Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಇಂಡಿಯನ್ಸ್‌ನ ತಿಲಕ್ ವರ್ಮಾ ಸಾಕಷ್ಟು ಪ್ರಬುದ್ಧತೆ ತೋರಿಸಿದ್ದಾರೆ: ರವಿಶಾಸ್ತ್ರಿ

Thilak verma

ಮುಂಬೈ ಇಂಡಿಯನ್ಸ್ ತಂಡದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಐಪಿಎಲ್ 2022ರಲ್ಲಿ ವಿಭಿನ್ನ ಶಾಟ್ ಸೆಲೆಕ್ಷನ್ ಮೂಲಕ ಗಮನಸೆಳೆದಿದ್ದಾರೆ. ಟೀಂ ಇಂಡಿಯಾ ಮಾಜಿಕೋಚ್ ರವಿಶಾಸ್ತ್ರಿ ಕೂಡ ತಿಲಕ್ ವರ್ಮಾ ಪ್ರದರ್ಶನ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿಕ್ಕ ವಯಸ್ಸಿನಲ್ಲೇ ತಿಲಕ್ ವರ್ಮಾ ಸಾಕಷ್ಟು ಪ್ರಬುದ್ಧತೆ ಮತ್ತು ಶಾಂತತೆ ತೋರಿದ್ದಾರೆ ಎಂದು ಹೊಗಳಿದ್ದಾರೆ.

ರಾಜಸ್ತಾನ್ ರಾಯಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ತಿಲಕ್ ವರ್ಮಾ 33 ಎಸೆತಗಳಲ್ಲಿ 61 ರನ್ ಸಿಡಿಸುವ ಮೂಲಕ ಮಿಂಚಿದ್ದರು. ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರಾಜಸ್ತಾನ್ ರಾಯಲ್ಸ್ ವಿರುದ್ಧ 23 ರನ್‌ಗಳಿಂದ ಸೋಲನ್ನ ಕಂಡಿತು.

ಸ್ಟಾರ್‌ ಸ್ಪೋರ್ಟ್ಸ್ ಲೈವ್ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಾಸ್ತ್ರಿ '' ಆತ ಎರಡು ಇನ್ನಿಂಗ್ಸ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಸಾಕಷ್ಟು ಬದ್ಧತೆ ತೋರಿದ್ದಾನೆ. ಆತ ವಿಭಿನ್ನ ವೈಡ್ ರೇಂಜ್ ಶಾಟ್ ಸೆಲೆಕ್ಷನ್‌ಗೆ ಮೂಲಕ ಎಲ್ಲರ ಗಮನಸೆಳೆದಿದ್ದು, ಬ್ಯಾಕ್ ಫೂಟ್, ಸ್ವೀಪ್ ಜೊತೆಗೆ ಶಾಟ್‌ಗಳಲ್ಲಿ ಸಾಕಷ್ಟು ವೇರಿಯೇಷನ್ ಸಹ ಹೊಂದಿದ್ದಾನೆ. ಆತನ ಬಾಡಿ ಲಾಂಗ್ವೆಜ್ ಮತ್ತು ಆಡುವ ಶೈಲಿಯಿಂದಲೇ ಆತ ಒಳ್ಳೆಯ ಆಟಗಾರ ಎಂಬುದು ತಿಳಿದು ಬರುತ್ತದೆ. ಆತ ಅತ್ಯಂತ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದ್ದು, ಬೆಳೆಯುವ ಎಲ್ಲಾ ಲಕ್ಷಣ ತೋರಿದ್ದಾನೆ'' ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಜೊತೆಗೆ ತಿಲಕ್ ವರ್ಮಾ ಜೊತೆಗೂಡಿದರೆ ಮುಂಬೈ ಇಂಡಿಯನ್ಸ್ ಮಿಡಲ್ ಆರ್ಡರ್ ಮತ್ತಷ್ಟು ಬಲಿಷ್ಠವಾಗಲಿದೆ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ಆಡಿರುವ ಎರಡು ಪಂದ್ಯಗಳಲ್ಲಿ ಸೋಲನ್ನ ಕಂಡಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಮುಗ್ಗರಿಸಿತು. ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಪಂದ್ಯವನ್ನಾಡಲಿದ್ದಾರೆ.

ಪ್ಯಾಟ್ ಕಮಿನ್ಸ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದ KL ರಾಹುಲ್ ರೆಕಾರ್ಡ್ ಬ್ರೇಕ್ | Oneindia Kannada

Story first published: Thursday, April 7, 2022, 9:59 [IST]
Other articles published on Apr 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+