Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಶೀದ್ ಖಾನ್‌ರನ್ನ SRH ರೀಟೈನ್ ಮಾಡದೆ ಇರಲು, ಕಾರಣ ತಿಳಿಸಿದ ಮುತ್ತಯ್ಯ ಮುರಳೀಧರನ್

Rashid khan

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀನಸ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ರಶೀದ್ ಖಾನ್‌ರನ್ನ ರೀಟೈನ್ ಮಾಡದೇ ಇರುವುದಕ್ಕೆ ಕಾರಣ ಏನೆಂದು ತಂಡದ ಸ್ಪಿನ್ ಕೋಚ್ ಮುತ್ತಯ್ಯ ಮುರಳೀಧರನ್ ಬಹಿರಂಗಪಡಿಸಿದ್ದಾರೆ.

ಎಸ್‌ಆರ್‌ಎಚ್‌ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದ ರಶೀದ್ ಖಾನ್ ಪ್ರಮುಖ ವಿಕೆಟ್ ಟೇಕರ್ ಆಗಿದ್ದು, ಹಲವು ಸೀಸನ್‌ಗಳಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದ್ರೆ ಐಪಿಎಲ್ 2022ರಲ್ಲಿ ರಶೀದ್ ಖಾನ್‌ರನ್ನ ಗುಜರಾತ್ ಟೈಟನ್ಸ್‌ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇತ್ತೀಚೆಗಷ್ಟೇ ನಡೆದ ಪ್ರಸ್ತುತ ಸೀಸನ್‌ನ 21ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸನ್‌ರೈಸರ್ಸ್ ಹೈದ್ರಾಬಾದ್ ತಂಡವು ಗೆಲುವು ಸಾಧಿಸಿತು. ಅದ್ರಲ್ಲೂ ಗುಜರಾತ್ ಟೈಟನ್ಸ್‌ ಸೀಸನ್‌ನಲ್ಲಿ ಒಂದು ಪಂದ್ಯವನ್ನ ಸಹ ಸೋತಿರಲಿಲ್ಲ. ಆದ್ರೆ ಹೈದ್ರಾಬಾದ್ ತಂಡವು ಗುಜರಾತ್ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.

ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದ ವೇಳೆ ಮಾತನಾಡಿದ ಅವರು, "ನಾವು ರಶೀದ್ ಖಾನ್ ಅವರನ್ನು ಬಿಟ್ಟುಕೊಡಲು ಬಯಸಲಿಲ್ಲ. ಆದ್ರೆ ಗುಜರಾತ್ ಟೈಟನ್ಸ್ ಪರ 15 ಕೋಟಿಯ ದಿಗ್ಭ್ರಮೆಗೊಳಿಸುವ ಮೊತ್ತಕ್ಕೆ ರಶೀದ್‌ಗೆ ಸಹಿ ಹಾಕಿದರು. ಅಷ್ಟು ದೊಡ್ಡ ಮೊತ್ತ ಕೊಟ್ಟು ರೀಟೈನ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ'' ಎಂದು ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.

ರಶೀದ್ ಅವರು ಎಸ್‌ಆರ್‌ಎಚ್ ತಂಡವನ್ನ ಬಿಡುವುದಕ್ಕೂ ಮೊದಲು ಎಸ್‌ಆರ್‌ಎಚ್‌ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಎಸ್‌ಆರ್‌ಎಚ್‌ ಪರ ಅವರು 76 ಪಂದ್ಯಗಳಲ್ಲಿ 93 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ಗುಜರಾತ್ ಟೈಟನ್ಸ್ ಪರ ಆಡುತ್ತಿರುವ ರಶೀದ್ ಖಾನ್ ನಾಲ್ಕು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ.

Dewald Brevis ಒಂದೇ ಓವರ್‌ನಲ್ಲಿ 4 ಸಿಕ್ಸರ್ | Brevis show against Punjab | Oneindia Kannada

Story first published: Thursday, April 14, 2022, 10:07 [IST]
Other articles published on Apr 14, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+