ಐಪಿಎಲ್: ಕೊಹ್ಲಿಗೂ ನಾಯಕನಾಗಿದ್ದ ಜಡೇಜಾ ಈ ಹಿಂದೆ ಎಷ್ಟು ಪಂದ್ಯಗಳಲ್ಲಿ ನಾಯಕನಾಗಿದ್ರು ಗೊತ್ತಾ?


ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇಂದಿನಿಂದ ( ಮಾರ್ಚ್ 26 ) ಆರಂಭವಾಗಿದ್ದು, ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿರುವುದು ವಿಶೇಷವಾಗಿರಲಿದ್ದು, ಹಲವು ತಂಡಗಳು ಈ ಬಾರಿ ನೂತನ ನಾಯಕರ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿವೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಶ್ರೇಯಸ್ ಐಯ್ಯರ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ ಹಾಗೂ ಟೂರ್ನಿ ಆರಂಭಕ್ಕೆ ಕೆಲ ಸಮಯ ಬಾಕಿ ಇರುವಾಗ ಚೆನ್ನೈ ಸೂಪರ್ ಕಿಂಗ್ಸ್ ಕೂಡ ರವೀಂದ್ರ ಜಡೇಜಾ ಅವರನ್ನು ನೂತನ ನಾಯಕನನ್ನಾಗಿ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿತು.
ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ನಾಲ್ಕು ಟ್ರೋಫಿಗಳನ್ನು ತಂದುಕೊಟ್ಟಿದ್ದ ಎಂಎಸ್ ಧೋನಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದು, ಈ ಬಾರಿ ಓರ್ವ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ಇನ್ನು ರವೀಂದ್ರ ಜಡೇಜಾರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿರುವ ನಿರ್ಣಯದ ಕುರಿತು ಪರ ವಿರೋಧದ ಚರ್ಚೆಗಳು ನಡೆಯುತ್ತಿದ್ದು, ಕೆಲವರು ರವೀಂದ್ರ ಜಡೇಜಾಗೆ ನಾಯಕತ್ವ ನೀಡಿದ್ದು ಸರಿಯಾದ ಆಯ್ಕೆ ಎನ್ನುತ್ತಿದ್ದರೆ, ಇನ್ನೂ ಕೆಲವರು ಒಮ್ಮೆಯೂ ನಾಯಕತ್ವವನ್ನೇ ನಿರ್ವಹಿಸಿರದ ರವೀಂದ್ರ ಜಡೇಜಾಗೆ ನಾಯಕತ್ವ ನೀಡಿರುವುದು ತಂಡದ ಯಶಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದೂ ಸಹ ಹೇಳುತ್ತಿದ್ದಾರೆ. ಅಷ್ಟಕ್ಕೂ ರವೀಂದ್ರ ಜಡೇಜಾ ಇಲ್ಲಿಯವರೆಗೂ ಯಾವುದೇ ಪಂದ್ಯದಲ್ಲಿಯೂ ನಾಯಕತ್ವ ನಿರ್ವಹಿಸಿದ ಅನುಭವ ಹೊಂದಿಲ್ಲವಾ ಎಂಬ ಪ್ರಶ್ನೆ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹರಿದಾಡುತ್ತಿದ್ದು, ಈ ಪ್ರಶ್ನೆಗೆ ದೊರಕಿರುವ ಉತ್ತರ ರವೀಂದ್ರ ಜಡೇಜಾ ಪಂದ್ಯವೊಂದರಲ್ಲಿ ತಂಡವನ್ನು ಮುನ್ನಡೆಸಿದ್ದರು ಎಂಬುದು. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ಈ ಪಂದ್ಯದಲ್ಲಿ ನಾಯಕನಾಗಿದ್ರು ಜಡೇಜಾ
ರವೀಂದ್ರ ಜಡೇಜಾ 2007ರಲ್ಲಿ ಭಾರತ ಅಂಡರ್ 19 ಅಂತರರಾಷ್ಟ್ರೀಯ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. 2006 - 2007ರವರೆಗೆ ಭಾರತ ಅಂಡರ್ 19 ತಂಡವನ್ನು ಪಿಯೂಷ್ ಚಾವ್ಲಾ ಮುನ್ನಡೆಸಿದ್ದರು. ಈ ನಂತರ ವಿರಾಟ್ ಕೊಹ್ಲಿ ತಂಡದ ನಾಯಕನಾಗಿ ಆಯ್ಕೆಯಾದರು. ಹೀಗೆ ಪಿಯೂಷ್ ಚಾವ್ಲಾ ಮತ್ತು ವಿರಾಟ್ ಕೊಹ್ಲಿ ಅವಧಿಯ ಮಧ್ಯದಲ್ಲಿ ರವೀಂದ್ರ ಜಡೇಜಾ 2007ರಲ್ಲಿ ಬಾಂಗ್ಲಾದೇಶ ಅಂಡರ್ 19 ತಂಡದ ವಿರುದ್ಧ ಕೊಲಂಬೊದಲ್ಲಿದ ನಡೆದಿದ್ದ ಪಂದ್ಯವೊಂದರಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಹಾಗೂ ಈ ಪಂದ್ಯದಲ್ಲಿ ಭಾರತ ಅಂಡರ್ 19 ತಂಡ ಬಾಂಗ್ಲಾದೇಶ ಅಂಡರ್ 19 ತಂಡವನ್ನು ಸೋಲಿಸಿತ್ತು. ಇನ್ನು ಅಂತರರಾಷ್ಟ್ರೀಯ ತಂಡವನ್ನು ಹೊರತುಪಡಿಸಿದರೆ ರವೀಂದ್ರ ಜಡೇಜಾ 2007ರ ವಿನೂ ಮಂಕಡ್ ಅಂಡರ್ 19 ಟೂರ್ನಿಯಲ್ಲಿ ಸೌರಾಷ್ಟ್ರ ಅಂಡರ್ 19 ತಂಡವನ್ನು ಮುಂಬೈ ಅಂಡರ್ 19 ತಂಡದ ವಿರುದ್ಧ 2007ರ ಅಕ್ಟೋಬರ್ 28ರಂದು ರಾಜ್‌ಕೋಟ್‌ನ ವೆಸ್ಟರ್ನ್ ರೈಲ್ವೇ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ನಾಯಕನಾಗಿ ಮುನ್ನಡೆಸಿದ್ದರು.

ಕೊಹ್ಲಿ, ಮನೀಶ್ ಪಾಂಡೆ ಕೂಡ ಈ ತಂಡದಲ್ಲಿದ್ದರು.
ಇನ್ನು ರವೀಂದ್ರ ಜಡೇಜಾ ನಾಯಕನಾಗಿ ಭಾರತ ಅಂಡರ್ 19 ತಂಡವನ್ನು ಮುನ್ನಡೆಸಿದ್ದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಸೌರಭ್ ತಿವಾರಿ ಹಾಗೂ ಅಭಿನವ್ ಮುಕುಂದ್ ಕೂಡ ಇದ್ದರು.

ರವೀಂದ್ರ ಜಡೇಜಾ ಐಪಿಎಲ್ ಅಂಕಿಅಂಶ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗುವವರೆಗೂ ಒಟ್ಟು 200 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಆಡಿರುವ ಅನುಭವವನ್ನು ಹೊಂದಿರುವ ರವೀಂದ್ರ ಜಡೇಜಾ 2386 ರನ್ ಕಲೆಹಾಕಿದ್ದು, 127 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications