IPL 2022 Points Table: ಲಕ್ನೋ ಹ್ಯಾಟ್ರಿಕ್ ಜಯದ ಬಳಿಕ ಅಂಕಪಟ್ಟಿ ಹೀಗಿದೆ; ಆರೆಂಜ್ ಕ್ಯಾಪ್ ರೇಸ್‌ಗೆ ಹೊಸ ಆಟಗಾರನ ಎಂಟ್ರಿ!

ಜಗತ್ತಿನ ಅತಿದೊಡ್ಡ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ಆರಂಭವಾಗಿದ್ದು, ಟೂರ್ನಿಯ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಜಯ ಸಾಧಿಸಿದೆ.
ಮುಂಬೈನ ಡಿ ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಪೃಥ್ವಿ ಶಾ 34 ಎಸೆತಗಳಲ್ಲಿ 61 ರನ್ ಚಚ್ಚಿದರೆ, ಮತ್ತೋರ್ವ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 4 ರನ್ ಕಲೆಹಾಕಿ ನಿರಾಸೆ ಮೂಡಿಸಿದರು. ಇನ್ನುಳಿದಂತೆ ರೋವ್ಮನ್ ಪೊವೆಲ್ 3 ರನ್, ರಿಷಭ್ ಪಂತ್ ಅಜೇಯ 39 ಮತ್ತು ಸರ್ಫರಾಜ್ ಖಾನ್ ಅಜೇಯ 36 ರನ್ ಗಳಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 150 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತು.

ಇನ್ನು ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಆರಂಭದಲ್ಲಿ ಉತ್ತಮ ಆರಂಭ ಪಡೆದುಕೊಂಡು ನಂತರ ನಿಧಾನಗತಿಯಲ್ಲಿ ರನ್ ಕಲೆಹಾಕಿತು. ಕೆಎಲ್ ರಾಹುಲ್ 24 ರನ್ ಗಳಿಸಿ ಔಟ್ ಆದರೆ, ಅಬ್ಬರಿಸಿದ ಕ್ವಿಂಟನ್ ಡಿ ಕಾಕ್ 52 ಎಸೆತಗಳಲ್ಲಿ 80 ರನ್ ಕಲೆ ಹಾಕಿದರು. ಇನ್ನುಳಿದಂತೆ ತಂಡದ ಎವಿನ್ ಲೆವಿಸ್ 5 ರನ್ ಮತ್ತು ದೀಪಕ್ ಹೂಡಾ 11 ರನ್ ಗಳಿಸಿದರೆ, ಕ್ರುನಾಲ್ ಪಾಂಡ್ಯ ಅಜೇಯ 19 ರನ್ ಮತ್ತು ಆಯುಷ್ ಬದೋನಿ ಅಜೇಯ 10 ರನ್ ಕಲೆಹಾಕಿದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್‍ಗಳ ಜಯ ಸಾಧಿಸಿತು. ಹೀಗೆ ಲಕ್ನೋ ಸೂಪರ್ ಜೈಂಟ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿದ ನಂತರ ಅಂಕಪಟ್ಟಿಯಲ್ಲಾದ ಬದಲಾವಣೆ, ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಅಂಕ ಪಟ್ಟಿ ಹೀಗಿದೆ ಅಂಕ ಪಟ್ಟಿ ಹೀಗಿದೆ
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಈ ಪಂದ್ಯ ಮುಕ್ತಾಯವಾದ ನಂತರ ಅಂಕಪಟ್ಟಿಯಲ್ಲಿ ಏರಿಕೆ ಕಂಡಿರುವ ಲಕ್ನೋ ಸೂಪರ್ ಜೈಂಟ್ಸ್ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಉತ್ತಮ ನೆಟ್ ರನ್ ರೇಟ್ ಹೊಂದಿರುವ ಕೋಲ್ಕತಾ ನೈಟ್ ರೈಡರ್ಸ್ ಅಗ್ರಸ್ಥಾನದಲ್ಲಿಯೇ ಉಳಿದುಕೊಂಡಿದ್ದು, ಈ ಪಂದ್ಯ ಆರಂಭಕ್ಕೂ ಮುನ್ನ ದ್ವಿತೀಯ ಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ಇದೀಗ ತೃತೀಯ ಸ್ಥಾನಕ್ಕೆ ಕುಸಿದಿದೆ ಮತ್ತು ತೃತೀಯ ಸ್ಥಾನದಲ್ಲಿದ್ದ ಗುಜರಾತ್ ಟೈಟನ್ಸ್ ನಾಲ್ಕನೇ ಸ್ಥಾನಕ್ಕೆ ಇಳಿದಿದೆ.

ಆರೆಂಜ್ ಕ್ಯಾಪ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕ್ವಿಂಟನ್ ಡಿ ಕಾಕ್ ಆರೆಂಜ್ ಕ್ಯಾಪ್ ರೇಸ್‌ಗೆ ಇಳಿದಿದ್ದಾರೆ. ಈ ಪಂದ್ಯದಲ್ಲಿ 80 ರನ್ ಬಾರಿಸಿ 4 ಪಂದ್ಯಗಳಲ್ಲಿ 149 ರನ್ ಕಲೆಹಾಕಿರುವ ಕ್ವಿಂಟನ್ ಡಿ ಕಾಕ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ 3 ಪಂದ್ಯಗಳನ್ನಾಡಿ 205 ರನ್ ಕಲೆಹಾಕಿರುವ ಜೋಸ್ ಬಟ್ಲರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 3 ಪಂದ್ಯಗಳನ್ನಾಡಿ 149 ರನ್ ಕಲೆಹಾಕಿರುವ ಇಶಾನ್ ಕಿಶನ್ ದ್ವಿತೀಯ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್
ಇನ್ನು ಈ ಪಂದ್ಯದ ಮುಕ್ತಾಯದ ನಂತರ ಪರ್ಪಲ್ ಕ್ಯಾಪ್ ಪಟ್ಟಿಯ ಟಾಪ್ 3 ಬೌಲರ್‌ಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 9 ವಿಕೆಟ್ ಪಡೆದಿರುವ ಉಮೇಶ್ ಯಾದವ್ ಅಗ್ರಸ್ಥಾನದಲ್ಲಿದ್ದರೆ, 7 ವಿಕೆಟ್ ಪಡೆದಿರುವ ಯುಜುವೇಂದ್ರ ಚಹಲ್ ದ್ವಿತೀಯ ಸ್ಥಾನ ಮತ್ತು 7 ವಿಕೆಟ್ ಪಡೆದಿರುವ ಮತ್ತೋರ್ವ ಆಟಗಾರ ಅವೇಶ್ ಖಾನ್ ತೃತೀಯ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications