For Quick Alerts
ALLOW NOTIFICATIONS  
For Daily Alerts
 

IPL 2022: MI vs DC ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್, ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಲಿಸ್ಟ್

IPL 2022: Points Table, Orange Cap and Purple Cap List After MI Win Against DC

ಮುಂಬೈ ಇಂಡಿಯನ್ಸ್ ಶನಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ ಪಂದ್ಯ 69ರಲ್ಲಿ ಐದು ವಿಕೆಟ್‌ಗಳಿಂದ ಸೋಲಿಸಿ ಪ್ಲೇಆಫ್ ತಲುಪುವ ಡೆಲ್ಲಿ ಕ್ಯಾಪಿಟಲ್ಸ್‌ನ ಭರವಸೆಯನ್ನು ಚಿವುಟಿ ಹಾಕಿತು.

160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಆರಂಭಿಕ ವಿಕೆಟ್‌ ಕಳೆದುಕೊಂಡಿತು. ಆನಂತರ ಇಶಾನ್ ಕಿಶನ್ ಮತ್ತು ಡೆವಾಲ್ಡ್ ಬ್ರೆವಿಸ್ ಎರಡನೇ ವಿಕೆಟ್‌ಗೆ 51 ರನ್ ಸೇರಿಸುವ ಮೂಲಕ ತಂಡವನ್ನು ಮರಳಿ ಟ್ರ್ಯಾಕ್‌ಗೆ ತಂದರು.

ನಂತರ ಟಿಮ್ ಡೇವಿಡ್ ಮತ್ತು ತಿಲಕ್ ವರ್ಮಾ ಮುಂಬೈ ತಂಡದ ಚೇಸ್‌ಗೆ ಬೇಕಾದ ಅಂತಿಮ ರನ್‌ಗಳನ್ನು ಸೇರಿಸಿ, MI ಅನ್ನು ವಿಜಯದತ್ತ ಕೊಂಡೊಯ್ದರು. ಅಲ್ಲದೇ ಮತ್ತೊಂದು 50 ರನ್‌ಗಳ ಜೊತೆಯಾಟದ ಕೊಡುಗೆ ನೀಡಿದರು. ಕೊನೆಯಲ್ಲಿ ಮುಂಬೈ ಐದು ಎಸೆತಗಳು ಬಾಕಿ ಇರುವಂತೆಯೇ ಗುರಿಯನ್ನು ಬೆನ್ನಟ್ಟಿತು.

ಐಪಿಎಲ್ 2022 ಪಾಯಿಂಟ್ಸ್ ಟೇಬಲ್

ಐಪಿಎಲ್ 2022 ಪಾಯಿಂಟ್ಸ್ ಟೇಬಲ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಧನ್ಯವಾದ ಹೇಳಿ ಪ್ಲೇಆಫ್‌ಗೆ ಅರ್ಹತೆ ಪಡೆದ ನಾಲ್ಕನೇ ತಂಡವಾಯಿತು.

ಗುಜರಾತ್ ಟೈಟನ್ಸ್ 10 ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ (20 ಅಂಕ) ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ತಲಾ ಒಂಬತ್ತು ಗೆಲುವುಗಳನ್ನು ದಾಖಲಿಸಿ 18 ಅಂಕಗಳನ್ನು ಹೊಂದಿವೆ. ಆದರೆ ಲಕ್ನೋ ನೆಟ್ ರನ್‌ರೇಟ್‌ ಕಡಿಮೆ ಇರುವುದರಿಂದ ಮೂರನೇ ಸ್ಥಾನದಲ್ಲಿದೆ.

ನಾಲ್ಕನೇ ತಂಡವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದ ಆರ್‌ಸಿಬಿ

ನಾಲ್ಕನೇ ತಂಡವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದ ಆರ್‌ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಸ್ಥಾನದಲ್ಲಿರುವುದರಿಂದ (16 ಅಂಕಗಳು) ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ. ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ತಲುಪಲು ವಿಫಲರಾದರು.

ಕೋಲ್ಕತ್ತಾ ನೈಟ್ ರೈಡರ್ಸ್ ಆರನೇ ಸ್ಥಾನವನ್ನು (14 ಅಂಕಗಳು), ಪಂಜಾಬ್ ಕಿಂಗ್ಸ್ (12 ಅಂಕಗಳು) ಮತ್ತು ಸನ್ ರೈಸರ್ಸ್ ಹೈದರಾಬಾದ್ (12 ಅಂಕಗಳು) ಕ್ರಮವಾಗಿ ಏಳು ಮತ್ತು ಎಂಟನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಒಂಬತ್ತನೇ ಸ್ಥಾನದಲ್ಲಿ ಉಳಿದಿದ್ದು, ಮುಂಬೈ ಇಂಡಿಯನ್ಸ್ ನಿನ್ನೆಯ ಗೆಲುವಿನ ಹೊರತಾಗಿಯೂ ಕೊನೆಯ ಸ್ಥಾನದಲ್ಲಿ 2022ರ ಐಪಿಎಲ್ ಅಭಿಯಾನ ಮುಗಿಸಿದೆ.

ಐಪಿಎಲ್ 2022ರ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಯಾರು ಮುಂದೆ

ಐಪಿಎಲ್ 2022ರ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಯಾರು ಮುಂದೆ

ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ 14 ಪಂದ್ಯಗಳಲ್ಲಿ 629 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂದಿದ್ದಾರೆ. ಅವರ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ಓಪನರ್‌ಗಳಾದ ಕೆಎಲ್ ರಾಹುಲ್ (537) ಮತ್ತು ಕ್ವಿಂಟನ್ ಡಿ ಕಾಕ್ (502) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ 443 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ (432 ರನ್) ಐದನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ 2022ರ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾರು ಮುನ್ನಡೆ

ಐಪಿಎಲ್ 2022ರ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾರು ಮುನ್ನಡೆ

ರಾಜಸ್ಥಾನ ರಾಯಲ್ಸ್ ತಂಡದ ಯುಜ್ವೇಂದ್ರ ಚಹಲ್ 14 ಪಂದ್ಯಗಳಲ್ಲಿ 26 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂದಿದ್ದಾರೆ. ಅವರ ನಂತರರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವನಿಂದು ಹಸರಂಗಾ (24) ಎರಡನೇ ಸ್ಥಾನದಲ್ಲಿದ್ದರೆ, ಕಗಿಸೊ ರಬಾಡ (22) ಮೂರನೇ ಸ್ಥಾನದಲ್ಲಿದ್ದಾರೆ. ಕುಲದೀಪ್ ಯಾದವ್ (21) ಮತ್ತು ಉಮ್ರಾನ್ ಮಲಿಕ್ (21) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

Story first published: Sunday, May 22, 2022, 10:45 [IST]
Other articles published on May 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+