GT vs LSG: ನಿಮ್ಮ ಈ ಡ್ರೀಮ್‌ನಲ್ಲಿ ಈ ಮೂವರಿಗೆ ಸ್ಥಾನ ನೀಡಿದರೆ ಹಿನ್ನಡೆ ಖಂಡಿತ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್ 26ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆದ ಪಂದ್ಯದ ಮೂಲಕ ಆರಂಭವಾಗಿದ್ದು, ಈ ಬಾರಿಯ ಟೂರ್ನಿಯಲ್ಲಿ ನೂತನ ತಂಡಗಳಾಗಿ ಸೇರ್ಪಡೆಗೊಂಡಿರುವ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಭಾಗವಹಿಸುತ್ತಿವೆ. ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಿ ಆಯ್ಕೆಯಾಗಿದ್ದರೆ, ಗುಜರಾತ್ ಟೈಟನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ನಾಯಕನಾಗಿ ಮುನ್ನಡೆಸಲಿದ್ದಾರೆ. ಇನ್ನು ಈ ಎರಡೂ ನೂತನ ತಂಡಗಳೂ ಟೂರ್ನಿಯಲ್ಲಿನ ತಮ್ಮ ಚೊಚ್ಚಲ ಪಂದ್ಯಗಳಲ್ಲಿ ಪರಸ್ಪರ ಎದುರಾಗಿ ಸೆಣಸಾಟ ನಡೆಸಲಿದ್ದು, ಇತ್ತಂಡಗಳ ನಡುವಿನ ಈ ಪಂದ್ಯ ಇಂದು ( ಮಾರ್ಚ್ 28 ) ಸಂಜೆ 7.30ಕ್ಕೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ.
ಇನ್ನು ಕಳೆದ ಕೆಲ ವರ್ಷಗಳಿಂದ ಕಳಪೆ ಪ್ರದರ್ಶನ ನೀಡುತ್ತಾ ಫಿಟ್‌ನೆಸ್ ಸಮಸ್ಯೆಯನ್ನೂ ಎದುರಿಸುತ್ತಾ ಭಾರತ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯರತ್ತ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದ್ದು, ಓರ್ವ ನಾಯಕನಾಗಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡವನ್ನು ಯಾವ ರೀತಿ ಮುನ್ನಡೆಸುತ್ತಾರೆ ಹಾಗೂ ಉತ್ತಮ ಪ್ರದರ್ಶನ ನೀಡಿ ಮತ್ತೆ ಟೀಮ್ ಇಂಡಿಯಾಗೆ ಮರಳುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ. ಒಂದೆಡೆ ಹಾರ್ದಿಕ್ ಪಾಂಡ್ಯ ಪ್ರದರ್ಶನದ ಕುರಿತು ಚರ್ಚೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಹೊಸ ತಂಡಗಳೆರಡು ಸೆಣಸಾಡಲಿರುವ ಪಂದ್ಯಕ್ಕೆ ತಮ್ಮ ತಮ್ಮ ಡ್ರೀಮ್ ಟೀಮ್‌ಗಳನ್ನು ಕ್ರಿಕೆಟ್ ವೀಕ್ಷಿಸರು ರಚಿಸುತ್ತಿದ್ದು, ಎರಡೂ ತಂಡಗಳನ್ನೊಳಗೊಂಡಂತೆ ಪಂದ್ಯದಲ್ಲಿ ಮಿಂಚಬಲ್ಲ ಆಟಗಾರರನ್ನು ಈ ತಂಡಗಳಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ ಹಾಗೂ ಕಳಪೆ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಊಹಿಸಿ ತಂಡದಿಂದ ಹೊರಗಿಡುತ್ತಿದ್ದಾರೆ. ಹೀಗೆ ಕ್ರಿಕೆಟ್ ಪ್ರೇಕ್ಷಕರು ರಚಿಸುತ್ತಿರುವ ಡ್ರೀಮ್ ಟೀಮ್‌ನಿಂದ ಯಾವ ಆಟಗಾರರನ್ನು ಹೊರಗಿಟ್ಟರೆ ಉತ್ತಮ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಈ ಮೂವರು ಆಟಗಾರರು ಬೇಡ
ಗುಜರಾತ್ ಜೈಂಟ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಡಲಿರುವ ಪಂದ್ಯಕ್ಕೆ ನೀವು ರಚಿಸಲಿರುವ ಡ್ರೀಮ್ ಟೀಮ್‌ನಲ್ಲಿ ವೃದ್ಧಿಮಾನ್ ಸಹಾಗೆ ಸ್ಥಾನ ನೀಡದಿರುವುದು ಉತ್ತಮ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 5 ಪಂದ್ಯಗಳನ್ನಾಡಿದ್ದ ವೃದ್ಧಿಮಾನ್ ಸಹಾ ಕೇವಲ 73 ರನ್ ಗಳಿಸಿದ್ದರು. ಹಾಗೂ ಕಳೆದ ಬಾರಿಯ ಐಪಿಎಲ್‌ನಲ್ಲಿ 9 ಪಂದ್ಯಗಳನ್ನಾಡಿ ಕೇವಲ 131 ರನ್ ಗಳಿಸಿದ್ದರು. ಹೀಗೆ ಫಾರ್ ಕಳೆದುಕೊಂಡಿರುವ ವೃದ್ಧಿಮಾನ್ ಸಹಾರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ. ಇದರ ಜೊತೆಗೆ ಕಳೆದ ಕೆಲ ವರ್ಷಗಳಿಂದ ಸಾಲು ಸಾಲು ಕಳಪೆ ಪ್ರದರ್ಶನ ನೀಡುತ್ತಿರುವ ವಿಜಯ್ ಶಂಕರ್ ಅವರನ್ನೂ ಸಹ ಈ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಸೂಕ್ತ. ಇನ್ನು ಈ ಡ್ರೀಮ್ ಟೀಮ್‌ನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ಆಂಡ್ರೂ ಟೈ ಅವರನ್ನು ಹೊರಗಿಡುವುದು ಉತ್ತಮ ಆಯ್ಕೆ ಎನ್ನಬಹುದು. ಈ ಬಾರಿ ಮಾರ್ಕ್ ವುಡ್ ಗಾಯದ ಸಮಸ್ಯೆಗೆ ಒಳಗಾದ ಕಾರಣ ಲಕ್ನೋಗೆ ಆಯ್ಕೆಯಾಗಿರುವ ಆಂಡ್ರೂ ಟೈ 2018ರ ಐಪಿಎಲ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 24 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಆದರೆ, ಅನಂತರ ಕೇವಲ 7 ಪಂದ್ಯಗಳಲ್ಲಿ ಮಾತ್ರ ಆಡುವ ಅವಕಾಶ ಪಡೆದಿರುವ ಆಂಡ್ರೂ ಟೈ 4 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ.

ನಾಯಕ ಮತ್ತು ಉಪನಾಯಕ
ಗುಜರಾತ್ ಜೈಂಟ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯಕ್ಕೆ ನೀವು ರಚಿಸಲಿರುವ ಡ್ರೀಮ್ ಟೀಮ್‌ನಲ್ಲಿ ನಾಯಕ ಸ್ಥಾನವನ್ನು ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯಗೆ ನೀಡಿದರೆ ಉತ್ತಮ ಹಾಗೂ ಉಪನಾಯಕನ ಸ್ಥಾನವನ್ನು ಶುಬ್‌ಮನ್ ಗಿಲ್ ಅಥವಾ ಮನೀಶ್ ಪಾಂಡೆಗೆ ನೀಡಿದರೆ ಉತ್ತಮ.

ಡ್ರೀಮ್ ಟೀಮ್ ಹೀಗಿರಲಿ
ತಂಡ 1: ಕ್ವಿಂಟನ್ ಡಿ ಕಾಕ್, ಲೋಕೇಶ್ ರಾಹುಲ್ (ನಾಯಕ), ಮನೀಶ್ ಪಾಂಡೆ, ಡೇವಿಡ್ ಮಿಲ್ಲರ್, ಶುಭಮನ್ ಗಿಲ್ (ಉಪನಾಯಕ), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಅವೇಶ್ ಖಾನ್, ರಶೀದ್ ಖಾನ್, ರವಿ ಬಿಷ್ಣೋಯ್
ತಂಡ 2: ಕೆಎಲ್ ರಾಹುಲ್, ಮನೀಶ್ ಪಾಂಡೆ (ಉಪನಾಯಕ), ಡೇವಿಡ್ ಮಿಲ್ಲರ್, ದೀಪಕ್ ಹೂಡಾ, ಶುಭಮನ್ ಗಿಲ್, ರಾಹುಲ್ ತೆವಾಟಿಯಾ, ಹಾರ್ದಿಕ್ ಪಾಂಡ್ಯ (ನಾಯಕ), ಕೃನಾಲ್ ಪಾಂಡ್ಯ, ಮೊಹಮ್ಮದ್ ಶಮಿ, ಅವೇಶ್ ಖಾನ್, ರಶೀದ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications