RCB ತಂಡ ಸೇರಿಕೊಂಡ ರಜತ್ ಪಾಟೀದರ್: ಲುವ್‌ನೀತ್ ಸಿಸೋಡಿಯಾ ಔಟ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೀಸನ್‌ನ ಉಳಿದ ಭಾಗಕ್ಕೆ ರಜತ್ ಪಾಟಿದಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕನ್ನಡಿಗ ಲುವ್ನಿತ್ ಸಿಸೋಡಿಯಾ ಗಾಯಾಳುವಾಗಿದ್ದು, ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ಅವರ ಬದಲಿಗೆ ಪಾಟಿದಾರ್ ಅನ್ನು ಪಡೆದಿದೆ.
ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುವ ರಜತ್ ಪಾಟಿದಾರ್ 31 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು ಏಳು ಅರ್ಧಶತಕಗಳೊಂದಿಗೆ 861 ರನ್ ಗಳಿಸಿದ್ದಾರೆ. ಬಲಗೈ ಬ್ಯಾಟರ್, ಈ ಹಿಂದೆ ಆರ್‌ಸಿಬಿ ಫ್ರಾಂಚೈಸಿಯನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದ ಈತ 20 ಲಕ್ಷ ರೂಪಾಯಿ ಬೆಲೆಗೆ ಮತ್ತೆ ಫ್ರಾಂಚೈಸಿಗೆ ಸೇರಿದ್ದಾರೆ.
ಆರ್‌ಸಿಬಿ ಇಲ್ಲಿಯವರೆಗೆ ಎರಡು ಪಂದ್ಯಗಳನ್ನ ಆಡಿದ್ದು, ಒಂದು ಪಂದ್ಯದಲ್ಲಿ ಸೋತು, ಮತ್ತೊಂದು ಪಂದ್ಯದಲ್ಲಿ ಗೆದ್ದಿದೆ. ಮುಂದಿನ ಪಂದ್ಯವು ಏಪ್ರಿಲ್ 5ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿದೆ.


ಆರ್‌ಸಿಬಿ ಮೊದಲ ಬಾರಿಗೆ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಿ 205ರನ್‌ಗಳಿಸಿದ್ರೂ ಗೆಲ್ಲಲಿಲ್ಲ. ಈ ಪಂದ್ಯದಲ್ಲಿ
ನಾಯಕ ಫಾಫ್ ಡು ಪ್ಲೆಸಿಸ್ 88 ರನ್ ಗಳಿಸಿ ಬ್ಯಾಟ್‌ನಿಂದ ಮಿಂಚಿದರು. ಈ ಪಂದ್ಯದಲ್ಲಿ ಸೋತರು ಸಹ ಆರ್‌ಸಿಬಿ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications