Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಲ್ಮಾನ್ ಖಾನ್ ಗೊತ್ತಿಲ್ಲ, ರಶೀದ್ ಖಾನ್ ಗೊತ್ತು ಎಂದ ಕಗಿಸೊ ರಬಾಡ

Kagiso rabada

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಮಿಂಚಿನ ದಾಳಿ ನಡೆಸುತ್ತಿರುವ ದಕ್ಷಿಣ ಆಫ್ರಿಕಾ ಬೌಲರ್ ಕಗಿಸೊ ರಬಾಡ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೊತ್ತಾ? ಎಂದು ಕೇಳಿದ ಪ್ರಶ್ನೆಗೆ ಸಖತ್ ಉತ್ತರ ನೀಡುವ ಮೂಲಕ ಸುದ್ದಿ ಆಗಿದ್ದಾರೆ.

ಪಂಜಾಬ್ ಕಿಂಗ್ಸ್ ಪರ 10 ಪಂದ್ಯಗಳಲ್ಲಿ 18 ವಿಕೆಟ್ ಉರುಳಿಸಿರುವ ಕಗಿಸೊ ರಬಾಡ ಪ್ರಸಕ್ತ ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಮುಂಬರುವ ಶುಕ್ರವಾರ ಪಂಜಾಬ್ ಕಿಂಗ್ಸ್‌ ತಂಡವು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಾದಾಟ ನಡೆಯಲಿದೆ. ಆದ್ರೆ ಇದಕ್ಕೂ ಮೊದಲು ಪಂಜಾಬ್ ಆಟಗಾರರು ಬಾಲಿವುಡ್ ಡೈಲಾಗ್ ಹೇಳುವ ಮೂಲಕ ಮಿಂಚಿದ್ದಾರೆ. ಅದ್ರಲ್ಲೂ ಹೈಲೈಟ್‌ ಆಗಿದ್ದು ಬೌಲರ್ ಕಗಿಸೊ ರಬಾಡ.

ಪಂಜಾಬ್ ಕಿಂಗ್ಸ್‌ ಅಧಿಕೃತ ವೀಡಿಯೋದಲ್ಲಿ ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಬಾಡ ಬಾಲಿವುಡ್ ಸೂಪರ್‌ ಸಲ್ಮಾನ್ ಖಾನ್ ಗೊತ್ತಾ ಎಂಬ ಪ್ರಶ್ನೆಗೆ ಪಂಚಿಂಗ್ ಉತ್ತರ ನೀಡಿದ್ದಾರೆ. ನಿಮಗೆ ಸಲ್ಮಾನ್ ಖಾನ್ ಗೊತ್ತಾ ಎಂದು ಕೇಳಿದ ಪ್ರಶ್ನೆಗೆ ಗೊತ್ತಿಲ್ಲ ಎಂದ ರಬಾಡ, ನನಗೆ ರಶೀದ್ ಖಾನ್ ಮಾತ್ರ ಗೊತ್ತು ಎಂದಿದ್ದಾರೆ. ಈ ಮಾತನ್ನ ಕೇಳಿದ ಆ್ಯಂಕರ್ ಒಮ್ಮೆ ದಂಗಾದರು. ಆಮೇಲೆ ಪರಿಸ್ಥಿತಿಯನ್ನ ಅರಿತು ನಕ್ಕು ಸುಮ್ಮನಾದರು.

ಪಂಜಾಬ್ ಕಿಂಗ್ಸ್ ಆಟಗಾರರು ಮತ್ತು ಬಾಲಿವುಡ್ ಡೈಲಾಗ್ ಕುರಿತಾದ ವೀಡಿಯೋವನ್ನ ಫ್ರಾಂಚೈಸಿ ಹಂಚಿಕೊಂಡಿದೆ. ಅನೇಕರು ಬಾಲಿವುಡ್ ಡೈಲಾಗ್ ಹೇಳಲು ಪ್ರಯತ್ನ ಪಟ್ಟಿದ್ದಾರೆ. ಮತ್ತೆ ಕೆಲವರು ಡೈಲಾಗ್ ಹೇಳುತ್ತಾ ತಮಾಷೆ ಮಾಡಿದ್ದಾರೆ.

Story first published: Tuesday, May 10, 2022, 18:10 [IST]
Other articles published on May 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+