Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಹಿತ್ ನಾಯಕತ್ವದಲ್ಲಿ ಸಮಸ್ಯೆಯಿಲ್ಲ, ಬೌಲಿಂಗ್ ದೌರ್ಬಲ್ಯ ಮುಂಬೈ ಸೋಲಿಗೆ ಕಾರಣ: ಗ್ರೇಮ್ ಸ್ವಾನ್

Greame swann

ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಸೋಲುವ ಮೂಲಕ ಪ್ಲೇ ಆಫ್ ಕನಸನ್ನ ಕೈ ಬಿಟ್ಟಿದೆ. ಸತತ ಐದು ಪಂದ್ಯಗಳನ್ನ ಸೋಲುವ ಮೂಲಕ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ಪಡೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ತಳಭಾಗದಲ್ಲಿದೆ.

ಮುಂಬೈ ಇಂಡಿಯನ್ಸ್‌ ಸತತ ಸೋಲಿಗೆ ಟೀಕೆಗಳು ಕೇಳಿಬರುತ್ತಿದ್ದು, ನಾಯಕ ರೋಹಿತ್ ಶರ್ಮಾ ನಾಯಕತ್ವ ಕಳೆಗುಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಇಂಗ್ಲೆಂಡ್‌ನ ಸ್ಪಿನ್ನರ್ ಗ್ರೇಮ್ ಸ್ವಾನ್ ರೋಹಿತ್ ಶರ್ಮಾರನ್ನ ಬೆಂಬಲಿಸಿದ್ದು, ರೋಹಿತ್ ನಾಯಕತ್ವದಲ್ಲಿ ಏನು ಸಮಸ್ಯೆಯಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಬುಧವಾರ (ಏಪ್ರಿಲ್ 13), ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ಮಯಾಂಕ್ ಅಗರ್ವಾಲ್ ಅವರ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ 12 ರನ್‌ಗಳಿಂದ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 198/5 ಕಲೆ ಹಾಕಿದ ಬಳಿಕ ರೋಹಿತ್ ಶರ್ಮಾ ನಾಯಕತ್ವ ಮತ್ತು ಬೌಲರ್‌ಗಳ ಭಾರೀ ಟೀಕೆ ವ್ಯಕ್ತವಾಯಿತು. ಇದರ ಜೊತೆಗೆ ಫೀಲ್ಡಿಂಗ್ ಕೂಡ ಟೀಕೆಗೆ ಕಾರಣವಾಗಿತ್ತು.

ಮುಂಬೈ ಇಂಡಿಯನ್ಸ್ ಸೋಲಿನ ಕುರಿತು ಮಾತನಾಡಿರುವ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್, ಮುಂಬೈ ತಂಡದ ಬೌಲರ್‌ಗಳು ನಾಯಕನನ್ನ ನಿರಾಸೆಗೊಳಿಸಿದ್ರು, ರೋಹಿತ್‌ನನ್ನ ಟೀಕೆ ಮಾಡುವುದು ಸರಿಯಲ್ಲ. ಜಸ್ಪ್ರೀತ್ ಬುಮ್ರಾ ಅದ್ಭುತ ಸ್ಪೆಲ್ ಜೊತೆಗೆ ಉಳಿದ ಮುಂಬೈ ಇಂಡಿಯನ್ಸ್ ಬೌಲರ್‌ಗಳು ದುಬಾರಿಯಾದ್ರು ಎಂದು ಹೇಳಿದ್ದಾರೆ.

"ಇಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಪ್ರಶ್ನಿಸಿದ್ದಕ್ಕೆ ನನಗೆ ಇಷ್ಟವಾಗ್ಲಿಲ್ಲ. ನನ್ನ ಪ್ರಕಾರ ಬೌಲರ್‌ಗಳ ಆತ್ಮವಿಶ್ವಾಸ ಕಡಿಮೆ ಇದೆ. ಬೌಲರ್‌ಗಳು ಚೆಂಡನ್ನು ಎಸೆಯುವ ಮತ್ತು ಸಂಪೂರ್ಣವಾಗಿ ಲೆಂತ್ ಹಾಕುವಾಗ ಭಾರಿ ವ್ಯತ್ಯಾಸವಿದೆ ಎಂದು ಸ್ವಾನ್, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

"ಜಸ್ಪ್ರೀತ್ ಬುಮ್ರಾ ಬಂದು ಮಧ್ಯಮ ಓವರ್‌ಗಳಲ್ಲಿ ಅದ್ಭುತ ಸ್ಪೆಲ್ ಬೌಲ್ ಮಾಡುವವರೆಗೆ, ಮುಂಬೈ ಬೌಲರ್‌ಗಳು ದುಬಾರಿಯಾಗಿದ್ದರು. ಆದ್ದರಿಂದ ಒಂದು ಸೆಕೆಂಡ್‌ಗೆ ಇದು ರೋಹಿತ್‌ನ ತಪ್ಪು ಎಂದು ಯೋಚಿಸಲು ಪ್ರಾರಂಭಿಸಬೇಡಿ. ಮೊದಲ 10 ಓವರ್‌ಗಳಲ್ಲಿ ಎಲ್ಲರೂ ಕೆಟ್ಟ ಬೌಲಿಂಗ್ ಮಾಡಿದರು'' ಎಂದು ಗ್ರೇಮ್ ಸ್ವಾನ್ ಹೇಳಿದ್ದಾರೆ.

ರೋಹಿತ್ ಈಗ ಭಾರತದ ಎಲ್ಲಾ ಫಾರ್ಮೆಟ್‌ನ ನಾಯಕರಾಗಿದ್ದಾರೆ ಮತ್ತು ಅವರ ಹೆಗಲ ಮೇಲೆ ಜವಾಬ್ದಾರಿಗಳು ಹೆಚ್ಚಿವೆ ಎಂಬುದನ್ನು ಗಮನಿಸಬೇಕು. ಹಾಗಾಗಿ, ಅದೇ ಆತನಿಗೆ ಮಾನಸಿಕವಾಗಿ ಕುತ್ತು ತಂದಿದೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಅವರು ತಮ್ಮ ಬ್ಯಾಟಿಂಗ್‌ನ ಮೇಲೆ ಗಮನ ಕೇಂದ್ರೀಕರಿಸಲು ರೋಹಿತ್ ಅವರು ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ಕೀರನ್ ಪೊಲಾರ್ಡ್‌ಗೆ ಹಸ್ತಾಂತರಿಸಬಹುದು ಎಂದು ನಂಬಿದ್ದಾರೆ.

Story first published: Thursday, April 14, 2022, 16:24 [IST]
Other articles published on Apr 14, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+