IPL 2022: ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು, ಮುಂಬೈಗೆ ಮೊದಲ ಜಯದ ಬಳಿಕ ಅಂಕಪಟ್ಟಿಯ ಲೆಕ್ಕಾಚಾರ!

ಐಪಿಎಲ್ ಅಂಗಳದಲ್ಲಿ ಶನಿವಾರ ಡಬಲ್ ಹೆಡ್ಡರ್ ಪಂದ್ಯಗಳು ನಡೆದಿದ್ದು ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈ್ದರಾಬಾದ್ ತಮಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ಸವಾಲಿನ ಮೊತ್ತವನ್ನು ಪೇರಿಸಿತಾದರೂ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಈ ಮೊತ್ತ ಸಾಕಾಗದೆ ರಕ್ಷಣೆ ಮಾಡುವಲ್ಲಿ ಆರ್‌ಸಿಬಿ ವಿಫಲವಾಗಿದೆ. ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ ಅವರ ಅರ್ಧ ಶತಕಗಳ ಹೊರತಾಗಿಯೂ ಆರ್‌ಸಿಬಿ ಸೋಲನ್ನು ಅನುಭವಿಸಬೇಕಾಯಿತು. ಈ ಸೋಲಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿಯತೂ ಹಿನ್ನಡೆ ಅನುಭವಿಸಿದೆ.
ಮತ್ತೊಂದು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಬಾರಿಯ ಆವೃತ್ತಿಯಲ್ಲಿ ಸತತ ಸೋಲು ಅನುಭವಿಸಿರುವ ಮುಂಬೈ ಇಂಡಿಯನ್ಸ್ ಆಡಿದ 9ನೇ ಪಂದ್ಯದಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಟೂರ್ನಿಯಲ್ಲಿ ಮೂರನೇ ಸೋಲು ಅನುಭವಿಸಿದಂತಾಗಿದೆ.
ಹಾಗಾದರೆ ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಯಾವ ರೀತಿಯ ಬದಲಾವಣೆಗಳು ಆಗಿದೆ. ಪರ್ಪಲ್ ಕ್ಯಾಪ್ ಪಟ್ಟಿ ಹಾಗೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಯಾರ್ಯಾರು ಅಗ್ರಸ್ಥಾನದಲ್ಲಿದ್ದಾರೆ? ಮುಂದೆ ಓದಿ..

ಪಾಯಿಂಟ್ಸ್ ಟೇಬಲ್
ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋಲು ಅನುಭವಿಸಿದ್ದು ಗುಜರಾತ್ ಟೈಟನ್ಸ್ ತಂಡ 9 ಪಂದ್ಯಗಳಲ್ಲಿ 8ನೇ ಗೆಲುವು ದಾಖಲಿಸಿದೆ. ಈ ಮೂಲಕ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್‌ಗೆ ಅಧಿಕೃತವಾಗಿ ಅರ್ಹತೆ ಗಳಿಸಿದ ಮೊದಲ ತಂಡ ಎನಿಸಲು ಒಂದು ಹೆಜ್ಜೆ ಮಾತ್ರವೇ ಬಾಕಿಯಿದೆ. ಆದರೆ ಸೋಲು ಅನುಭವಿಸಿದ ಆರ್‌ಸಿಬಿ 10 ಪಂದ್ಯಗಳಲ್ಲಿ 5ನೇ ಸೋಲು ಅನುಭವಿಸಿದೆ. ಈ ಮೂಲಕ 10 ಅಂಕಗಳು ಆರ್‌ಸಿಬಿ ಖಾತೆಯಲ್ಲಿದೆ. ಪ್ರಸ್ತುತ 5ನೇ ಸ್ಥಾನದಲ್ಲಿದೆ ಆರ್‌ಸಿಬಿ.
ಮತ್ತೊಂದು ಪಂದ್ಯದಲ್ಲಿ ಮುಖಾಮುಖಿಯಾಗಿರುವ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಖಾತೆ ತೆರೆಯಲು ಯಶಸ್ವಿಯಾಗಿದೆ. ಆದರೆ ಇದು ಮುಂಬೈ ಇಂಡಿಯನ್ಸ್ ಪಾಲಿಗೆ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂಬುದು ಮತ್ತೊಂದು ಅಂಶ. ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಅನುಭವಿಸಿದ ಹೊರತಾಗಿಯೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿಯೇ ಮುಂದಿವರಿದಿದೆ.

ಆರೆಂಜ್ ಕ್ಯಾಪ್
ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಶನಿವಾರದ ಪಂದ್ಯದಲ್ಲಿಯೂ ತನ್ನ ಅಮೋಘ ಫಾರ್ಮ್ ಮುಂದುವರಿಸಿದ್ದಾರೆ. ಟೂರ್ನಿಯಲ್ಲಿ ಈಗಾಗಲೇ ಮೂರು ಶತಕ ಸಿಡಿಸಿರುವ ಬಟ್ಲರ್ ಶನಿವಾರ ಮೂರನೇ ಅರ್ಧ ಶತಕವನ್ನು ಸಿಡಿಸಿದ್ದಾರೆ. 9 ಪಂದ್ಯಗಳಲ್ಲಿ ಭರ್ಜರಿ 566 ರನ್‌ಗಳಿಸಿರುವ ಬಟ್ಲರ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಭಾರೀ ಮುಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕೆಎಲ್ ರಾಹುಲ್ 374 ರನ್‌ಗಳಿಸಿದ್ದಾರೆ.

ಪರ್ಪಲ್ ಕ್ಯಾಪ್
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಕೂಡ ಆರ್‌ಆರ್ ಆಟಗಾರನ ಆರ್ಭಟ ಮುಂದುವರಿದಿದೆ. ಆರ್‌ಆರ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುಂದಿದ್ದು 19 ವಿಕೆಟ್ ಸಂಪಾದಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕುಲ್ದೀಪ್ ಯಾದವ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು 17 ವಿಕೆಟ್ ಸಂಪಾದಿಸಿದ್ದಾರೆ. ಉಮ್ರಾನ್ ಮಲಿಕ್ 15 ವಿಕೆಟ್ ಪಡೆದಿದ್ದು ವೇಗಿಗಳ ಪೈಕಿ ಮೊದಲ ಸ್ಥಾನದಲ್ಲಿದ್ದರೆ ಆರ್‌ಸಿಬಿ ಸ್ಪಿನ್ನರ್ ಹಸರಂಗಾ ಕೂಡ 15 ವಿಕೆಟ್‌ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಟಿ ನಟರಾಜನ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಟಾಪ್ 5ರಲ್ಲಿರುವ ಮತ್ತೋರ್ವ ಆಟಗಾರನಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications