IPL 2022: ಜಡೇಜಾ ಹೆಸರಿಗಷ್ಟೇ ಕ್ಯಾಪ್ಟನ್, ಬಹುತೇಕ ನಿರ್ಧಾರ ತೆಗೆದುಕೊಳ್ಳುತ್ತಿರುವ ಧೋನಿ!

40 ವರ್ಷದ ಅನುಭವಿ ವಿಕೆಟ್‌ಕೀಪರ್ ಎಂಎಸ್ ಧೋನಿ ಬಹುಶಃ ತಮ್ಮ ಕೊನೆಯ ಐಪಿಎಲ್ ಟೂರ್ನಿಯನ್ನು ಆಡುತ್ತಿದ್ದಾರೆ. ಹೀಗಾಗಿ ಸಿಎಸ್‌ಕೆ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಿ ಲೀಗ್ ಉದ್ದಕ್ಕೂ ಅವರಿಗೆ ಕ್ಯಾಪ್ಟನ್ಸಿ ಪಾಠ ಮಾಡುವ ಲೆಕ್ಕಾಚಾರದೊಂದಿಗೆ ಈ ಮಹತ್ವದ ನಿರ್ಧಾರ ತೆಗೆದುಂಡಿದ್ದರು. ಆದ್ರೆ ಕಳೆದ ಲಕ್ನೋ ವಿರುದ್ಧದ ಪಂದ್ಯವನ್ನ ಗಮನಿದ್ರೆ, ಧೋನಿ ಬಹುತೇಕ ನಿರ್ಧಾರಗಳನ್ನ ಸ್ವತಃ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗರಾದ ಅಜಯ್ ಜಡೇಜಾ ಮತ್ತು ಪಾರ್ಥಿವ್ ಪಟೇಲ್, ಸಿಎಸ್‌ಕೆ ತಂಡದಲ್ಲಿನ ಕ್ಯಾಪ್ಟನ್ಸಿ ಗೊಂದಲವನ್ನು ಪ್ರಶ್ನೆ ಮಾಡಿದ್ದಾರೆ. ತಂಡದಲ್ಲಿನ ಬಹುಪಾಲು ನಿರ್ಧಾರಗಳನ್ನು ಎಂಎಸ್ ಧೋನಿಯೇ ತೆಗೆದುಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ರವೀಂದ್ರ ಜಡೇಜಾ ಹೆಸರಿಗಷ್ಟೇ ಕ್ಯಾಪ್ಟನ್ ಎಂಬಂತೆ ಕಾಣಿಸುತ್ತಿದ್ದು, ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಳಿತಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಗುರುವಾರ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 210 ರನ್‌ಗಳ ಬೃಹತ್ ಮೊತ್ತ ದಾಖಲಿಸಿದರೂ, ಲಖನೌ ಸೂಪರ್ ಜೈಂಟ್ಸ್ ಸುಲಭವಾಗಿ ಟಾರ್ಗೆಟ್ ಬೆನ್ನತ್ತಿತು.
ಈ ಪಂದ್ಯ ಸೋಲಿಗೆ ಪ್ರಮುಖ ಕಾರಣ 19ನೇ ಓವರ್. ಈ ಹಂತದಲ್ಲಿ ಧೋನಿ ಆಲ್ ರೌಂಡರ್ ಶಿವಂ ದುಬೆ ಅವರನ್ನು 19ನೇ ಓವರ್ ಬೌಲ್ ಮಾಡಲು ಕರೆದರು. ಆ ಓವರ್‌ನಲ್ಲಿ 2 ಸಿಕ್ಸರ್, 2 ಬೌಂಡರಿ ಸೇರಿದಂತೆ 25 ರನ್ ಗಳಿಸಲಾಯಿತು. ಎವಿನ್ ಲೂಯಿಸ್ - ಆಯುಷ್ ಬದೋನಿ ಜೋಡಿ ದುಬೆ ಅವರ ಓವರ್‌ನಲ್ಲಿ ಅಬ್ಬರಿಸಿದ್ರು.

ಹೀಗಾಗಿ 19ನೇ ಓವರ್ ಅನ್ನು ಆಲ್ ರೌಂಡರ್ ದುಬೆಗೆ ಬೌಲಿಂಗ್ ಮಾಡಲು ನೀಡಿ ಧೋನಿ ತಪ್ಪು ಮಾಡಿದ್ದಾರೆ ಎಂದು ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಜಡೇಜಾ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಶಿಸಿದ್ದಾರೆ.
ಆದ್ರೆ ಟೀಮ್ ಇಂಡಿಯಾದಲ್ಲೂ ಧೋನಿ ಇದೇ ರೀತಿ ಮಾಡಿ ವಿರಾಟ್ ಕೊಹ್ಲಿಗೆ ನಾಯಕತ್ವ ಕೊಟ್ಟಿದ್ದರು. ಹೀಗಾಗಿ ಸಿಎಸ್‌ಕೆ ತಂಡದಲ್ಲಿ ಕ್ಯಾಪ್ಟನ್ ಜಡೇಜಾ ಆದರೂ ಬಹುತೇಕ ಎಲ್ಲ ನಿರ್ಧಾರಗಳನ್ನು ಧೋನಿಯೇ ತೆಗೆದುಕೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications