ಐಪಿಎಲ್ 2022: ಮೆಗಾ ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ತಂಡ ಹೇಗಿದೆ?

ಮುಂಬರುವ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸದ್ಯ 2 ದಿನಗಳ ಕಾಲ ನಡೆದ ಮೆಗಾ ಹರಾಜು ಈ ಟೂರ್ನಿ ಕುರಿತಾದ ಚರ್ಚೆ ಮತ್ತು ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಯಾವ ಆಟಗಾರರನ್ನು ಯಾವ ಫ್ರಾಂಚೈಸಿಗಳು ಖರೀದಿಸಲಿವೆ ಎಂಬ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಇನ್ನು ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ತಂಡದ ಬಹುತೇಕ ಆಟಗಾರರನ್ನು ಕೈಬಿಟ್ಟಿದ್ದ ಫ್ರಾಂಚೈಸಿಗಳು ಮತ್ತೆ ಅದೇ ಆಟಗಾರರನ್ನು ಹರಾಜಿನಲ್ಲಿ ತಮ್ಮ ತೆಕ್ಕೆಗೆ ಹಾಕಿಕೊಳ್ಳಲಿವೆಯಾ ಎಂಬ ಪ್ರಶ್ನೆಗಳು ಎದ್ದಿದ್ದವು. ಅದರಲ್ಲಿಯೂ ಹೆಚ್ಚಾಗಿ ಆಟಗಾರರನ್ನು ಬದಲಾಯಿಸದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳು ತಾವು ಕೈಬಿಟ್ಟ ಆಟಗಾರರನ್ನು ಹರಾಜಿನಲ್ಲಿ ಮತ್ತೆ ಖರೀದಿಸಲಿವೆ ಎಂಬ ಊಹೆ ಹೆಚ್ಚು ಮಂದಿಯಲ್ಲಿತ್ತು. ಅಭಿಮಾನಿಗಳ ಈ ಊಹೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ಕೂಡ ಭಾಗಶಃ ನಿಜಮಾಡಿವೆ ಎಂದೇ ಹೇಳಬಹುದು. ಅದರಲ್ಲಿಯೂ ಮುಂಬೈ ಇಂಡಿಯನ್ಸ್ ಇದೇ ಮೊದಲ ಬಾರಿಗೆ ಹರಾಜು ಪ್ರಕ್ರಿಯೆಯಲ್ಲಿ ಆಟಗಾರನೋರ್ವನಿಗೆ ಹತ್ತು ಕೋಟಿಗೂ ಹೆಚ್ಚು ಹಣವನ್ನು ಹೂಡಿ ಖರೀದಿಸಿದ ದಾಖಲೆಯನ್ನು ಬರೆಯಿತು. ಹೌದು, ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ ಅವರನ್ನು ಮತ್ತೆ ತಂಡದಲ್ಲಿ ಹೊಂದಲು ಜಿದ್ದಾಜಿದ್ದಿನ ಹೋರಾಟ ನಡೆಸಿ 15.25 ಕೋಟಿಗೆ ಖರೀದಿಸಿತು.
ಹೀಗೆ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಆಟಗಾರನೋರ್ವನಿಗೆ ಅತಿಹೆಚ್ಚು ಹಣ ಹೂಡಿದ ಫ್ರಾಂಚೈಸಿ ಎನಿಸಿಕೊಂಡ ಮುಂಬೈ ಇಂಡಿಯನ್ಸ್ ಮೆಗಾ ಹರಾಜಿಗೂ ಮುನ್ನ 48 ಕೋಟಿ ಮೊತ್ತವನ್ನು ತನ್ನ ಬಳಿ ಹೊಂದಿತ್ತು. ಇನ್ನು 2 ದಿನಗಳ ಮೆಗಾ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರ ಮುಂಬೈ ಇಂಡಿಯನ್ಸ್ ತನ್ನ ಖಾತೆಯಲ್ಲಿ ಇನ್ನೂ 10 ಲಕ್ಷ ಹಣವನ್ನು ಹೊಂದಿದೆ. ಹೀಗೆ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಮುಂಬೈ ಇಂಡಿಯನ್ಸ್ ತಂಡ ಹೇಗಿದೆ, ಯಾವ ಆಟಗಾರರನ್ನು ಹೊಂದಿದೆ ಮತ್ತು ಎಷ್ಟು ಸ್ವದೇಶಿ ಹಾಗೂ ವಿದೇಶಿ ಆಟಗಾರರನ್ನು ಹೊಂದಿದೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ..

ಹರಾಜಿನ ನಂತರ ಮುಂಬೈ ಇಂಡಿಯನ್ಸ್ ತಂಡ ಹೀಗಿದೆ
ಮೆಗಾ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರು: ರೋಹಿತ್ ಶರ್ಮಾ, ಕೀರಾನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ಬಾಸಿಲ್ ಥಂಪಿ, ಎಂ ಅಶ್ವಿನ್, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಾಂಡೆ, ತಿಲಕ್ ವರ್ಮಾ, ಸಂಜಯ್ ಯಾದವ್, ರಿಲೆ ಮೆರೆಡಿತ್, ಮೊಹಮ್ಮದ್ ಅರ್ಷದ್ ಖಾನ್, ಅನ್ಮೋಲ್‌ಪ್ರೀತ್ ಸಿಂಗ್, ರಾಹುಲ್, ರಮಣ್‌ದೀಪ್ ಸಿಂಗ್, ರಾಹುಲ್ ಬುದ್ಧಿ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಲ್, ಫ್ಯಾಬಿಯನ್ ಅಲೆನ್

ತಂಡದಲ್ಲಿರುವ ಸ್ವದೇಶಿ ಆಟಗಾರರು ಎಷ್ಟು?
ಮೆಗಾ ಹರಾಜು ಮುಕ್ತಾಯಗೊಂಡ ನಂತರ ಮುಂಬೈ ಇಂಡಿಯನ್ಸ್ 25 ಆಟಗಾರರನ್ನು ಹೊಂದಿದ್ದು, ಈ ಪೈಕಿ 17 ಭಾರತೀಯ ಆಟಗಾರರಿದ್ದರೆ, 8 ವಿದೇಶಿ ಆಟಗಾರರಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ಹಲವು ಯುವ ಭಾರತೀಯ ಕ್ರಿಕೆಟಿಗರಿಗೆ ಅವಕಾಶ ನೀಡಿರುವುದರ ಕುರಿತು ತುಂಬಾ ದೊಡ್ಡ ಮಟ್ಟದ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

ಮಾರಕ ಬೌಲಿಂಗ್ ದಾಳಿ
ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗಾಗಲೇ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಬಲ್ಲಂತಹ ಜಸ್ಪ್ರೀತ್ ಬುಮ್ರಾ ಇದ್ದಾರೆ. ಇದೀಗ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಮತ್ತೋರ್ವ ಮಾರಕ ವೇಗಿ ಜೋಫ್ರಾ ಆರ್ಚರ್ ಅವರನ್ನು ಖರೀದಿಸಿದ್ದು, ಜಸ್ಪ್ರೀತ್ ಬುಮ್ರಾ ಮತ್ತು ಜೋಫ್ರಾ ಆರ್ಚರ್ ಮಾರಕ ಬೌಲಿಂಗ್ ದಾಳಿ ಎದುರಾಳಿ ತಂಡಗಳಿಗೆ ಮತ್ತಷ್ಟು ಕಂಟಕವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications