆ. ಪ್ರತಿ ರೂಂಗಳಿಗೆ ತೆರಳಿ ಎಲ್ಲಾ ಆಟಗಾರರ ಕೋವಿಡ್-19 ಟೆಸ್ಟ್ ಮಾಡಲಾಗುವುದು. ಹೀಗಾಗಿ ಇಂದು ಪುಣೆಗೆ ತೆರಳಬೇಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಿನದ ಪ್ರಯಾಣವನ್ನ ರದ್ದುಗೊಳಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಬುಧವಾರ (ಏಪ್ರಿಲ್ 20) ರಂದು ಪಂಜಾಬ್ ಕಿಂಗ್ಸ್‌ ವಿರುದ್ಧ ಪುಣೆಯಲ್ಲಿ ಪಂದ್ಯವನ್ನಾಡಲಿದೆ. ಆದ್ರೆ ಈಗ ಕೋವಿಡ್-19 ಕೇಸ್‌ಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಿಸಿಸಿಐ ಬುಧವಾರ ನಡೆಯಲಿರುವ ಪಂದ್ಯದ ಕುರಿತು ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನ ನಿರ್ಧರಿಸಲಿದೆ. ಒಂದು ವೇಳೆ ಡೆಲ್ಲಿ ಪರ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದ್ದೇ ಆದಲ್ಲಿ ಪಂದ್ಯ ಮುಂದೂಡುವ ಸಾಧ್ಯತೆಯು ಇದೆ.

ಕಳೆದ ಐಪಿಎಲ್ ಸೀಸನ್‌ನಲ್ಲಿ ಕೋವಿಡ್-19 ಕೇಸ್ ಹೆಚ್ಚಾದ ಪರಿಣಾಮ ಟೂರ್ನಿಯನ್ನ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಎರಡನೇ ಹಂತದಲ್ಲಿ ಪಂದ್ಯಗಳನ್ನ ದುಬೈನಲ್ಲಿ ನಡೆಸಿ ಯಶಸ್ವಿಯಾಯಿತು.

Story first published: Monday, April 18, 2022, 17:26 [IST]
Other articles published on Apr 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+