
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇದೇ ತಿಂಗಳ 26ರಿಂದ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರನ್ನರ್ ಅಪ್ ತಂಡ ಎನಿಸಿಕೊಂಡಿದ್ದ ಕೋಲ್ಕತ್ತ ನೈಟ್ ರೈಡರ್ಸ್ ಸೆಣಸಾಟ ನಡೆಸಲಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಮಾರ್ಚ್ 26ರ ಶನಿವಾರದಂದು ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಇನ್ನೂ 20 ದಿನಗಳು ಬಾಕಿ ಇರುವಾಗಲೇ ಸೂರತ್ ತಲುಪಿರುವ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಹೌದು, ಸೂರತ್ ನಗರದ ಲಾಲ್‌ಭಾಯ್ ಕಂಟ್ರ್ಯಾಕ್ಟರ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಅಭ್ಯಾಸವನ್ನು ಆರಂಭಿಸಿದ್ದು, ನಾಯಕ ಎಂಎಸ್ ಧೋನಿ ಈ ನೆಟ್ ಅಭ್ಯಾಸದ ವೇಳೆ ದೊಡ್ಡ ದೊಡ್ಡ ಹೊಡೆತಗಳನ್ನು ಬಾರಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಎಂಎಸ್ ಧೋನಿ 3 ಹೊಡೆತಗಳನ್ನು ಬಾರಿಸಿದ್ದು, ಮೂರನೇ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದಾರೆ. ಹೀಗೆ ತಮ್ಮ ನೆಚ್ಚಿನ ಕ್ರಿಕೆಟಿಗ ಮತ್ತೆ ಕಣಕ್ಕಿಳಿದು ಪಂದ್ಯಗಳಲ್ಲಿ ಭಾಗವಹಿಸುವುದನ್ನು ನೋಡಲು ಕಾಯುತ್ತಿದ್ದ ಎಂಎಸ್ ಧೋನಿ ಅಭಿಮಾನಿಗಳು ಸದ್ಯ ಧೋನಿ ಅವರ ಈ ವಿಡಿಯೋ ಕಂಡು ಸಂತಸ ಪಡುತ್ತಿದ್ದಾರೆ.
ಸಿಎಸ್‌ಕೆ ವೇಳಾಪಟ್ಟಿ:
ಮಾರ್ಚ್ 26: ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಸಂಜೆ 7.30, ವಾಂಖೆಡೆ ಸ್ಟೇಡಿಯಂ
ಮಾರ್ಚ್ 31: ಚೆನ್ನೈ ಸೂಪರ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ 7.30PM, ಬ್ರಬೋರ್ನ್
ಏಪ್ರಿಲ್ 3: ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್, 7.30PM, ಬ್ರಬೋರ್ನ್
ಏಪ್ರಿಲ್ 9: ಚೆನ್ನೈ ಸೂಪರ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್, ಮಧ್ಯಾಹ್ನ 3.30, ಡಿವೈ ಪಾಟೀಲ್ ಸ್ಟೇಡಿಯಂ
ಏಪ್ರಿಲ್ 12: ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾತ್ರಿ 7.30, ಡಿವೈ ಪಾಟೀಲ್ ಸ್ಟೇಡಿಯಂ
ಏಪ್ರಿಲ್ 17: ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ರಾತ್ರಿ 7.30, ಎಂಸಿಎ ಸ್ಟೇಡಿಯಂ - ಪುಣೆ
ಏಪ್ರಿಲ್ 21: ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ ರಾತ್ರಿ 7.30, ಡಿವೈ ಪಾಟೀಲ್ ಸ್ಟೇಡಿಯಂ
ಏಪ್ರಿಲ್ 25: ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ ಸಂಜೆ 7.30, ವಾಂಖೆಡೆ ಸ್ಟೇಡಿಯಂ
ಮೇ 1: ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದರಾಬಾದ್, ರಾತ್ರಿ 7.30, ಎಂಸಿಎ ಸ್ಟೇಡಿಯಂ, ಪುಣೆ
ಮೇ 4: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾತ್ರಿ 7.30, ಎಂಸಿಎ ಸ್ಟೇಡಿಯಂ - ಪುಣೆ
ಮೇ 8: ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ರಾತ್ರಿ 7.30, ಡಿವೈ ಪಾಟೀಲ್ ಸ್ಟೇಡಿಯಂ
ಮೇ 12: ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ಸಂಜೆ 7.30, ವಾಂಖೆಡೆ ಸ್ಟೇಡಿಯಂ
ಮೇ 15: ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟನ್ಸ್, ಮಧ್ಯಾಹ್ನ 3.30, ವಾಂಖೆಡೆ ಸ್ಟೇಡಿಯಂ
ಮೇ 20: ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ರಾತ್ರಿ 7.30, ಬ್ರಬೋರ್ನ್