PBKS vs GT: ಕಿಂಗ್ಸ್ ಬೌಲಿಂಗ್‌ಗೆ ಬೆದರಿದ ಟೈಟನ್ಸ್: ಪಂಜಾಬ್ ಗೆಲುವಿಗೆ 144 ರನ್ ಗುರಿ

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿಕೊಂಡು ಬಂದಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಪಂಜಾಬ್ ಕಿಂಗ್ಸ್ ಬೌಲರ್‌ಗಳು ಸವಾಲಾಗಿದ್ದಾರೆ. ಮಂಗಳವಾರ ನಡೆದ ಈ ಎರಡು ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಪಡೆಯನ್ನು 143 ರನ್‌ಗಳಿಗೆ ನಿಯಂತ್ರಿಸುವಲ್ಲಿ ಪಂಜಾಬ್ ಕಿಂಗ್ಸ್ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.
ಪಂಜಾಬ್ ಕಿಂಗ್ಸ್ ಪರವಾಗಿ ಸಾಯಿ ಸುದರ್ಶನ್ ಮಾತ್ರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದಾರೆ. ಇತರ ಎಲ್ಲಾ ಬ್ಯಾಟರ್‌ಗಳು ಇಂದು ಪಂಜಾಬ್ ಕಿಂಗ್ಸ್ ಬೌಲಿಂಗ್ ವಿರುದ್ಧ ಆಡಲು ಪರದಾಡಿದರೆ ಸಾಯಿ ಕಿಶೋರ್ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಅರ್ಧ ಶತಕವನ್ನು ಸಿಡಿಸಿ ತಂಡಕ್ಕೆ ಆಸರೆಯಾದರು. 50 ಎಸೆತಗಳಲ್ಲಿ ಅವರು 64 ರನ್‌ಗಳಿಸಿದ್ದಾರೆ. ಉಳಿದಂತೆ ವೃದ್ಧಿಮಾನ್ ಸಾಹಾ 21 ರನ್‌ಗಳಿಸಿದ್ದೇ ಹೆಚ್ಚು. ಟೂರ್ನಿಯಲ್ಲಿ ಟೈಟನ್ಸ್ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಮಧ್ಯಮ ಕ್ರಮಾಂಕ ಕೂಡ ಇಂದು ವಿಫಲವಾಗಿದೆ.
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ
ಬೆಂಚ್: ಮ್ಯಾಥ್ಯೂ ವೇಡ್, ವರುಣ್ ಆರೋನ್, ಜಯಂತ್ ಯಾದವ್, ವಿಜಯ್ ಶಂಕರ್, ಗುರುಕೀರತ್ ಸಿಂಗ್ ಮಾನ್, ಅಭಿನವ್ ಮನೋಹರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ದರ್ಶನ್ ನಲ್ಕಂಡೆ, ರಹಮಾನುಲ್ಲಾ ಗುರ್ಬಾಜ್, ಡೊಮಿನಿಕ್ ಡ್ರೇಕ್ಸ್, ಯಶ್ ದಯಾಳ್, ನೂರ್ ಅಹ್ಮದ್
ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋ, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ಸಂದೀಪ್ ಶರ್ಮಾ
ಬೆಂಚ್: ಬೆನ್ನಿ ಹೋವೆಲ್, ಬಲ್ತೇಜ್ ಸಿಂಗ್, ರಿಟಿಕ್ ಚಟರ್ಜಿ, ಶಾರುಖ್ ಖಾನ್, ಪ್ರೇರಕ್ ಮಂಕಡ್, ಓಡಿಯನ್ ಸ್ಮಿತ್, ಇಶಾನ್ ಪೊರೆಲ್, ಅಥರ್ವ ಟೈಡೆ, ಪ್ರಭುಸಿಮ್ರಾನ್ ಸಿಂಗ್, ಹರ್ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ವೈಭವ್ ಅರೋರಾ, ಅನ್ಶ್ ಪಟೇಲ್, ರಾಜ್ ಬಾವಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications