IPL 2022: ಬಲಿಷ್ಠ ತಂಡಗಳ ಎದುರು 2 ಪಂದ್ಯ ಆಡಲು ಮುಂಬೈಗೆ ಇಷ್ಟವಿಲ್ಲ: ಆಕಾಶ್ ಚೋಪ್ರಾ

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಅತ್ಯಂತ ಯಶಸ್ವಿ ತಂಡ ಹಾಗೂ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಗ್ರೂಪ್ ಹಂತದಲ್ಲಿ ಅಷ್ಟು ಸಂತೋಷವಾಗಿಲ್ಲ ಎಂದು ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನ 15ನೇ ಸೀಸನ್ ಮಾರ್ಚ್ 26ರಂದು ಆರಂಭವಾಗಲಿದೆ. ಈ ಬಾರಿಯ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಗುಂಪು ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ವಿಶೇಷವಾಗಿ ಈ ಬಾರಿ ಎರಡು ಗುಂಪುಗಳಲ್ಲಿ ಟೂರ್ನಿ ಆಯೋಜಿಸಲಾಗಿದೆ. ಪ್ರತಿ ತಂಡವು 14 ಪಂದ್ಯಗಳನ್ನು ಆಡಲಿದ್ದು, ಏಳು ಸ್ಥಳೀಯ ಪಂದ್ಯಗಳು ಮತ್ತು 7 ಇತರೆ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.
ಪ್ರತಿ ಗುಂಪಿನಲ್ಲಿ ಐದು ತಂಡಗಳು ಇದ್ದು, ಪ್ರತಿ ತಂಡಗಳು ತಲಾ ಎರಡು ಬಾರಿ ಮುಖಾಮುಖಿಯಾಗಲಿವೆ. ಬಿ ಗ್ರೂಪ್‌ಗಿಂತ ಎ ಗ್ರೂಪ್ ಪ್ರಬಲವಾಗಿವೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೇರಿಕೊಂಡಿದೆ.
ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಸೇರಿಕೊಂಡಿದೆ.
ಹೀಗೆ 10 ತಂಡಗಳನ್ನು ವಾಸ್ತವಿಕವಾಗಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ಐದು ತಂಡಗಳನ್ನು ಎರಡು ಬಾರಿ ಮತ್ತು ಉಳಿದ ನಾಲ್ಕು ತಂಡಗಳ ವಿರುದ್ಧ ಒಮ್ಮೆ ಆಡುತ್ತದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಕೊಲ್ಕತ್ತಾ, ರಾಜಸ್ತಾನ್, ಡೆಲ್ಲಿ, ಲಕ್ನೋ ಸೂಪರ್‌ಜಾಯಿಂಟ್ಸ್ ವಿರುದ್ಧ ಎರಡು ಪಂದ್ಯವಾಡಿದ್ರೆ, ಹೈದ್ರಾಬಾದ್, ಆರ್‌ಸಿಬಿ, ಪಂಜಾಬ್ ವಿರುದ್ಧ ಒಂದು ಪಂದ್ಯವನ್ನಷ್ಟೇ ಆಡಲಿದೆ.
"ಮುಂಬೈ ಎರಡು ಬಾರಿ ಕೋಲ್ಕತ್ತಾ, ರಾಜಸ್ಥಾನ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ವಿರುದ್ಧ ಆಡಲಿದೆ. ಇಷ್ಟಲ್ಲದೆ ಅವರು ಬಿ ಗುಂಪಿನ ಸಿಎಸ್‌ಕೆ ವಿರುದ್ಧ ಎರಡು ಬಾರಿ ಆಡಲಿದ್ದಾರೆ. ಹೀಗಾಗಿ ಅವರು ಎಲ್ಲಾ ಕಠಿಣ ತಂಡಗಳನ್ನು ಎರಡು ಬಾರಿ ಆಡುತ್ತಾರೆ, ಆದರೆ ಸನ್‌ರೈಸರ್ಸ್, ಆರ್‌ಸಿಬಿ, ಪಂಜಾಬ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಒಮ್ಮೆ ಮಾತ್ರ ಆಡುತ್ತಾರೆ. ಹೀಗಾಗಿ ಇದು ಅವರಿಗೆ ಇಷ್ಟವಿಲ್ಲ ಎಂದು ನಾನು ಭಾವಿಸುತ್ತೇನೆ'' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಇತ್ತೀಚಿನ ಐಪಿಎಲ್ ಗ್ರೂಪ್‌ಗಳ ಬಗ್ಗೆ ಮಾತನಾಡಿದ ಚೋಪ್ರಾ, ಇದು ಐಪಿಎಲ್ 2011 ರಂತೆಯೇ ಇದೆ, ಇದು ವಿಶ್ವಕಪ್‌ಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ.
IPL 2022 ಸೀಸನ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ ಮತ್ತು ಮೇ 29 ರಂದು ಫೈನಲ್ ನಡೆಯಲಿದೆ. ಬರೋಬ್ಬರಿ 70 ಲೀಗ್ ಪಂದ್ಯಗಳು ಮಹಾರಾಷ್ಟ್ರ ನಗರಗಳಾದ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications