
ಐಪಿಎಲ್ ತಂಡಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಸಕ್ರಿಯವಾಗಿರುವ ಫ್ರಾಂಚೈಸಿಗಳ ಪೈಕಿ ರಾಜಸ್ಥಾನ್ ರಾಯಲ್ಸ್ ಕೂಡ ಒಂದು. ಸದಾ ಒಂದಲ್ಲಾ ಒಂದು ವಿಶಿಷ್ಟ, ವಿಚಿತ್ರ ಪೋಸ್ಟ್‌ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಆರ್‌ಸಿಬಿ ತಂಡದ ಸಾಮಾಜಿಕ ಜಾಲತಾಣ ಯಶಸ್ವಿಯಾಗಿದೆ. ಇದೀಗ ತಂಡದ ನಾಯಕನನ್ನೇ ಅವಮಾನಿಸುವ ರೀತಿಯ ಪೋಸ್ಟ್ ಮಾಡುವ ಮೂಲಕ ಆರ್‌ಆರ್ ಟ್ವಿಟ್ಟರ್ ಅಡ್ಮಿನ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಟ್ವಿಟ್ಟರ್ ಖಾತೆಯಲ್ಲಿ ನಾಯಕ ಸಂಜು ಸ್ಯಾಮ್ಸನ್ ಅವರ ಫೋಟೋವನ್ನು ತಮಾಷೆಯಾಗಿ ಎಡಿಟ್ ಮಾಡಿ ಫೋಟೋವನ್ನು ಹಂಚಿಕೊಳ್ಳಲಾಗಿತ್ತು. ಅಲ್ಲದೆ ಆ ಫೋಟೋಗೆ "ನೀವೇನು ಚಿಂತೆ ಮಾಡುತ್ತಿರುವುರಿ" ಎಂಬ ಒಕ್ಕಣೆಯನ್ನು ಬರೆಯಲಾಗಿತ್ತು. ಈ ಟ್ವೀಟ್ ಗಮನಿಸಿದ ಸಂಜು ಸ್ಯಾಮ್ಸನ್ ಅಸಮಾಧಾನದಿಂದ ಟ್ವಿಟ್ಟರ್‌ನಲ್ಲಿಯೇ ಪ್ರತಿಕ್ರಿಯಿಸಿದ್ದಾರೆ. "ಇದು ಗೆಳೆಯರ ಮಧ್ಯೆ ಸರಿಯಿರುತ್ತದೆ. ಆದರೆ ತಂಡಗಳು ವೃತ್ತಿಪರವಾಗಿರಬೇಕು" ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ರಾಜಸ್ಥಾನ್ ರಾಯಲ್ಸ್ ಟ್ವಿಟ್ಟರ್ ಖಾತೆಯನ್ನು ಸಂಜು ಸ್ಯಾಮ್ಸನ್ ಅಲ್‌ಫಾಲೋ ಮಾಡಿದ್ದಾರೆ.
ಇನ್ನು ಈ ಬೆಳವಣಿಗೆ ಇಷ್ಟಕ್ಕೇ ನಿಂತಿಲ್ಲ. ಈ ವಿಚಾರವಾಗಿ ಸಂಜು ಸ್ಯಾಮ್ಸನ್ ಗಂಭೀರವಾಗಿ ಪರಿಗಣಿಸಿದ್ದು ತಂಡದ ಮ್ಉಆನೇಜ್‌ಮೆಂಟ್‌ಗೆ ಈ ಬಗ್ಗೆ ದೂರು ನೀಡಲಾಗಿದೆ ಎಂಬ ಮಾಹಿತಿಯು ಬಂದಿದೆ. ಹೀಗಾಗಿ ಫ್ರಾಂಚೈಸಿಯ ಮ್ಯಾನೇಜ್‌ಮೆಂಟ್ ಸಾಮಾಜಿಕ ಜಾಲತಾಣದ ಅಡ್ಮಿನ್ ಮೇಲೆ ಕಠಿಣ ಕ್ರಮ ಕೈಗೊಂಡರೂ ಅಚ್ಚರಿಯಿಲ್ಲ.
ಇನ್ನು ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಟ್ವಿಟ್ಟರ್ ಅಡ್ಮಿನ್‌ನ ಮತ್ತೊಂದು ಫ್ರಾಂಕ್ ಇದಾಗಿರಬಹುದು ಎಂಬ ಅಭಿಪ್ರಾಯಗಳನ್ನು ಕೂಡ ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ತಂಡದ ಮತ್ತೋರ್ವ ಆಟಗಾರ ಯುಜುವೇಂದ್ರ ಚಾಹಲ್ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂಬ ರೀತಿಯಲ್ಲಿ ಕೆಲ ಪೋಸ್ಟ್‌ಗಳನ್ನು ಮಾಡಿ ನೆಟ್ಟಿಗರ ಗಮನ ಸೆಳೆದಿತ್ತು ಆರ್‌ಆರ್ ಟ್ವಿಟ್ಟರ್ ಖಾತೆ. ಇದು ಕೂಡ ಅದೇ ರೀತಿಯ ಫ್ರ್ಯಾಂಕ್ ಪೋಸ್ಟ್ ಇರಬಹುದು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
ಇನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ಬಾರಿ ಕೂಡ ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಬಾರಿಯ ಹರಾಜಿನಲ್ಲಿ ಕೆಲ ಪ್ರಮುಖ ಸ್ಟಾರ್ ಆಟಗಾರರನ್ನು ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಆರ್‌ಆರ್ ಪ್ರಾಂಚೈಸಿ ಯಶ್ಸ್ವಿಯಾಗಿದ್ದು ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಆರ್ ಅಶ್ವಿನ್, ಯುಜುವೇಂದ್ರ ಚಾಹಲ್ ಅವರಂತಾ ಸ್ಟಾರ್ ಸ್ಪಿನ್ನರ್‌ಗಳು ಆರ್‌ಆರ್ ತಂಡದಲ್ಲಿದ್ದಾರೆ.
ಕೊನೆಗೂ ಐಪಿಎಲ್‌ನ ಬೃಹತ್ ದಾಖಲೆ ಮುರಿಯುವಲ್ಲಿ ವಿಫಲರಾದ ಎಂಎಸ್ ಧೋನಿ; ರೋಹಿತ್ ನಂ.1!
ಈ ಬಾರಿ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ತನ್ನ ಮೊದಲ ಸೆಣೆಸಾಟವನ್ನು ನಡೆಸಲಿದ್ದು ಸೋಮವಾರ ಪಂದ್ಯ ನಡೆಯಲಿದೆ.
ರಾಜಸ್ಥಾನ್ ರಾಯಲ್ಸ್ ಸ್ಕ್ವಾಡ್: ಸಂಜು ಸ್ಯಾಮ್ಸನ್, ಕರುಣ್ ನಾಯರ್, ರಾಸಿರ್ ವ್ಯಾನ್ ಡೆರ್ ಡುಸ್ಸೆನ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಜೋಸ್ ಬಟ್ಲರ್, ಧ್ರುವ್ ಜುರೆಲ್, ಜೇಮ್ಸ್ ನೀಶಮ್, ಅನುನಯ್ ಸಿಂಗ್, ಡೇರಿಲ್ ಮಿಚೆಲ್, ರವಿಚಂದ್ರನ್ ಅಶ್ವಿನ್, ಶುಭಂ ಗರ್ವಾಲ್, ಕುಲದೀಪ್ ಯಾದವ್, ನಥೆನ್ ಕೌಲ್ಟರ್-ನೈಲ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್, ಕುಲದೀಪ್ ಸೇನ್, ಓಬೇದ್ ಮೆಕಾಯ್, ತೇಜಸ್ ಬರೋಕಾ, ಕೆಸಿ ಕರಿಯಪ್ಪ, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್