IPL 2022: ಮುಂಬೈ ಇಂಡಿಯನ್ಸ್ ಸತತ ಸೋಲಿಗೆ ಕಾರಣವೇನು?: ಪ್ರಾಮಾಣಿಕವಾಗಿ ಒಪ್ಪಿಕೊಂಡ ನಾಯಕ ರೋಹಿತ್ ಶರ್ಮಾ

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಅತ್ಯಂತ ಕಳಪೆ ಆರಂಭವನ್ನು ಪಡೆದಿದೆ. ಟೂರ್ನಿಯಲ್ಲಿ ಈವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು ಈ ಎಲ್ಲಾ ನಾಲ್ಕು ಪಂದ್ಯಗಳಲ್ಲಿಯೂ ರೋಹಿತ್ ಶರ್ಮಾ ಪಡೆ ಸೋಲು ಅನುಭವಿಸಿದೆ. ಈ ಸೋಲು ತಂಡವನ್ನು ಸಹಜವಾಗಿಯೇ ಕಂಗೆಡಿಸಿದೆ. ಆದರೆ ಇಂತಾ ಪರಿಸ್ಥಿತಿಗಳನ್ನು ಎದುರಿಸಿಯೂ ಯಶಸ್ಸು ಸಾಧಿಸಿದ ಕೆಲ ಉದಾಹರಣೆಗಳನ್ನು ಮುಂಬೈ ಇಂಡಿಯನ್ಸ್ ತಂಡವೇ ಹೊಂದಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ತಿರುಗಿ ಬೀಳುವ ಆತ್ಮ ವಿಶ್ವಾಸವನ್ನು ಎಂಐ ವ್ಯಕ್ತಪಡಿಸುತ್ತಿದೆ.

ಇನ್ನು ಈ ಸತತ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. ತಂಡದ ಪ್ರದರ್ಶನದ ಬಗ್ಗೆ ಸಹಜವಾಗಿಯೇ ಬೇಸರಗೊಂಡಿರುವ ಶರ್ಮಾ ತಂಡ ಎಡವಿದ್ದೆಲ್ಲಿ ಎಂದು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಒಂದು ವಿಚಾರವಾಗಿ ತಂಡ ತನ್ನ ತಪ್ಪನ್ನು ಸರಿಪಡಿಸಿಕೊಂಡರೆ ಮುಂದಿನ ಪಂದ್ಯಗಳಲ್ಲಿ ತಮ್ಮ ತಂಡ ತನ್ನ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂದಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ.
ಹಾಗಾದರೆ ರೋಹಿತ್ ಶರ್ಮಾ ತಂಡದ ಸೋಲಿಗೆ ಯಾವುದು ಕಾರಣ ಎಂದು ವಿವರಿಸಿದ್ದಾರೆ? ಯಾವ ವಿಚಾರವಾಗಿ ತಂಡ ಎಡವುತ್ತಿದೆ ಎಂದು ಶರ್ಮಾ ಒಪ್ಪಿಕೊಂಡಿದ್ದಾರೆ ಮುಂದೆ ಓದಿ..

ತಂಡದ ಸೋಲಿನ ಬಗ್ಗೆ ವಿಮರ್ಶೆ
ಶನಿವಾರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 7 ವಿಕೆಟ್‌ಗಳ ಅಂತರದ ಭಾರೀ ಸೋಲು ಅನುಭವಿಸಿದೆ. ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಂಡ ಸತತವಾಗಿ ಹಿನ್ನಡೆ ಅನುಭವಿಸುತ್ತಿರುವುದಕ್ಕೆ ಒಂದು ಪ್ರಮುಖ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ತಂಡ ಒಗ್ಗಟ್ಟಿನ ಪ್ರದರ್ಶನ ನೀಡಲು ವಿಫಲವಾಗುತ್ತಿರುವುದು ಈ ಸತತ ಸೋಲಿಗೆ ಕಾರಣ ಎಂದಿದ್ದಾರೆ ರೋಹಿತ್ ಶರ್ಮಾ. ಎಲ್ಲಾ ವಿಭಾಗದಲ್ಲಿಯೂ ಒಗ್ಗಟ್ಟಿದ ಪ್ರದರ್ಶನ ತಂಡಕ್ಕೆ ಅಗತ್ಯವಿದೆ ಎಂದಿದ್ದಾರೆ ಎಂಐ ನಾಯಕ.

ಒಗ್ಗಟ್ಟಿದ ಪ್ರದರ್ಶನ ಗೆಲುವಿಗೆ ಅಗತ್ಯ
ಆರ್‌ಸಿಬಿ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ರೋಹಿತ್ ಶರ್ಮಾ "ನಾನು ಯಾವಾಗಲೂ ಒಗ್ಗಟ್ಟಿನ ಪ್ರದರ್ಶನದ ಬಗ್ಗೆ ಮಾತನಾಡುತ್ತಿರುತ್ತೇನೆ. ಇದು ಬ್ಯಾಟ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಮುಂಬೈ ಇಂಡಿಯನ್ಸ್ ತಂಡದ ಹಿನ್ನಡೆಗೆ ಕಾರಣವಾಗುತ್ತಿದೆ. ನಾವು ಯಾವಾಗ ಇದನ್ನು ಸಾಧಿಸಲು ಸಾಧ್ಯತವಾಗುತ್ತದೆಯೋ ನಾವು ಉತ್ತಮವಾಗುತ್ತೇವೆ" ಎಂದು ಸೋಲಿನ ಬಗ್ಗೆ ಪ್ರಾಮಾಣಿಕ ವಿಮರ್ಶೆ ಮಾಡಿಕೊಂಡಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ.

ಮಧ್ಯಮ ಕ್ರಮಾಂಕದಿಂದ ಮತ್ತೊಂದು ಆಘಾತ
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ನಂತರ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಮೊದಲ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಜೋಡಿ ಐವತ್ತು ರನ್‌ಗಳ ಜೊತೆಯಾಟವನ್ನು ನೀಡಿತ್ತು. ಆದರೆ ಈ ಜೋಡಿ ಬೇರ್ಪಟ್ಟ ನಂತರ ಮುಂಬೈ ಇಂಡಿಯನ್ಸ್ ಆಘಾತಕಾರಿ ಕುಸಿತ ಕಂಡಿತು. 79/6 ವಿಕೆಟ್ ಕಳೆದುಕೊಮಡು ಹೀನಾಯ ಸ್ಥಿತಿಗೆ ತಲುಪಿತ್ತು ಮುಂಬೈ ಇಂಡಿಯನ್ಸ್. ಇಂಥಾ ಸಂದರ್ಭದಲ್ಲಿ ಮುಂಬೈ ತಂಡಕ್ಕೆ ನೆರವಾಗಿದ್ದು ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ. ಈ ಪ್ರದರ್ಶನದಿಂದಾಗಿ 150ರ ಗಡಿದಾಟಲು ರೋಹಿತ್ ಪಡೆಗೆ ಸಾಧ್ಯವಾಯಿತು.

ಸೂರ್ಯಕುಮಾರ್ ಯಾದವ್ ಪ್ರದರ್ಶನದ ಬಗ್ಗೆ ಶರ್ಮಾ ಮೆಚ್ಚುಗೆ
"ನಾನು ಕೇವಲ 26 ರನ್‌ಗಳಿಸಿ ವಿಕೆಟ್ ಕಳೆದುಕೊಂಡೆ. ಸಾಧ್ಯವಾದಷ್ಟು ಹೆಚ್ಚು ಕಾಲ ಬ್ಯಾಟಿಂಗ್ ನಡೆಸುವುದು ನನ್ನ ಉದ್ದೇಶವಾಗಿತ್ತು. ಆದರೆ ಕೆಟ್ಟ ಸಮಯದಲ್ಲಿ ನಾನು ವಿಕೆಟ್ ಕಳೆದುಕೊಂಡೆ. ನಾವು 50 ರನ್‌ಗಳ ಜೊತೆಯಾಟವನ್ನು ನಡೆಸಿದೆವು. ಖಂಡಿತವಾಗಿಯೂ ಇದು 150 ರನ್‌ಗಳ ಪಿಚ್ ಆಗಿರಲಿಲ್ಲ. ಆದರೆ ನಾವು ಸ್ವಲ್ಪ ಎಚ್ಚರರಿಕೆಯ ಬ್ಯಾಟಿಂಗ್ ನಡೆಸಿದ್ದರೆ ನಾವು ಗಳಿಸಿದ್ದಕ್ಕಿಂತ ಹೆಚ್ಚಿನ ರನ್ ಗಳಿಸಬಹುದಾಗಿತ್ತು ಎಂಬುದನ್ನು ಸೂರ್ಯ ತೋರಿಸಿಕೊಟ್ಟಿದ್ದಾರೆ. ನಾವು ಕನಿಷ್ಟ 150ರ ಗಡಿ ದಾಡಲು ಸಾಧ್ಯವಾಗಿದ್ದಕ್ಕೆ ಎಲ್ಲಾ ಶ್ರೇಯಸ್ಸು ಸೂರ್ಯಕುಮಾರ್ ಯಾದವ್‌ಗೆ ಸಲ್ಲಬೇಕು. ಆದರೆ ಇದು ಮುಂದಕ್ಕೆ ಸಾಕಾಗುವುದಿಲ್ಲ ಎಂಬುದು ನಮಗೆ ತಿಳಿದಿದೆ" ಎಂದು ರೋಹಿತ್ ಶರ್ಮಾ ಪಂದ್ಯದ ಸೋಲಿನ ಬಗ್ಗೆ ಮಾತನಾಡುತ್ತಾ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications