For Quick Alerts
ALLOW NOTIFICATIONS  
For Daily Alerts
 

IPL 2022: MI vs KKR: ದೊಡ್ಡ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್, ಬೂಮ್ರಾ, ಶ್ರೇಯಸ್

IPL 2022: Mumbai Indians vs Kolkata Knight Riders players records and approaching milestones

ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಇಂದು ತಂಡಗಳು ಇಂದು ಐಪಿಎಲ್‌ನಲ್ಲಿ ಮುಖಾಮುಖಿಯಾಗಲಿದೆ. ಮುಂಬೈ ಇಂಡಿಯನ್ಸ್ ಈಗಾಗಲೇ ಈ ಟೂರ್ನಿಯಿಂದ ಹೊರಬಿದ್ದಿರುವುದರಿಂದಾಗಿ ಯಾವುದೇ ಒತ್ತಡವಿಲ್ಲದೆ ಆಡಲಿದೆ. ಆದರೆ ಕೆಕೆಆರ್ ಸತತ ಸೋಲಿನಿಂದಾಗಿ ಭಾರೀ ಆಘಾತಕ್ಕೆ ಒಳಗಾಗಿದ್ದು ಸೋಲಿನ ಹಿನ್ನೆಡೆ ಅನುಭವಿಸಿದೆ. ಆಡಿದ ಅಂತಿಮ ಪಂದ್ಯದಲ್ಲಿಯೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದೆ ಕೆಕೆಆರ್.

ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಈವರೆಗೆ 30 ಪಂದ್ಯಗಳಲ್ಲಿ ಆಡಿದ್ದು ಇದರಲ್ಲಿ ಮುಂಬೈ ಇಂಡಿಯನ್ಸ್ ಕೆಕೆಆರ್ ವಿರುದ್ಧ ಭಾರೀ ಅಂತರದ ಮೇಲುಗೈ ಸಾಧಿಸಿದೆ. 22 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದ್ದು 8 ಪಂದ್ಯಗಳಲ್ಲಿ ಮಾತ್ರವೇ ಕೆಕೆಆರ್ ಗೆದ್ದುಕೊಂಡಿದೆ.

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರು ಕೆಲ ಮೈಲಿಗಲ್ಲುಗಳ ಸನಿಹದಲ್ಲಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

* ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ 5000 ರನ್‌ಗಳಿಸುವ ಸನಿಹದಲ್ಲಿದ್ದಾರೆ. ಇದಕ್ಕಾಗಿ ರೋಹಿತ್ ಶರ್ಮಾ 88 ರನ್‌ಗಳನ್ನು ಗಳಿಸಬೇಕಿದೆ.
*ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ಇಂದಿನ ಪಂದ್ಯದಲ್ಲಿ 5 ಸಿಕ್ಸರ್ ಸಿಡಿಸಿದರೆ ಪ್ರಮುಖ ಮೈಲಿಗಲ್ಲೊಂದನ್ನು ದಾಟಲಿದ್ದಾರೆ. ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎಂಎಸ್ ಧೋನಿ ಅವರನ್ನು ಹಿಂದಿಕ್ಕುವ ಅವಕಾಶ ಪೊಲಾರ್ಡ್‌ಗೆ ಇದೆ. ಎಂಎಸ್ ಧೋನಿ 226 ಸಿಕ್ಸರ್ ಸಿಡಿಸಿದ್ದರೆ ಪೊಲಾರ್ಡ್ ಐಪಿಎಲ್‌ನಲ್ಲಿ 222 ಸಿಕ್ಸರ್ ಸಿಡಿಸಿದ್ದಾರೆ.

* ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಈವರೆಗೆ ಐಪಿಎಲ್‌ನಲ್ಲಿ 6 ಮೇಡನ್ ಓವರ್‌ಗಳನ್ನು ಎಸೆದಿದ್ದಾರೆ. ಇಂದಿನ ಪಂದ್ಯದಲ್ಲಿ ಬೂಮ್ರಾ ಮತ್ತೊಂದು ಮೇಡನ್ ಓವರ್ ಎಸೆಯಲು ಸಾಧ್ಯವಾದರೆ ಟ್ರೆಂಟ್ ಬೋಲ್ಡ್ ಹಾಗೂ ಡೇಲ್ ಸ್ಟೇನ್ ಅವರ 7 ಮೇಡನ್ ಓವರ್‌ಗಳ ಸಾಧನೆಯನ್ನು ಸರಿಗಟ್ಟಲಿದ್ದಾರೆ. ಸದ್ಯ ಬೂಮ್ರಾ 6 ಮೇಡನ್ ಓವರ್‌ಗಳೊಂದಿಗೆ ಹರ್ಭಜನ್ ಸಿಂಗ್, ಇಶಾಂತ್ ಶರ್ಮಾ, ದೀಪಕ್ ಚಾಹರ್ ಮತ್ತು ಅಮಿತ್ ಮಿಶ್ರಾ ಅವರೊಂದಿಗೆ ಸಮ ಸಾಧನೆ ಮಾಡಿದ್ದಾರೆ.

* ಕೆಕೆಆರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ 2000 ರನ್ ಪೂರೈಸುವ ಸನಿಹದಲ್ಲಿದ್ದಾರೆ. ಇದಕ್ಕಾಗಿ ಅವರು 21 ರನ್‌ಗಳನ್ನು ಗಳಿಸಬೇಕಿದೆ.

* ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ನಿತೀಶ್ ರಾಣಾ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪರವಾಗಿ 150 ಬೌಂಡರಿಗಳನ್ನು ಪೂರ್ಣಗೊಳಿಸಲು ಇನ್ನೂ 4 ಬೌಂಡರಿಗಳ ಅಗತ್ಯವಿದೆ.

* ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಲು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್‌ಗೆ ಇನ್ನೂ 4 ಸಿಕ್ಸರ್‌ಗಳ ಅಗತ್ಯವಿದೆ.

Story first published: Monday, May 9, 2022, 14:56 [IST]
Other articles published on May 9, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+