IPL 2022: ಪ್ಲೇಆಫ್ ಆಡದೇ ಬರಿಗೈಯಲ್ಲಿ ಹಿಂದಿರುಗುತ್ತಾ ಆರ್‌ಸಿಬಿ; ಕಾರಣವೇನು?

2022ರ 15ನೇ ಆವೃತ್ತಿಯ ಫೈನಲ್ ಸೇರಿದಂತೆ ಯಾವುದೇ ಐಪಿಎಲ್ ಪ್ಲೇಆಫ್ ಪಂದ್ಯಗಳು ಮಳೆ ಅಥವಾ ಹವಾಮಾನ ಕಾರಣದಿಂದ ಅಡ್ಡಿಪಡಿಸಿದರೆ ಮತ್ತು ನಿಯಮಿತ ಸಮಯದಲ್ಲಿ ಯಾವುದೇ ಆಟವು ಸಾಧ್ಯವಾಗದಿದ್ದರೆ ಸೂಪರ್ ಓವರ್ ಮೂಲಕ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂದು ಪ್ಲೇಆಫ್ ಹೊಸ ನಿಯಮಾವಳಿ ಹೇಳುತ್ತದೆ.
ಟೇಬಲ್ ಟಾಪರ್ ಗುಜರಾತ್ ಟೈಟನ್ಸ್ ಮೇ 24ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕ್ವಾಲಿಫೈಯರ್ 1ರಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಎದುರಿಸಲಿದೆ ಮತ್ತು ಮರುದಿನ ಎಲಿಮಿನೇಟರ್‌ನಲ್ಲಿ ಅದೇ ಸ್ಥಳದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಕೋಲ್ಕತ್ತಾದಲ್ಲಿ ಪ್ರತಿಕೂಲ ಹವಾಮಾನ ಮುನ್ಸೂಚನೆ ಇರುವುದು ಐಪಿಎಲ್ ಪ್ಲೇಆಫ್ ಪಂದ್ಯಗಳ ಬಗ್ಗೆ ಚಿಂತೆ ಎದುರಾಗಿದೆ.
ಐಪಿಎಲ್‍ನಲ್ಲಿ ಪ್ಲೇಆಫ್‌ನ ರೋಚಕ ಪಂದ್ಯಗಳಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಸಜ್ಜಾಗುತ್ತಿದೆ. ಈಗಾಗಲೇ 4 ತಂಡಗಳು ಪ್ಲೇಆಫ್ ಪಂದ್ಯಗಳನ್ನು ಆಡಲು ತಯಾರಿ ನಡೆಸುತ್ತಿವೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಆಡದೇ ಈ ಬಾರಿಯೂ ಬರಿಗೈಯಲ್ಲಿ ಹಿಂದಿರುಗುತ್ತಾ ಎಂಬ ಆತಂಕ ಆರ್‌ಸಿಬಿ ಅಭಿಮಾನಿಗಳಲ್ಲಿ ಮೂಡಿದೆ.

ಕೋಲ್ಕತ್ತಾದಲ್ಲಿ ಸುರಿಯುತ್ತಿರುವ ಮಳೆ
ಇದಕ್ಕೆಲ್ಲ ಕಾರಣ ಕೋಲ್ಕತ್ತಾದಲ್ಲಿ ಸುರಿಯುತ್ತಿರುವ ಮಳೆ. ಕೋಲ್ಕತ್ತಾದಲ್ಲಿ ಪ್ಲೇಆಫ್ ಪಂದ್ಯಗಳು ನಡೆಯುತ್ತಿದ್ದು, ಕೋಲ್ಕತ್ತಾದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಇದೀಗ ಪ್ಲೇಆಫ್‍ನ ಎರಡು ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ಇನ್ನೆರಡು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಪ್ಲೇಆಫ್ ಪಂದ್ಯಗಳು ಸರಿಯಾಗಿ ನಡೆಯುವುದು ಅನುಮಾನವೆನೆಸಿದೆ.
ಮೊದಲನೇ ಕ್ವಾಲಿಫೈಯರ್ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಮೇ 24 ಮಂಗಳವಾರ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೇ 25 ಬುಧವಾರದಂದು ನಡೆಯಲಿದೆ. ಒಂದು ವೇಳೆ ಈ ಪಂದ್ಯಗಳು ಮಳೆಯಿಂದಾಗಿ ಸೂಪರ್ ಓವರ್ ಆಡಿಸಲಾಗುತ್ತದೆ.

ಪಂದ್ಯ ರದ್ದಾದರೆ ನೆಟ್ ರನ್‌ರೇಟ್ ಆಧಾರದಲ್ಲಿ ಜಯ
ಸೂಪರ್ ಓವರ್ ಆಡದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾದರೆ ನೆಟ್ ರನ್‌ರೇಟ್‌ನಲ್ಲಿ ಮುಂದಿರುವ ತಂಡ 2ನೇ ಎಲಿಮಿನೇಟರ್‌ಗೆ ತೇರ್ಗಡೆ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಎಲಿಮಿನೇಟರ್ ಪಂದ್ಯವಾಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ನೆಟ್ ರನ್‌ರೇಟ್ ವರದಾನವಾಗುವ ಸಾಧ್ಯತೆ ಹೆಚ್ಚಿದೆ.
ಐಪಿಎಲ್ 2022ರ ಲೀಗ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯನ್ನು ಗಮನಿಸಿದಾಗ ಮೊದಲ ಸ್ಥಾನದಲ್ಲಿರುವ ಗುಜರಾತ್ ತಂಡ +0.316 ನೆಟ್ ರನ್‌ರೇಟ್ ಮತ್ತು 20 ಅಂಕಗಳನ್ನು ಹೊಂದಿದ್ದು, ಪಂದ್ಯ ರದ್ದಾದರೂ ನೇರವಾಹಿ ಫೈನಲ್ ತಲುಪಲಿದೆ. ಇನ್ನು 2ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಕೂಡ 18 ಅಂಕಗಳೊಂದಿಗೆ +0298 ನೆಟ್ ರನ್‌ರೇಟ್ ಹೊಂದಿದೆ.

ಬೆಂಗಳೂರು 16 ಅಂಕಗಳೊಂದಿಗೆ -0.253 ನೆಟ್ ರನ್‌ರೇಟ್
3ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ 18 ಅಂಕಗಳೊಂದಿಗೆ +0.251 ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಅಂಕಗಳೊಂದಿಗೆ -0.253 ನೆಟ್ ರನ್‌ರೇಟ್ ಹೊಂದಿದೆ. ಇದೆಲ್ಲವನ್ನು ಗಮನಿಸಿದಾಗ ಅದೃಷ್ಟದ ಮೂಲಕ ಪ್ಲೇಆಫ್ ಪ್ರವೇಶಿಸಿರುವ ಆರ್‌ಸಿಬಿ ತಂಡಕ್ಕೆ ಪ್ಲೇಆಫ್‍ನಲ್ಲಿ ನೆಟ್ ರನ್‌ರೇಟ್ ಮತ್ತು ಅಂಕಗಳು ಕಡಿಮೆ ಇರುವುದು ಚೊಚ್ಚಲ ಐಪಿಎಲ್ ಟ್ರೋಫಿ ಕನಸು ನುಚ್ಚುನೂರಾಗಲಿದೆ.
ಆರ್‌ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯಕ್ಕೆ ಮಳೆ ಅಡಚಣೆ ನೀಡಿ ಒಂದೂ ಎಸೆತ ಕಾಣದೇ ಪಂದ್ಯ ರದ್ದಾದರೆ, ನೆಟ್ ನೆಟ್ ರನ್‌ರೇಟ್ ಆಧಾರದ ಮೇಲೆ ಲಕ್ನೋ 2ನೇ ಕ್ವಾಲಿಫೈಯರ್‌ಗೆ ತೇರ್ಗಡೆ ಹೊಂದಲಿದೆ. ಇದು ಪ್ಲೇಆಫ್ ಪಂದ್ಯಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಮೇಲುಗೈ ಸಾಧಿಸಿದೆ. ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಕೋಲ್ಕತ್ತಾಗೆ ತೆರಳಿರುವ ಆರ್‌ಸಿಬಿ ಪಂದ್ಯವಾಡದೇ ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಬರುವ ಸಾಧ್ಯತೆ ಹೆಚ್ಚಿದೆ.

ವಿಜೇತರನ್ನು ನಿರ್ಧರಿಸಲು ಮೊದಲನೆಯದಾಗಿ ಸೂಪರ್ ಓವರ್ ವಿಧಾನ
ಮಳೆ-ಬಾಧಿತ ಪಂದ್ಯದಲ್ಲಿ ವಿಜೇತರನ್ನು ನಿರ್ಧರಿಸಲು ಮೊದಲನೆಯದಾಗಿ ಸೂಪರ್ ಓವರ್ ವಿಧಾನವನ್ನು ಬಳಸುವುದು. ಸಾಮಾನ್ಯವಾಗಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಂತೆ ಐದು ಓವರ್‌ಗಳ ಆಯ್ಕೆಯು ಸಾಧ್ಯವಾಗದಿದ್ದರೆ, ನಂತರ ಪಂದ್ಯವನ್ನು ಕೈಬಿಡಲಾಗುತ್ತದೆ.
ಐಪಿಎಲ್ ಫೈನಲ್ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಇದು ಸಾಮಾನ್ಯ ಆರಂಭದ ಸಮಯವಾದ 7.30ಕ್ಕಿಂತ ಅರ್ಧ ಗಂಟೆ ತಡವಾಗಿದೆ. ಅಂತಿಮ ಪಂದ್ಯಕ್ಕೆ ಅಡ್ಡಿ ಉಂಟಾದರೆ ಮೇ 30ರಂದು ಮೀಸಲು ದಿನವಾಗಿರುತ್ತದೆ ಮತ್ತು ಅಂದು ಯಾವುದೇ ಕಾರಣಕ್ಕೂ ಮುಗಿಸಲು ಸಾಧ್ಯವಿಲ್ಲ ಎನ್ನುವುದಾದರೆ, ಇನ್ನು ಮೀಸಲು ದಿನಗಳನ್ನು ಹೊಂದಿರದ ಎರಡು ಕ್ವಾಲಿಫೈಯರ್‌ಗಳು ಮತ್ತು ಎಲಿಮಿನೇಟರ್‌ಗೆ, ಒಂದು ಇನ್ನಿಂಗ್ಸ್ ಪೂರ್ಣಗೊಂಡರೆ, ಆದರೆ ಎರಡನೇ ಇನ್ನಿಂಗ್ಸ್ ಆಟ ಸಾಧ್ಯವಾಗದಿದ್ದರೆ, ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು DLS ವಿಧಾನವನ್ನು ಅನ್ವಯಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications