IPL 2022: ಬಲವಂತದಿಂದ ಸಿಎಸ್‌ಕೆ ನಾಯಕತ್ವ ಬಿಟ್ಟುಕೊಟ್ಟರಾ ರವೀಂದ್ರ ಜಡೇಜಾ!?

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನ ನಿಡಲು ಸಂಪೂರ್ಣವಾಗಿ ವಿಫಲವಾಗಿದೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದ ಸಿಎಸ್‌ಕೆ ಚಾಂಪಿಯನ್ ಹಣೆಪಟ್ಟಿಗೆ ಪೂರಕ ಪ್ರದರ್ಶನ ನೀಡಲು ಆರಂಭದಿಂದಲೇ ವಿಫಲವಾಗಿದೆ. ಅದರಲ್ಲೂ ಟೂರ್ನಿಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ನಾಯಕತ್ವ ವಹಿಸಿಕೊಂಡ ರವೀಂದ್ರ ಜಡೇಜಾ ಟೂರ್ನಿಯಲ್ಲಿ ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಸಂಪೂರ್ಣ ವಿಫಲನಾಗಿದ್ದು ತಂಡಕ್ಕೆ ಹಿನ್ನಡೆಯುಂಟು ಮಾಡಿತು. ಆದರೆ ಶನಿವಾರ ರವೀಂದ್ರ ಜಡೇಜಾ ನಾಯಕತ್ವವನ್ನು ತೊರೆದು ಧೋನಿಗೆ ಒಪ್ಪಿಸಿದ್ದಾರೆ ಸಿಎಸ್‌ಕೆ ಫ್ರಾಂಚೈಸಿ ಅಧಿಕೃತ ಮಾಹಿತಿ ನೀಡಿದೆ.
ರವೀಂದ್ರ ಜಡೇಜಾ ಟೂರ್ನಿಯಲ್ಲಿ ನಾಯಕನಾಗಿ ಹಾಗೂ ಆಟಗಾರನಾಗಿ ಸಂಪೂರ್ಣ ವೈಫಲ್ಯನ್ನು ಅನುಭವಿಸಿರುವುದು ತಂಡದ ಸೋಲಿಗೆ ಪ್ರಮುಖ ಕಾರಣ ಎಂಬ ಚರ್ಚೆಗಳು ನಡೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 8 ಪಂದ್ಯಗಳ ಪೈಕಿ ಎರಡು ಗೆಲುವು ಮಾತ್ರವೇ ಸಾಧ್ಯವಾಗಿದ್ದು ಉಳಿದ 6 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ಕಾರಣದಿಂದಾಗಿ ರವೀಂದ್ರ ಜಡೇಜಾ ನಾಯಕತ್ವದ ಜವಾಬ್ಧಾರಿಯಿಂದ ಕೆಳಗಿಳಿದು ತಮ್ಮ ವೈಯಕ್ತಿಕ ಪ್ರದರ್ಶನದ ಮೇಲೆ ಗಮನ ನೀಡಲು ನಿರ್ಧರಿಸಿದ್ದಾರೆ ಎಂದು ಸಿಎಎಸ್‌ಕೆ ಫ್ರಾಂಚೈಸಿ ಮಾಹಿತಿಯನ್ನು ನೀಡಿತ್ತು.
ಆದರೆ ಮೂಲಗಳ ಮಾಹಿತಿ ಪ್ರಕಾರ ರವೀಂದ್ರ ಜಡೇಜಾ ನಾಯಕತ್ವ ಬದಲಾವಣೆ ಹಿಂದೆ ಕುತೂಹಲಕಾರಿ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಆ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಇಲ್ಲಿದೆ.

ಮ್ಯಾನೇಜ್‌ಮೆಂಟ್ ಬಲವಂತವಾಗಿ ತೆಗೆದುಕೊಂಡ ನಿರ್ಧಾರ?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಬದಲಾವಣೆ ಬಗ್ಗೆ ಫ್ರಾಂಚೈಸಿ ಶನಿವಾರ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದೆ. ಈ ಪ್ರಕಟಣೆಯಲ್ಲಿನ ಅಂಶಗಳನ್ನು ನೋಡಿದರೆ ಸಹಜವಾಗಿಯೇ ಇದು ಪರಸ್ಪರ ಒಮ್ಮತದ ನಿರ್ಧಾರವಾಗಿದೆ ಎನಿಸುತ್ತದೆ. ಆದರೆ ಕ್ರಿಕ್‌ಬಜ್ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಿದ್ದು ಇದು ಮ್ಯಾನೇಜ್‌ಮೆಂಟ್ ತೆಗೆದುಕೊಂಡ ನಿರ್ಧಾರವಾಗಿದ್ದು ನಾಯಕನಾಗಿ ಹಾಗೂ ಆಟಗಾರನಾಗಿ ಜಡೇಜಾ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ ಕಾರಣದಿಂದಾಗಿ ಈ ನಿರ್ಧಾರವನ್ನು ಬಲವಂತವಾಗಿ ತೆಗೆದುಕೊಂಡಿತು ಎಂದಿದೆ.

ಸಿಎಸ್‌ಕೆ ಮೂಲಗಳ ಮಾಹಿತಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಕ್ರಿಕ್‌ಬಜ್ ವರದಿ ಮಾಡಿದೆ. "ವಿಶ್ವದ ಅತ್ಯುತ್ತಮ ಆಲ್‌ರೌಂಡರ್ ಓರ್ವ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರುವುದದನ್ನು ನೋಡಿಕೊಂಡು ಮ್ಯಾನೇಜ್‌ಮೆಂಟ್ ಸುಮ್ಮನಿರಲು ಸಾಧ್ಯವಿಲ್ಲ. ಖಂಡಿತವಾಗಿಯೂ ನಾಯಕತ್ವದ ಹೊಣೆಯಿಂದಾಗಿ ಆತ ಕುಸಿದಿದ್ದಾರೆ. ಆತ ಕ್ಯಾಚ್‌ಗಳನ್ನು ಕೂಡ ಡ್ರಾಪ್ ಮಾಡುತ್ತಿದ್ದಾರೆ" ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಂತರಿಕ ಮೂಲಗಳ ಹೇಳಿಕೆಯನ್ನು ಕ್ರಿಕ್ ಬಜ್ ಉಲ್ಲೇಖಿಸಿದೆ.

ಸಿಎಸ್‌ಕೆ ಪ್ರಕಟಣೆಯಲ್ಲಿ ಏನಿದೆ?
"ತನ್ನ ವೈಯಕ್ತಿಕ ಪ್ರದರ್ಶನ ಹಾಗೂ ಆಟದ ಮೇಲೆ ಹೆಚ್ಚು ಗಮನ ನೀಡುವ ಉದ್ದೇಶದಿಂದಾಗಿ ರವೀಂದ್ರ ಜಡೇಜಾ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದು ಎಂಎಸ್ ಧೋನಿ ಬಳಿ ತಂಡವನ್ನು ಮುನ್ನಡೆಸಲು ಮನವಿ ಮಾಡಿಕೊಂಡಿದ್ದಾರೆ. ಧೋನಿ ತಂಡದ ಹಿತದೃಷ್ಟಿಯಿಂದ ಹಾಗೂ ಜಡೇಜಾಗೆ ತನ್ನ ಆಟದ ಮೇಲೆ ಹೆಚ್ಚು ಗಮನ ನೀಡಲು ಅವಕಾಶ ನಿಡುವ ಉದ್ಧೇಶದಿಂದ ಈ ಮನವಿಯುನ್ನು ಒಪ್ಪಿಕೊಂಡಿದ್ದಾರೆ" ಎಂದು ಶನುವಾರ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್ ಹೀಗಿದೆ
ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ಮೊಯಿನ್ ಅಲಿ, ಶಿವಂ ದುಬೆ, ಡೆವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನರ್, ಡ್ವೈನ್ ಪ್ರಿಟೋರಿಯಸ್, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ತುಷಾರ್ ದೇಶಪಾಂಡೆ ಆಡಮ್ ಮಿಲ್ನೆ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಕೆಎಂ ಆಸಿಫ್, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ, ಹರಿ ನಿಶಾಂತ್, ಸುಬ್ರಾನ್ಶು ಸೇನಾಪತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications