RCB vs PBKS: ನಿಮ್ಮ ಡ್ರೀಮ್ ಟೀಮ್‌ನಿಂದ ಈ ಮೂವರನ್ನು ಹೊರಗಿಡಿ, ನಾಯಕತ್ವಕ್ಕೆ ಈತ ಬೆಸ್ಟ್

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್ 26ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಚಾಲನೆ ಪಡೆದುಕೊಂಡಿದ್ದು, ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಸೋಲುಣಿಸಿದ್ದು, ಶ್ರೇಯಸ್ ಐಯ್ಯರ್ ನಾಯಕತ್ವದ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇನ್ನು ಟೂರ್ನಿಯ ಎರಡನೇ ದಿನವಾದ ಇಂದು ( ಮಾರ್ಚ್ 27 ) ಎರಡು ಪಂದ್ಯಗಳು ಆಯೋಜನೆಗೊಂಡಿದ್ದು, ಚೊಚ್ಚಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಐಪಿಎಲ್, CSK vs KKR: ಸಿಎಸ್‌ಕೆ ಸೋಲಿಗೆ ಜಡೇಜಾ ತೆಗೆದುಕೊಂಡ ನಿರ್ಧಾರ, ಆ ಆಟಗಾರನೇ ಕಾರಣ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳೆರಡೂ ಈ ಬಾರಿ ನೂತನ ನಾಯಕರೊಂದಿಗೆ ಕಣಕ್ಕಿಳಿಯುತ್ತಿದ್ದು, ಫಾಫ್ ಡು ಪ್ಲೆಸಿಸ್ ಹಾಗೂ ಮಯಂಕ್ ಅಗರ್ವಾಲ್ ಇಬ್ಬರಲ್ಲಿ ಯಾರ ನಾಯಕತ್ವ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಯಾರು ಕಣಕ್ಕಿಳಿಯಬಹುದು ಹಾಗೂ ಈ ಪಂದ್ಯದಲ್ಲಿ ಎರಡೂ ತಂಡಗಳ ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಬಹುದು ಎಂಬ ಲೆಕ್ಕಾಚಾರಗಳನ್ನು ಪ್ರೇಕ್ಷಕರು ಹಾಕುತ್ತಿದ್ದಾರೆ. ಕ್ರಿಕೆಟ್ ಪ್ರೇಮಿಗಳು ತಮ್ಮದೇ ಆದ ಕನಸಿನ ಉತ್ತಮ ತಂಡಗಳನ್ನು ( ಡ್ರೀಮ್ ಟೀಮ್ ) ರಚಿಸುತ್ತಿದ್ದು, ಈ ಪಂದ್ಯದಲ್ಲಿ ಮಿಂಚಬಹುದಾದಾ ಆಟಗಾರರನ್ನು ತಮ್ಮ ಕನಸಿನ ತಂಡಗಳಲ್ಲಿ ನಾಯಕ ಮತ್ತು ಉಪನಾಯಕನನ್ನಾಗಿ ಆಯ್ಕೆ ಮಾಡುತ್ತಿದ್ದಾರೆ. ಹೀಗೆ ಡ್ರೀಮ್ ಟೀಮ್ ಮಾಡುತ್ತಿರುವ ಆಟಗಾರರು ಈ ಕೆಳಕಂಡ ಮೂವರು ಆಟಗಾರರು ಆದಷ್ಟು ತಮ್ಮ ತಂಡದಿಂದ ಹೊರಗಿಡುವುದು ಉತ್ತಮ ಹಾಗೂ ಈ ಆಟಗಾರರಿಗೆ ನಾಯಕ ಹಾಗೂ ಉಪನಾಯಕನ ಸ್ಥಾನವನ್ನು ನೀಡಿದರೆ ಒಳಿತು ಎಂದು ಹೇಳಬಹುದು.

ಈ ಮೂವರನ್ನು ಹೊರಗಿಡಿ
ಮೊದಲಿಗೆ ಪಂಜಾಬ್ ಕಿಂಗ್ಸ್ ತಂಡದ ಪ್ರಬ್‌ಸಿಮ್ರಾನ್ ಸಿಂಗ್‌ರನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡಬೇಕಾಗಿದೆ. ದೇಸಿ ಕ್ರಿಕೆಟ್‌ನಲ್ಲಿ ಈತ ಉತ್ತಮ ಆಟಗಾರನಾಗಿದ್ದರೂ ಸಹ ಇದುವರೆಗೂ ಆಡಿರುವ 5 ಐಪಿಎಲ್ ಪಂದ್ಯಗಳ ಪೈಕಿ 50 ರನ್‌ಗಳಿಸಿರುವ ಈತ 90 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಎರಡನೆಯದಾಗಿ ಶಹ್ಬಾಜ್ ಅಹ್ಮದ್‌ರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಆಯ್ಕೆ ಎನ್ನಬಹುದು. ಕಳೆದ ಬಾರಿಯ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿ 7 ವಿಕೆಟ್ ಪಡೆದಿದ್ದ ಅಹ್ಮದ್ ಈ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆಗಳಿದ್ದು, ತಂಡದಲ್ಲಿ ಹೆಚ್ಚಿನ ಬೌಲರ್‌ಗಳ ಲಭ್ಯತೆ ಇರುವುದರಿಂದ ಬೌಲಿಂಗ್ ಮಾಡುವ ಅವಕಾಶ ಕೂಡ ಕಡಿಮೆ ಇರಲಿದೆ. ಪಂಜಾಬ್ ಕಿಂಗ್ಸ್ ತಂಡದ ಒಡಿಯನ್ ಸ್ಮಿತ್ ಪವರ್ ಹಿಟ್ಟರ್ ಆಗಿದ್ದರೂ ಸಹ ಐಪಿಎಲ್ ಟೂರ್ನಿಯ ಮೊದಲನೇ ಪಂದ್ಯದಲ್ಲಿಯೇ ಅಬ್ಬರಿಸುವ ಸಾಧ್ಯತೆ ಕಡಿಮೆ ಇರಲಿದೆ. ಹಾಗೂ ವೇಗದ ಬೌಲಿಂಗ್ ಮಾಡುವ ಈತ ಹೆಚ್ಚಿನ ರನ್ ಬಿಟ್ಟುಕೊಡುವ ಸಾಧ್ಯತೆಯೂ ಇದ್ದು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡಬೇಕಾದ ಮೂರನೇ ಆಟಗಾರ ಈತನಾಗಿದ್ದಾನೆ.

ನಾಯಕ ಮತ್ತು ಉಪನಾಯಕ
ನಿಮ್ಮ ಡ್ರೀಮ್ ಪಂದ್ಯದಲ್ಲಿ ನಾಯಕ ಸ್ಥಾನವನ್ನು ಫಾಫ್ ಡು ಪ್ಲೆಸಿಸ್ ಮತ್ತು ಶಿಖರ್ ಧವನ್ ಹಾಗೂ ಉಪನಾಯಕನ ಸ್ಥಾನವನ್ನು ಲಿಯಾಮ್ ಲಿವಿಂಗ್‌ಸ್ಟನ್ ಅಥಾವಾ ವನಿಂದು ಹಸರಂಗಗೆ ನೀಡಿದರೆ ನಿಮ್ಮ ಡ್ರೀಮ್ ಟೀಮ್ ಒಳ್ಳೆಯ ಪ್ರದರ್ಶನ ನೀಡಲಿದೆ.

ಡ್ರೀಮ್ ತಂಡ ಹೀಗಿರಲಿ
ಇನ್ನು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಬಹುದಾದ ಎರಡೂ ತಂಡಗಳ ಆಟಗಾರರನ್ನೊಳಗೊಂಡ ಡ್ರೀಮ್ ಟೀಮ್ ಹೀಗಿದೆ:
ವಿಕೆಟ್ ಕೀಪರ್ - ಅನುಜ್ ರಾವತ್
ಬ್ಯಾಟ್ಸ್‌ಮನ್: ಫಾಫ್ ಡು ಪ್ಲೆಸಿಸ್ ( ನಾಯಕ ), ಮಯಾಂಕ್ ಅಗರ್ವಾಲ್, ಶಿಖರ್ ಧವನ್, ಮಹಿಪಾಲ್ ಲೊಮ್ರೋರ್, ಶಾರುಖ್ ಖಾನ್
ಆಲ್‌ರೌಂಡರ್: ಲಿಯಾಮ್ ಲಿವಿಂಗ್‌ಸ್ಟೋನ್ (ಉಪ ನಾಯಕ), ವನಿಂದು ಹಸರಂಗ
ಬೌಲರ್‌ಗಳು- ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications