For Quick Alerts
ALLOW NOTIFICATIONS  
For Daily Alerts
 

MI vs DC: ನೀಲಿ ಬಣ್ಣಕ್ಕೆ ಬದಲಾದ ಆರ್‌ಸಿಬಿ: ಮುಂಬೈ ಇಂಡಿಯನ್ಸ್‌ಗೆ ಪತ್ರ

RCB Turns Blue

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನ ಅಂತಿಮ ಲೀಗ್ ಪಂದ್ಯ ಇಂದು ನಡೆಯುತ್ತಿದೆ. ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಲಟ್ಸ್ ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಮುಂಬೈಗೆ ಪ್ರತಿಷ್ಠೆ ಆದ್ರೆ, ಡೆಲ್ಲಿಗೆ ಮಾಡು ಇಲ್ಲವೆ ಮಡಿ ಪಂದ್ಯ.

ಈ ಪಂದ್ಯದ ಫಲಿತಾಂಶವು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಷ್ಟೇ ಬಹುಮುಖ್ಯವಾದದ್ದಲ್ಲ. ಏಕೆಂದರೆ ಈ ಪಂದ್ಯದಲ್ಲಿ ಮುಂಬೈ ಗೆದ್ದರೆ ಆರ್‌ಸಿಬಿ ಪ್ಲೇ ಆಫ್‌ ಹಂತಕ್ಕೇರಲಿದೆ. ಹೀಗಾಗಿ ಆರ್‌ಸಿಬಿಯನ್ಸ್ ಕೂಡ ಈ ಪಂದ್ಯವನ್ನ ಆರ್‌ಸಿಬಿಯ ಪಂದ್ಯದಷ್ಟೇ ಬಹಳ ಉತ್ಸುಕರಾಗಿ ನೋಡಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಕೂಡ ಮುಂಬೈ ಇಂಡಿಯನ್ಸ್‌ ತಂಡವನ್ನ ಬೆಂಬಲಿಸಿದೆ. ಇದಕ್ಕೆ ಆರ್‌ಸಿಬಿ ತನ್ನ ಕೆಂಪು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗಿದೆ. ತನ್ನ ಆರ್‌ಸಿಬಿ ಲೋಗೋ ಹಿಂದಿನ ಬಣ್ಣವನ್ನ ನೀಲಿ ಬಣ್ಣಕ್ಕೆ ಬದಲಾಯಿಸಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬೆಂಬಲ ನೀಡಿದೆ.

ಒಂದು ಕಡೆ ಆರ್‌ಸಿಬಿ ಫ್ಯಾನ್ಸ್ ಹೇಗಾದ್ರೂ ಮುಂಬೈ ಇಂಡಿಯನ್ಸ್ ಗೆಲ್ಲಲಿ ಎಂದು ದೇವರ ಮೊರೆ ಹೋಗಿರುವುದು ಸಾಂಆನ್ಯ. ಅದೇ ರೀತಿ ಮುಂಬೈಗೆ ಸಪೋರ್ಟ್ ಮಾಡಿರುವ ಆರ್‌ಸಿಬಿ ಸಂಪೂರ್ಣ ನೀಲಿಮಯವಾಗಿದೆ.

'' ಏ..ಮುಂಬೈ ಇಂಡಿಯನ್ಸ್‌ ನಮ್ಮ ಸಂಪೂರ್ಣ ಬೆಂಬಲ ನಿಮಗೆ, ಡೆಲ್ಲಿ ವಿರುದ್ಧ ಬೋಲ್ಡ್‌ ಆಡಿ ಗೆದ್ದು ಬನ್ನಿ''' ಎಂದು ಬರೆದುಕೊಂಡಿದೆ. ಈ ಪೋಸ್ಟ್‌ನಲ್ಲಿ ಲೆಟರ್ ಕೂಡ ಕಾಣಬಹುದಾಗಿದ್ದು, ಹೇ ಮುಂಬೈ ಪಲ್ಟನ್, ಸಂಪೂರ್ಣ ಆರ್‌ಸಿಬಿ ತಂಡ ನಿಮಗೆ ಬೆಂಬಲ ನೀಡಲಿದೆ ಎಂದಿದೆ.

14 ಪಂದ್ಯಗಳನ್ನ ಆಡಿರುವ ಆರ್‌ಸಿಬಿ 8 ಪಂದ್ಯಗಳ ಗೆಲುವು ಮತ್ತು 6 ಪಂದ್ಯಗಳ ಸೋಲಿನೊಂದಿಗೆ 16 ಪಾಯಿಂಟ್ಸ್ ಕಲೆಹಾಕಿದೆ. ಆದ್ರೆ ನೆಟ್‌ ರನ್‌ರೇಟ್‌ನಲ್ಲಿ ಹಿಂದಿರುವ ಫಾಫ್ ಪಡೆ -0.253 ಪಾಯಿಂಟ್ಸ್ ಹೊಂದಿದೆ. ಆದ್ರೆ ಡೆಲ್ಲಿ ಕ್ಯಾಪಿಲಟ್ಸ್ 14 ಪಾಯಿಂಟ್ಸ್ ಜೊತೆಗೆ ನೆಟ್ ರನ್‌ರೇಟ್ +0.255 ಇರುವುದರಿಂದ ಮುಂಬೈ ವಿರುದ್ಧ ಅವರೇನಾದ್ರು ಗೆದ್ರೆ, ಆರ್‌ಸಿಬಿ ಪ್ಲೇ ಆಫ್‌ನಿಂದ ಹೊರಬೀಳಲಿದೆ.

Story first published: Saturday, May 21, 2022, 16:25 [IST]
Other articles published on May 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+