ಅರೇ, ಯಾರೀಕೆ! ಐಪಿಎಲ್ 2022ರಲ್ಲಿ ಗಮನ ಸೆಳೆದ 'ಮಿಸ್ಟರಿ ಗರ್ಲ್' !

ಇಂಡಿಯನ್ ಪ್ರೀಮೀಯರ್ ಲೀಗ್ ಶುರುವಾಗುತ್ತಿದ್ದಂತೆ ಮೈದಾನದಲ್ಲಿ ಸಿಕ್ಸರ್, ಬೌಂಡರಿ ಅಬ್ಬರದ ಜೊತೆಗೆ ಪಂದ್ಯ ವೀಕ್ಷಿಸುವವರ ಕಣ್ಣು ಪ್ರೇಕ್ಷಕರ ಗ್ಯಾಲರಿಯತ್ತ ಸದಾ ನೆಟ್ಟಿರುತ್ತದೆ. ಐಪಿಎಲ್ ನಲ್ಲಿ ಆಗಾಗ ಕ್ರೇಜ್ ಹೆಚ್ಚಿಸುವ 'ಮಿಸ್ಟರಿ ಗರ್ಲ್' ಕಾಣಿಸುವಳೇ ಎಂದು ಕಣ್ಣುಗಳು ಹುಡುಕುತ್ತಿರುತ್ತವೆ. ರಸಿಕರ ಕಂಗಳ ನೋಟಕ್ಕೆ ಮೋಸ ಮಾಡದಂತೆ ಮೊದಲ ಪಂದ್ಯದಲ್ಲೇ ಮಿಸ್ಟರಿ ಗರ್ಲ್ ಕಾಣಿಸಿಕೊಂಡಿದ್ದಾಳೆ. ಐಪಿಎಲ್ 2022ರ ಉದ್ಘಾಟನಾ ಪಂದ್ಯದಲ್ಲಿ ಕಾಣಿಸಿಕೊಂಡ ಆ ಹುಡುಗಿಯ ಬಗ್ಗೆ ಹುಡುಕಾಟ ಶುರುವಾಗಿದೆ ಜೊತೆಗೆ ಇಂಥ ಮಿಸ್ಟರಿ ಗರ್ಲ್ ಹುಡುಕಿ ಫೋಕಸ್ ಮಾಡುವ ಕ್ಯಾಮೆರಾ ಮ್ಯಾನ್‌ಗೆ ಫ್ಯಾನ್ಸ್ ಶರಣೆಂದಿದ್ದಾರೆ.
ಆರ್‌ಸಿಬಿ ಗರ್ಲ್ ಆಗಿ ಮಿಂಚಿದ ನೃತ್ಯ ಸಂಯೋಜಕಿ ದೀಪಿಕಾ ಘೋಷ್ ಈ ರೀತಿ ಕ್ರೇಜ್ ಹುಟ್ಟು ಹಾಕಿದ ಹುಡುಗಿಯರಲ್ಲಿ ಒಬ್ಬಳು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಲಕ್ಷಾಂತರ ಹಿಂಬಾಲಕರನ್ನು ಸಂಪಾದಿಸಿಬಿಟ್ಟಳು. ಹೊಸ ನ್ಯಾಷನಲ್ ಕ್ರಶ್ ಎನಿಸಿಕೊಂಡ ಈಕೆ ಹೆಸರು ದೀಪಿಕಾ, ಸದ್ಯ ಆಕೆ ಬಗ್ಗೆ ಅನೇಕ ಮೀಮ್ಸ್, ಟ್ರಾಲ್‌ಗಳು ಬಂದವು ಎಲ್ಲವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಅಕೆಯೂ ಖುಷಿಪಟ್ಟಳು, ಕಿಚಾಯಿಸಿದವರಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದಳು. ಈಗ ಚೆನ್ನೈ ಹಾಗೂ ಕೋಲ್ಕತಾ ನಡುವಿನ ಪಂದ್ಯದ ಬಳಿಕ ಹೊಸ ಮಿಸ್ಟರಿ ಗರ್ಲ್ ಟ್ರೆಂಡ್ ಆಗುತ್ತಿದ್ದಾಳೆ.
2020ರ ಪಂಜಾಬ್ ಹಾಗೂ ಮುಂಬೈ ನಡುವಿನ ಸೂಪರ್ ಓವರ್ ಹಣಾಹಣಿ ಸಂದರ್ಭದಲ್ಲಿ ಕಾಣಿಸಿಕೊಂಡ ಸೂಪರ್ ಓವರ್ ಗರ್ಲ್ ರಿಯಾನಾ ಲಾಲ್ವಾನಿ, ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕವಿಯಾ(ಕಾವ್ಯಾ) ಮಾರನ್, ಆರ್‌ಸಿಬಿ ತಂಡದ ಮಸಾಜ್ ಥೆರಪಿಸ್ಟ್ ನವನೀತ್ ಗೌತಮ್, ರಾಜಸ್ಥಾನದ ಫಿಸಿಯೋ ಸಿಬ್ಬಂದಿ ಅನುಜಾ ದಳವಿ ಕೂಡಾ ಟ್ರೆಂಡ್ ಆಗಿದ್ದವರು. ಈಗ ಹೊಸ ಹುಡುಗಿ ಬಗ್ಗೆ ಫ್ಯಾನ್ಸ್ ಟ್ವಿಟ್ಟರಲ್ಲಿ ಏನು ಹೇಳಿದ್ದಾರೆ ಮುಂದೆ ಓದಿ...
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯ ಅನೇಕ ರೀತಿಯಲ್ಲಿ ವಿಶೇಷವಾಗಿತ್ತು. ರವೀಂದ್ರ ಜಡೇಜಾಗೆ ನಾಯಕತ್ವವನ್ನು ನೀಡಿದ ನಂತರ ಎಂಎಸ್ ಧೋನಿ ಆಟಗಾರನಾಗಿ ಅರ್ಧಶತಕ ಬಾರಿಸಿ ಗಮನ ಸೆಳೆದರು ಮತ್ತು ಚೆನ್ನೈ 20 ಓವರ್‌ಗಳಲ್ಲಿ 131 ರನ್ ಗಳಿಸಲು ಸಹಾಯ ಮಾಡಿದರು. ಅಜಿಂಕ್ಯ ರಹಾನೆ ಅವರ 34 ಎಸೆತಗಳಲ್ಲಿ 44 ರನ್‌ಗಳ ನೆರವಿನಿಂದ 18.4 ಓವರ್‌ಗಳಲ್ಲಿ ಅಗತ್ಯ ಮೊತ್ತವನ್ನು ಬೆನ್ನಟ್ಟುವ ಮೂಲಕ ಕೆಕೆಆರ್ ನಂತರ ಶುಭಾರಂಭ ಮಾಡಿತು.
ರೋಮಾಂಚಕ ಪಂದ್ಯದಲ್ಲಿ ಕಂಡ ಸೂಪರ್ ಓವರ್ ಗರ್ಲ್ ಯಾರು?
ಐಪಿಎಲ್ ಶುರುವಾಗುತ್ತಿದ್ದಂತೆ ಆ ಕ್ಯಾಮೆರಾಮ್ಯಾನ್ ತನ್ನ ಕೆಲ್ಸ ಶುರು ಮಾಡಿದ್ದಾನೆ
ಚೆಂದದ ಹುಡುಗರಿಯರತ್ತವೆ ಕ್ಯಾಮೆರಾ ಸುತ್ತುತ್ತದೆ
ಮೈದಾನದಲ್ಲಿನ ಎಲ್ಲಾ ಕ್ರಿಕೆಟ್ ಕ್ರೇಜ್ ಜೊತೆಗೆ , 'ಮಿಸ್ಟರಿ ಗರ್ಲ್' ಕೂಡ ನೆಟಿಜನ್‌ಗಳ ಕ್ರೇಜ್ ಹೆಚ್ಚಿಸಿದ್ದಳು. ಈ ಹಿಂದೆ ಐಪಿಎಲ್ ಪಂದ್ಯಾವಳಿ ವೇಳೆ ಕಾಣಿಸಿಕೊಂಡಂತೆ ಈಕೆ ಬಗ್ಗೆ ಕುತೂಹಲ, ಕ್ರೇಜ್, ಟ್ರೆಂಡ್ ಶುರುವಾಗುತ್ತಿದೆ. ಜೊತೆಗೆ ಕ್ಯಾಮೆರಾಮ್ಯಾನ್ ಬಗ್ಗೆ ಕೂಡಾ ಹಲವರು ಕಾಮೆಂಟ್ ಮಾಡಿದ್ದಾರೆ. ಈ ಮಧ್ಯೆ, ಕ್ಯಾಮರಾಮನ್‌ಗಳು 'ಮಿಸ್ಟರಿ ಗರ್ಲ್' ಅನ್ನು ಗಮನದಲ್ಲಿಟ್ಟುಕೊಂಡ ನಂತರ ಕೆಲವು ಬಳಕೆದಾರರು ಉಲ್ಲಾಸದ ಮೀಮ್‌ಗಳನ್ನು ಹಂಚಿಕೊಂಡರೆ, ಇನ್ನು ಕೆಲವರು 'ಐಪಿಎಲ್ ಮರಳಿದೆ ಮತ್ತು ಕ್ಯಾಮೆರಾಮನ್ ಕೂಡ' ಎಂದು ಕ್ಯಾಮರಾಮನ್‌ಗಳನ್ನು ಟ್ರೋಲ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications