ಧೋನಿಯಷ್ಟೇ ಕೂಲ್ ಈತ: ಆರ್‌ಸಿಬಿ ಅನುಭವಿ ಆಟಗಾರನನ್ನು ಕೊಂಡಾಡಿದ ನಾಯಕ ಫಾಫ್

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕವಾಗಿ ಗೆಲುವು ಸಾಧಿಸಿದೆ. ಬೌಲರ್‌ಗಳಿಂದ ಅದ್ಭುತ ಪ್ರದರ್ಶನ ವ್ಯಕ್ತವಾಗಿದ್ದರೂ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಕಾರಣ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಶ್ರಮಪಟ್ಟು ಗೆದ್ದುಕೊಂಡಿದೆ. ಈ ಗೆಲುವಿನ ಬಳಿಕ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಪ್ರತಿಕ್ರಿಯಿಸಿದ್ದು ತಂಡದ ಓರ್ವ ಅನುಭವಿ ಆಟಗಾರನ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ 128 ರನ್‌ಗಳನ್ನು ಗಳಿಸಿ ಸುಲಭ ಸವಾಲನ್ನು ಆರ್‌ಸಿಬಿ ಮುಂದಿಟ್ಟಿತ್ತು. ಆದರೆ ಇದನ್ನು ಬೆನ್ನಟ್ಟುವ ವೇಳೆ ಆರ್‌ಸಿಬಿ ಕೂಡ ಕುಸಿತ ಕಂಡಿತು.ಮಧ್ಯಮ ಕ್ರಮಾಂಕದ ಆಟಗಾರರ ಎಚ್ಚರಿಕೆಯ ಆಟ ಹಾಗೂ ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಅದ್ಭುತ ಫಿನಿಷಿಂಗ್‌ನ ಕಾರಣದಿಂದಾಗಿ ಆರ್‌ಸಿಬಿ ಪಂದ್ಯವಲ್ಲಿ ಗೆಲುವು ಸಾಧಿಸಿತು. ಈ ಪ

ದಿನೇಶ್ ಕಾರ್ತಿಕ್ ಪ್ರದರ್ಶನದ ಬಗ್ಗೆ ಫಾಫ್ ಮೆಚ್ಚುಗೆ
ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕೊನೆಯ ಕ್ಷಣದಲ್ಲಿ ಬ್ಯಾಟಿಂಗ್‌ಗೆ ಇಳಿದು ಭರ್ಜರಿ ಬ್ಯಾಟಿಂಗ್ ನಡೆಸಿದ ಕಾರಣ ಆರ್‌ಸಿಬಿ ಗೆಲುವು ಸಾಧಿಸಲು ಸಾಧ್ಯವಾಯಿತು. ಅದಕ್ಕೂ ಮುನ್ನ ಶಹ್ಬಾಜ್ ಅಹ್ಮದ್ ಹಾಗೂ ಶೆರ್ಫೆನ್ ರುದರ್ಫೋರ್ಡ್ ತಂಡವನ್ನು ಕುಸಿತದಿಂದ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದರು. ಅಂತಿಮ ಹಂತದಲಲ್ಇ ಮಿಂಚಿದ ದಿನೇಶ್ ಕಾರ್ತಿಕ್ ಬಗ್ಗೆ ನಾಯಕ ಫಾಪ್ ಡು ಪ್ಲೆಸಿಸ್ "ಸಾಮಾನ್ಯವಾಗಿ ಉತ್ತಮ ರೀತಿಯಲ್ಲಿ ಗೆಲುವು ಸಾಧಿಸುವುದನ್ನು ಬಯಸುತ್ತೇವೆ. ಆದರೆ ಗೆಲುವು ಹೇಗಿದ್ದರೂ ಗೆಲುವು. ನಮಗೆ ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಅವರ ಅನುಭವ ನೆರವಿಗೆ ಬಂದಿತು. ಅವರ ಶಾಂತಚಿತ್ತದ ಹಾಗೂ ತಾಳ್ಮೆಯ ಆಟದಿಂದಾಗಿ ನಾವು ಉತ್ತಮವಾಗಿ ಗೆಲುವು ಸಾಧಿಸಿದ್ದೇವೆ" ಎಂದಿದ್ದಾರೆ ಫಾಫ್ ಡು ಪ್ಲೆಸಿಸ್.

ಧೋನಿಯಷ್ಟೇ ಶಾಂತ ದಿನೇಶ್ ಕಾರ್ತಿಕ್
ಇನ್ನು ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ದಿನೇಶ್ ಕಾರ್ತಿಕ್ ಅವರನ್ನು ಫಾಫ್ ಡು ಪ್ಲೆಸಿಸ್ ಎಂಎಸ್ ಧೋನಿಗೆ ಹೋಲಿಸಿದ್ದಾರೆ. ಶಾಂತ ಮನಸ್ಥಿತಿ ಹಾಗೂ ತಾಳ್ಮೆಯ ವಿಚಾರವಾಗಿ ದಿನೇಶ್ ಕಾರ್ತಿಕ್ ಧೋನಿಯಷ್ಟೇ ಕೂಲ್ ಎಂದಿದ್ದಾರೆ ಫಾಫ್ ಡು ಪ್ಲೆಸಿಸ್. ಹಾಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಕಾಲ ಎಂಎಸ್ ಧೋನಿ ನೇತೃತ್ವದಲ್ಲಿ ಸಿಎಸ್‌ಕೆ ತಂಡದಲ್ಲಿ ಆಡಿದ್ದರು. ಈ ಬಾರಿಯ ಆವೃತ್ತಿಗೂ ಮುನ್ನ ನಡೆದ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.

ಪಿಚ್ ಬಗ್ಗೆ ಫಾಫ್ ಹೇಳಿದ್ದಿಷ್ಟು
ಈ ಪಂದ್ಯದ ಬಳಿಕ ಫಾಫ್ ಡು ಪ್ಲೆಸಿಸ್ ಡಿವೈ ಪಾಟೀಲ್ ಕ್ರೀಡಾಂಗಣದ ಪಿಚ್ ಬಗ್ಗೆ ಮಾತನಾಡಿದ್ದಾರೆ. ಇದೇ ಮೈದಾನದಲ್ಲಿ ಕಳೆದ ಭಾನುವಾರ ಮೊದಲ ಪಂದ್ಯವನ್ನು ಆಡಿದ್ದ ಆರ್‌ಸಿಬಿ ಇನ್ನೂರಕ್ಕೂ ಅಧಿಕ ರನ್ ಗಳಿಸಿತ್ತು. ಇದನ್ನು ಎದುರಾಳಿ ಪಂಜಾಬ್ ಕಿಂಗ್ಸ್ ಬೆನ್ನಟ್ಟುವಲ್ಲಿ ಯಶಸ್ವಿಯಾಗಿತ್ತು. "ಮೊದಲ ಪಂದ್ಯದಲ್ಲಿ ಮೊದಲೇ ಸ್ವಲ್ಪ ಸ್ವಿಂಗ್ ಪಡೆಯುತ್ತಿತ್ತು. ಆದರೆ ಇವತ್ತು ವೇಗ ಹಾಗೂ ಬೌನ್ಸ್ ಪಡೆಯುತ್ತಿತ್ತು. ಎರಡ್ಮೂರು ದಿನಗಳ ಹಿಂದೆ 200ಕ್ಕೂ ಅಧಿಕ ರನ್ ಗಳಸಿದ್ದೆವು. ಆದರೆ ಇಂದು 130 ರನ್‌ಗಳ ಪಂದ್ಯವಾಗಿತ್ತು. ನಾವು ಸುಲಭವಾಗಿ ಗೆಲುವು ಸಾಧಿಸಲು ಬಯಸಿದ್ದೆವು. ಇಲ್ಲಿ ರನ್ ನಮಗೆ ಸಮಸ್ಯೆಯಾಗಿರಲಿಲ್ಲ. ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಅಗತ್ಯವಾಗಿತ್ತು" ಎಂದು ಫಾಫ್ ಡು ಪ್ಲೆಸಿಸ್ ಪ್ರತಿಕ್ರಿಯೆ ನೀಡಿದ್ದಾರೆ.

ಆರ್‌ಸಿಬಿಗೆ ಮುಂದಿನ ಎದುರಾಳಿ ಆರ್‌ಆರ್
ಇನ್ನು ಎರಡು ಪಂದ್ಯಗಳಲ್ಲಿ ಮೊದಲ ಗೆಲುವು ಸಾಧಿಸಿರುವ ಆರ್‌ಸಿಬಿ ಮುಂದಿನ ಪಂದ್ಯಕ್ಕಾಗಿ ಎದುರು ನೋಡುತ್ತಿದೆ. ಆರ್‌ಸಿಬಿ ತಂಡದ ಮುಂದಿನ ಪಂದ್ಯ ಏಪ್ರಿಲ್ 5ರಂದು ನಡೆಯಲಿದ್ದು ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆರ್‌ಸಿಬಿ ತಂಡಕ್ಕೆ ಸವಾಲೊಡ್ಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications