ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಸೋದರಿ ನಿಧನ: ಐಪಿಎಲ್ ಬಯೋಬಬಲ್ ತೊರೆದ ವೇಗಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಕುಟುಂಬದಲ್ಲಿ ದುರಂತವೊಂದು ಸಂಭವಿಸಿದ್ದು ಹರ್ಷಲ್ ಪಟೇಲ್ ಸಹೋದರಿ ನಿಧನ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದ ಬಳಿಕ ಈ ವಿಚಾರ ತಿಳಿದು ಬಂದಿದ್ದು ತಕ್ಷಣವೇ ಹರ್ಷಲ್ ಪಟೇಲ್ ತಂಡದ ಬಯೋಬಬಲ್ ತೊರೆದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ಪಂದ್ಯದ ಮುಕ್ತಾಯದ ಬಳಿಕ ಕುಟುಂಬದಲ್ಲಿ ನಡೆದ ದುರಂತದ ಬಗ್ಗೆ ಹರ್ಷಲ್ ಪಟೇಲ್‌ಗೆ ತಿಳಿದಿದ್ದು ತಕ್ಷಣವೇ ಅವರು ತಂಡದ ಬಯೋಬಬಲ್ ತೊರೆದಿದ್ದಾರೆ ಎಂದು ವರದಿಯಾಗಿದೆ.

ಪುಣೆಯಿಂದ ನೇರವಾಗಿ ತೆರಳಿದ ಹರ್ಷಲ್
ಐಪಿಎಲ್ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. "ದುರದೃಷ್ಟವಶಾತ್ ಕುಟುಂಬದಲ್ಲಿ ನಡೆದ ಸಾವಿನಿಂದಾಗಿ ಹರ್ಷಲ್ ಪಟೇಲ್ ಐಪಿಎಲ್ ಬಯೋಬಬಲ್‌ಅನ್ನು ತೊರೆಯಬೇಕಾಗಿದೆ. ಅವರ ಸೋದರಿ ಸಾವನ್ನಪ್ಪಿದ್ದಾರೆ. ಅವರು ಪುಣೆಯಿಂದ ಮುಂಬೈಗೆ ಬಸ್‌ನಲ್ಲಿ ಪ್ರಯಾಣವನ್ನು ಮಾಡಿಲ್ಲ" ಎಂದು ಐಪಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹರ್ಷಲ್ ಪಟೇಲ್ ಅವರ ಸೋದರಿ ಅರ್ಚಿತಾ ಪಟೇಲ್ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಮೂವರು ಮಕ್ಕಳ ಪೈಕಿ ಅರ್ಚಿತಾ ಪಟೇಲ್ ಕೊನೆಯವರಾಗಿದ್ದಾರೆ.

ಹರ್ಷಲ್ ಕುಟುಂಬಕ್ಕೆ ಆಘಾತ
ಗುಜರಾತ್‌ನ ಕ್ರಿಕೆಟರ್ ಹರ್ಷಲ್ ಪಟೇಲ್ ಕಳೆದ ಕೆಲ ಆವೃತ್ತಿಗಳಿಂದ ಆರ್‌ಸಿಬಿ ತಂಡದ ಪ್ರಮುಖ ಭಾಗವಾಗಿದ್ದಾರೆ. ಕಳೆದ 2021ರ ಆವೃತ್ತಿಯಲ್ಲಿ ಹರ್ಷಲ್ ಪಟೇಲ್ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಧರಿಸಿಕೊಂಡಿದ್ದರು. ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿಯೂ ಹರ್ಷಲ್ ಪಟೇಲ್ ಉತ್ತಮ ಪ್ರದರ್ಶನ ನೀಡಿದ್ದು 23 ರನ್‌ಗಳನ್ನು ನೀಡಿ 2 ವಿಕೆಟ್ ಸಂಪಾದಿಸಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 151/6 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಈ ಗುರಿಯನ್ನು ಆರ್‌ಸಿಬಿ 18.3 ಓವರ್‌ಗಳಲ್ಲಿ ಬೆನ್ನಟ್ಟಿತ್ತು.
ಐಪಿಎಲ್ 2022: ಎರಡನೇ ವಾರದಲ್ಲಿ ಆಡುವ ಅವಕಾಶ ಸಿಗದೇ ಬೆಂಚ್ ಕಾದ 11 ಉತ್ತಮ ಆಟಗಾರರಿವರು!

ಹರ್ಷಲ್ ಪಟೇಲ್ ಕುಟುಂಬದ ವಿವರ
ಹರ್ಷಲ್ ಪಟೇಲ್ ಕುಟುಂಬ 2005ರಲ್ಲಿ ಅಮೆರಿಕಾಗೆ ಸ್ಥಳಾಂತರವಾಗಿತ್ತು. ಹರ್ಷಲ್ ಪಟೇಲ್ ಕೂಡ ಗ್ರೀನ್‌ಕಾರ್ಡ್ ಹೋಲ್ಡರ್ ಆಗಿದ್ದಾರೆ. ವಿಕ್ರಮ್ ಪಟೇಲ್ ಹರ್ಷಲ್ ಪಟೇಲ್ ಅವರ ತಂದೆಯಾಗಿದ್ದು ದರ್ಶನಾ ಪಟೇಲ್ ತಾಯಿ. ಈ ದಂಪತಿಯ ಮೂವರು ಮಕ್ಕಳ ಪೈಕಿ ಹರ್ಲ್ ಪಟೇಲ್ ಮೊದಲನೆಯವರಾಗಿದ್ದು ಅರ್ಚಿತಾ ಪಟೇಲ್ ಕೊನೆಯವರಾಗಿದ್ದಾರೆ. ತಪನ್ ಪಟೇಲ್ ಮತ್ತೋರ್ವ ಸೋದರ.


ಐಪಿಎಲ್‌ಗೆ ಯಾವಾಗ ಮರಳಲಿದ್ದಾರೆ ಹರ್ಷಲ್ ?
ಕುಟುಂಬದಲ್ಲಿ ಆಗಿರುವ ದೊಡ್ಡ ದುರಂತದ ಆಘಾತದಿಂದ ಹೊರಬರುವುದು ಸುಲಭವಿಲ್ಲ. ಇಂಥಾ ಸಂದರ್ಭದಲ್ಲಿ ಆರ್‌ಸಿಬಿ ತಮಡದ ಪ್ರಮುಖ ಆಟಗಾರನೂ ಆಗಿರುವ ಹರ್ಷಲ್ ಪಟೇಲ್ ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಹರ್ಷಲ್ ಪಟೇಲ್ ಮತ್ತೆ ಆರ್‌ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಕೊವಿಡ್ ನಿಯಮಗಳು ಇರುವ ಕಾರಣ ಕ್ವಾರಂಟೈನ್ ಪ್ರಕ್ರಿಯರ ಮುಗಿಸಿದ ಬಳಿಕ ಹರ್ಷಲ್ ಮತ್ತೆ ತಂಡವನ್ನು ಶೀಘ್ರವಾಗಿ ಕೂಡಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಬಂದಿದೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಏಪ್ರಿಲ್ 12ರಂದು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications