GT vs RR ಕ್ವಾಲಿಫೈಯರ್ 1: ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿ

ಕಳೆದ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಶುರುವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬಿದ್ದಿದೆ. ಟೂರ್ನಿಯ ಲೀಗ್ ಹಂತದಲ್ಲಿ 70 ಪಂದ್ಯಗಳು ನಡೆದಿದ್ದು, ಮೊದಲಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಪ್ಲೇಆಫ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡಿತು ಹಾಗೂ ನಂತರ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟ ಎರಡನೇ ಸ್ಥಾನ ಎನಿಸಿಕೊಂಡಿತು ಮತ್ತು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಪ್ರವೇಶಿಸಿದ ಮೂರನೇ ತಂಡವಾದರೆ, ನಾಲ್ಕನೇ ಪ್ರವೇಶಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆದ ಪೈಪೋಟಿಯಲ್ಲಿ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಯಿತು.
ಇನ್ನು ಲೀಗ್ ಹಂತದ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ಅಗ್ರಸ್ಥಾನ ಮತ್ತು ರಾಜಸ್ಥಾನ್ ರಾಯಲ್ಸ್ ಎರಡನೇ ಸ್ಥಾನ ಹೊಂದಿದ್ದು, ಒಂದನೇ ಕ್ವಾಲಿಫೈಯರ್ ಪಂದ್ಯವನ್ನಾಡಲಿವೆ. ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆದುಕೊಳ್ಳುವ ತಂಡಗಳಿಗೆ ಈ ಪ್ರವೇಶ ಲಭಿಸಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿದ್ದರೆ, ಸೋಲುವ ತಂಡಕ್ಕೆ ಮತ್ತೊಂದು ಅವಕಾಶ ಲಭಿಸಲಿದ್ದು, ಎಲಿಮಿನೇಟ್ ಪಂದ್ಯದಲ್ಲಿ ಗೆಲ್ಲುವ ತಂಡದೊಂದಿಗೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಾಡಲಿದೆ.
ಇನ್ನು ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಒಂದನೇ ಕ್ವಾಲಿಫೈಯರ್ ಪಂದ್ಯ ನಾಳೆ (ಮೇ 24) ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಯಾವ ತಂಡ ಗೆದ್ದು ನೇರವಾಗಿ ಪ್ಲೇಆಫ್ ಪ್ರವೇಶ ಪಡೆದುಕೊಳ್ಳಲಿದೆ ಎಂಬ ಲೆಕ್ಕಾಚಾರಗಳಲ್ಲಿ ಕೆಲ ಕ್ರಿಕೆಟ್ ಪ್ರೇಮಿಗಳು ತೊಡಗಿದ್ದರೆ, ಇನ್ನೂ ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಹುದಾದಾ ಆಟಗಾರರನ್ನು ಆರಿಸುವಲ್ಲಿ ನಿರತರಾಗಿದ್ದಾರೆ. ಹೀಗೆ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳು ಈ ಕೆಳಕಂಡಂತೆ ಡ್ರೀಮ್ ಟೀಮ್ ರಚಿಸುವುದು ಉತ್ತಮ ಎನ್ನಬಹುದು..

ಡ್ರೀಮ್ ಟೀಮ್ 1
ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಸಲಹೆ 1 ಈ ಕೆಳಕಂಡಂತಿದೆ..
1 ಜೋಸ್ ಬಟ್ಲರ್, 2 ವೃದ್ಧಿಮಾನ್ ಸಹಾ, 3 ಹಾರ್ದಿಕ್ ಪಾಂಡ್ಯ, 4 ಸಂಜು ಸ್ಯಾಮ್ಸನ್, 5 ರಿಯಾನ್ ಪರಾಗ್, 6 ಡೇವಿಡ್ ಮಿಲ್ಲರ್, 7 ಆರ್ ಅಶ್ವಿನ್, 8 ರಶೀದ್ ಖಾನ್, 9 ಓಬೇದ್ ಮೆಕಾಯ್, 10 ಪ್ರಸಿದ್ಧ್ ಕೃಷ್ಣ, 11 ಮೊಹಮ್ಮದ್ ಶಮಿ.
ನಾಯಕ: ಹಾರ್ದಿಕ್ ಪಾಂಡ್ಯ, ಉಪನಾಯಕ: ಸಂಜು ಸ್ಯಾಮ್ಸನ್, ವಿಕೆಟ್ ಕೀಪರ್: ವೃದ್ಧಿಮಾನ್ ಸಹಾ.

ಡ್ರೀಮ್ ಟೀಮ್ 2
ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಸಲಹೆ 2 ಈ ಕೆಳಕಂಡಂತಿದೆ..
1 ಜೋಸ್ ಬಟ್ಲರ್, 2 ಶುಭಮನ್ ಗಿಲ್, 3 ಹಾರ್ದಿಕ್ ಪಾಂಡ್ಯ, 4 ಸಂಜು ಸ್ಯಾಮ್ಸನ್, 5 ಶಿಮ್ರೋನ್ ಹೆಟ್ಮೆಯರ್, 6 ರಾಹುಲ್ ತೆವಾಟಿಯಾ, 7 ಆರ್ ಅಶ್ವಿನ್, 8 ಮೊಹಮ್ಮದ್ ಶಮಿ, 9 ಯುಜ್ವೇಂದ್ರ ಚಹಾಲ್, 10 ಒಬೆದ್ ಮೆಕಾಯ್, 11 ಟ್ರೆಂಟ್ ಬೌಲ್ಟ್.
ನಾಯಕ: ಸಂಜು ಸ್ಯಾಮ್ಸನ್, ಉಪನಾಯಕ: ಆರ್ ಅಶ್ವಿನ್, ವಿಕೆಟ್ ಕೀಪರ್: ಸಂಜು ಸ್ಯಾಮ್ಸನ್.

ಸಂಭಾವ್ಯ ಆಡುವ ಬಳಗ
ಗುಜರಾತ್ ಟೈಟಾನ್ಸ್: 1 ವೃದ್ಧಿಮಾನ್ ಸಹಾ, 2 ಶುಭಮನ್ ಗಿಲ್, 3 ಹಾರ್ದಿಕ್ ಪಾಂಡ್ಯ, 4 ಮ್ಯಾಥ್ಯೂ ವೇಡ್, 5 ಡೇವಿಡ್ ಮಿಲ್ಲರ್, 6 ರಾಹುಲ್ ತೆವಾಟಿಯಾ, 7 ರಶೀದ್ ಖಾನ್, 8 ಯಶ್ ದಯಾಲ್, 9 ಆರ್ ಸಾಯಿ ಕಿಶೋರ್, 10 ಅಲ್ಜಾರಿ ಜೋಸೆಫ್, 11 ಮೊಹಮ್ಮದ್ ಶಮಿ.
ರಾಜಸ್ಥಾನ್ ರಾಯಲ್ಸ್: 1. ಜೋಸ್ ಬಟ್ಲರ್, 2. ಯಶಸ್ವಿ ಜೈಸ್ವಾಲ್, 3. ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆ), 4. ರಿಯಾನ್ ಪರಾಗ್, 5. ದೇವದತ್ ಪಡಿಕ್ಕಲ್, 6. ಶಿಮ್ರಾನ್ ಹೆಟ್ಮೆಯರ್, 7. ಆರ್ ಅಶ್ವಿನ್, 8. ಟ್ರೆಂಟ್ ಬೌಲ್ಟ್, 9. ಪ್ರಸಿದ್ಧ್ ಕೃಷ್ಣ, 10. ಯುಜ್ವೇಂದ್ರ ಚಹಾಲ್, 11. ಓಬೇದ್ ಮೆಕಾಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications