ಐಪಿಎಲ್ 2022, RCB vs PBKS: ಈ ಮೈಲಿಗಲ್ಲುಗಳ ಮೇಲೆ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್ ಕಣ್ಣು

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯ್ ಲೀಗ್ ಟೂರ್ನಿ ನಿನ್ನೆ ( ಮಾರ್ಚ್ 26 ) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಚಾಲನೆ ಪಡೆದುಕೊಂಡಿದ್ದು, ಇತ್ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಈ ಪ್ರಥಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿದೆ. ಇನ್ನು ಟೂರ್ನಿಯ ಮೊದಲ ದಿನ ಕೇಲವ ಒಂದು ಪಂದ್ಯ ಮಾತ್ರ ನಡೆದಿದ್ದು, ಎರಡನೇ ದಿನವಾದ ಇಂದು ( ಮಾರ್ಚ್ 27 ) ಎರಡು ಪಂದ್ಯಗಳು ನಡೆಯಲಿವೆ. ಈ ದಿನದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಿದರೆ, ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಈ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು, ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಈ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೂ ಒಟ್ಟು ಏಳು ಐಪಿಎಲ್ ಪಂದ್ಯಗಳು ಆಯೋಜನೆಯಾಗಿದ್ದು, ಈ ಪಿಚ್ ಕೂಡ ಮುಂಬೈನ ಇತರೆ ಪಿಚ್‌ಗಳ ಹಾಗೆ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ರನ್ ಗಳಿಸಲು ಸಹಕಾರಿಯಾಗಿರಲಿದೆ. ಹೀಗೆ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ವಿನ ಅನುಕೂಲಕರವಾಗಿರುವ ಈ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಇತ್ತಂಡಗಳ ಈ ಕೆಳಕಂಡ ನಾಲ್ವರು ಆಟಗಾರರು ವಿಶೇಷ ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆಗಳಿವೆ.
> ಫಾಫ್ ಡು ಪ್ಲೆಸಿಸ್: ಈ ಬಾರಿಯ ಮೆಗಾ ಹರಾಜಿನಲ್ಲಿ ಏಳು ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಫಾಫ್ ಡು ಪ್ಲೆಸಿಸ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3000 ಐಪಿಲ್ ರನ್‌ಗಳ ಮೈಲಿಗಲ್ಲನ್ನು ಮುಟ್ಟುವ ಸಾಧ್ಯತೆಗಳಿವೆ. ಇನ್ನು ಫಾಫ್ ಡು ಪ್ಲೆಸಿಸ್ 2935 ಐಪಿಎಲ್ ರನ್ ಕಲೆಹಾಕಿದ್ದು, ಈ ಮೈಲಿಗಲ್ಲನ್ನು ಮುಟ್ಟಲು ಇನ್ನೂ 65 ರನ್ ಬಾರಿಸಬೇಕಾದ ಅಗತ್ಯವಿದೆ. ಹಾಗೂ ಫಾಫ್ ಡು ಪ್ಲೆಸಿಸ್ 96 ಐಪಿಎಲ್ ಸಿಕ್ಸರ್‌ಗಳನ್ನು ಬಾರಿಸಿದ್ದು, ಇನ್ನೂ 4 ಸಿಕ್ಸರ್ ಬಾರಿಸಿದರೆ 100 ಸಿಕ್ಸರ್ ಸಿಡಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
> ದಿನೇಶ್ ಕಾರ್ತಿಕ್: ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೂ ವಿಕೆಟ್ ಕೀಪರ್ ಆಗಿ 147 ಔಟ್‌ಗಳನ್ನು ಮಾಡಿರುವ ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ 3 ಔಟ್ ಮಾಡಿದರೆ, ವಿಕೆಟ್ ಕೀಪರ್ ಆಗಿ 150 ವಿಕೆಟ್ ಪಡೆದ ಆಟಗಾರ ಎಂಬ ಮೈಲಿಗಲ್ಲನ್ನು ನಿರ್ಮಿಸಿ ಐಪಿಎಲ್‌ನಲ್ಲಿ ಎಂಎಸ್ ಧೋನಿ ( 161 ) ನಂತರ ಈ ದಾಖಲೆ ಬರೆದ ಎರಡನೇ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ. ಇನ್ನು ಇದುವರೆಗೂ ಒಟ್ಟು 399 ಐಪಿಎಲ್ ಬೌಂಡರಿಗಳನ್ನು ( 4 ರನ್ ) ಬಾರಿಸಿರುವ ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ ಇನ್ನೊಂದು ಬೌಂಡರಿ ಬಾರಿಸಿದರೆ 400 ಐಪಿಎಲ್ ಬೌಂಡರಿ ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.
> ಮಯಾಂಕ್ ಅಗರ್ವಾಲ್: ಇದುವರೆಗೂ 2917 ಟಿ ಟ್ವೆಂಟಿ ಕ್ರಿಕೆಟ್ ರನ್ ಗಳಿಸಿರುವ ಮಯಾಂಕ್ ಅಗರ್ವಾಲ್ 3000 ಟಿ ಟ್ವೆಂಟಿ ರನ್‌ಗಳ ಮೈಲಿಗಲ್ಲನ್ನು ಮುಟ್ಟಲು ಇನ್ನೂ 83 ರನ್‌ಗಳನ್ನು ಬಾರಿಸಬೇಕಾಗಿದೆ.
> ಹರ್ಷಲ್ ಪಟೇಲ್ ಹಾಗೂ ಸಿದ್ದಾರ್ಥ್ ಕೌಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳಾದ ಹರ್ಷಲ್ ಪಟೇಲ್ ಮತ್ತು ಸಿದ್ದಾರ್ಥ್ ಕೌಲ್ ಇಬ್ಬರೂ ಸಹ 150 ಟಿ ಟ್ವೆಂಟಿ ವಿಕೆಟ್ ಮೈಲಿಗಲ್ಲನ್ನು ಮುಟ್ಟುವ ಸನಿಹದಲ್ಲಿದ್ದಾರೆ. ಹರ್ಷಲ್ ಪಟೇಲ್ ಈ ಮೈಲಿಗಲ್ಲನ್ನು ಮುಟ್ಟಲು ಈ ಪಂದ್ಯದಲ್ಲಿ 1 ವಿಕೆಟ್ ಪಡೆಯಬೇಕಾದ ಅಗತ್ಯತೆಯಲ್ಲಿದ್ದರೆ, ಸಿದ್ದಾರ್ಥ್ ಕೌಲ್ 3 ವಿಕೆಟ್ ಪಡೆಯಬೇಕಾದ ಅಗತ್ಯತೆಯಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications