MI vs PBKS: ಇಶಾನ್ ಕಿಶನ್, ಪೊಲಾರ್ಡ್ ವಿಫಲ; ಸತತ ಐದನೇ ಸೋಲು ಕಂಡ ಮುಂಬೈ ಇಂಡಿಯನ್ಸ್!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 23ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದಿದ್ದು, ಪಂಜಾಬ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳ ಜಯವನ್ನು ಸಾಧಿಸಿದೆ. ಈ ಸೋಲಿನ ಮೂಲಕ ಮುಂಬೈ ಇಂಡಿಯನ್ಸ್ ಸತತ ಐದನೇ ಪಂದ್ಯದಲ್ಲಿ ನೆಲಕಚ್ಚಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡು ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಮತ್ತು ಶಿಖರ್ ಧವನ್ ತಲಾ ಅರ್ಧ ಶತಕಗಳನ್ನು ಸಿಡಿಸಿ ಮಿಂಚಿದರು. ಮಯಾಂಕ್ ಅಗರ್ವಾಲ್ 52 ರನ್ ಗಳಿಸಿದರೆ, ಶಿಖರ್ ಧವನ್ 70 ರನ್ ಕಲೆ ಹಾಕಿದರು. ಇನ್ನು ಆರಂಭಿಕರು ಔಟ್ ಆದ ಬಳಿಕ ರನ್ ವೇಗ ಕಳೆದುಕೊಂಡಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ 15 ಎಸೆತಗಳಲ್ಲಿ ಅಜೇಯ 30 ರನ್ ಚಚ್ಚುವ ಮೂಲಕ ಜಿತೇಶ್ ಶರ್ಮಾ ಆಸರೆಯಾದರು ಹಾಗೂ ಶಾರುಖ್ ಖಾನ್ 6 ಎಸೆತಗಳಲ್ಲಿ 15 ರನ್ ಕಲೆ ಹಾಕಿದರು . ಹೀಗೆ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಕಲೆ ಹಾಕಿ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ 199 ರನ್‌ಗಳ ಕಠಿಣ ಸವಾಲನ್ನು ನೀಡಿತು.
ಮುಂಬೈ ಇಂಡಿಯನ್ಸ್ ಪರ ಬಸಿಲ್ ತಂಪಿ 2 ವಿಕೆಟ್ ಪಡೆದರೆ, ಜಯದೇವ್ ಉನಾದ್ಕತ್, ಜಸ್ ಪ್ರಿತ್ ಬುಮ್ರಾ ಮತ್ತು ಮುರುಗನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.
ಪಂಜಾಬ್ ಕಿಂಗ್ಸ್ ನೀಡಿದ್ದ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ 12 ರನ್‌ಗಳ ಸೋಲನ್ನು ಕಂಡಿದೆ. ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 28 ರನ್ ಗಳಿಸಿದರೆ, ಇಶಾನ್ ಕಿಶನ್ ಈ ಪಂದ್ಯದಲ್ಲಿ ಅಬ್ಬರಿಸದೇ ವಿಫಲರಾಗಿ 3 ರನ್ ಕಲೆಹಾಕಿದ್ದಾರೆ. ಇನ್ನುಳಿದಂತೆ ಬೇಬಿ ಎಬಿ ಡಿವಿಲಿಯರ್ಸ್ ಎಂದೇ ಖ್ಯಾತಿ ಪಡೆದಿರುವ ಡಿವಾಲ್ಡ್ ಬ್ರೆವಿಸ್ 25 ಎಸೆತಗಳಲ್ಲಿ 49 ರನ್ ಬಾರಿಸಿದರೆ, ತಿಲಕ್ ವರ್ಮಾ 36, ಸೂರ್ಯಕುಮಾರ್ ಯಾದವ್ 43, ಕೀರನ್ ಪೊಲಾರ್ಡ್ 10, ಜಯದೇವ್ ಉನಾದ್ಕತ್ 12, ಜಸ್ ಪ್ರೀತ್ ಬುಮ್ರಾ 0 ಮತ್ತು ಟೈಮಲ್ ಮಿಲ್ಸ್ 0 ರನ್ ಗಳಿಸಿದರು.
ಹೀಗೆ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕರು ವಿಫಲರಾದರೂ ಸಹ ಮಧ್ಯಮ ಕ್ರಮಾಂಕದ ಆಟಗಾರರಾದ ಡಿವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅಬ್ಬರಿಸಿ ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದ್ದರು. ಅದರಲ್ಲಿಯೂ ಸೂರ್ಯಕುಮಾರ್ ಯಾದವ್ 43 ( 30 ) ವಿಕೆಟ್ ಉರುಳುವ ತನಕ ಮುಂಬೈ ಇಂಡಿಯನ್ಸ್ ಪಂದ್ಯ ಗೆಲ್ಲಲಿದೆ ಎಂಬ ಊಹೆಗಳು ಹೆಚ್ಚಿದ್ದವು. ಆದರೆ ಅಂತಿಮವಾಗಿ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಜಯ ಸಿಗದೇ ತನ್ನ ಸೋಲಿನ ಸರಪಳಿಯನ್ನು ಮುಂದುವರೆಸಿದೆ.
ಪಂಜಾಬ್ ಕಿಂಗ್ಸ್ ತಂಡದ ಪರ ಒಡಿಯನ್ ಸ್ಮಿತ್ 4 ವಿಕೆಟ್, ಕಗಿಸೋ ರಬಾಡ 2 ವಿಕೆಟ್ ಮತ್ತು ವೈಭವ್ ಅರೋರಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications