
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2022ರ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ನೀಡುವ ಮೂಲಕ ಕೆಟ್ಟ ದಾಖಲೆಯನ್ನ ತನ್ನ ಹೆಸರಿಗೆ ದಾಖಲಿಸಿಕೊಂಡಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಈ ಬೇಡದ ದಾಖಲೆಯನ್ನ ತನ್ನ ಹೆಸರಿಗೆ ದಾಖಲಿಸಿಕೊಂಡಿತು.
ಈ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎದುರಾಳಿಗೆ ಬರೋಬ್ಬರಿ 137 ಸಿಕ್ಸರ್‌ಗಳನ್ನು ನೀಡುವ ಮೂಕ ಅತಿ ಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ತಂಡ ಎಂಬ ಕುಖ್ಯಾತಿಗೆ ಕಾರಣವಾಗಿದೆ. ಯಾವ ಸೀಸನ್‌ನಲ್ಲಿ, ಯಾವ ಐಪಿಎಲ್ ತಂಡವು ಎಷ್ಟು ಸಿಕ್ಸರ್ ನೀಡಿದೆ ಎಂಬುದನ್ನ ಈ ಕೆಳಗೆ ಕಾಣಬಹುದು.
ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ತಂಡಗಳು
137 ಆರ್‌ಸಿಬಿ (2022)
135 ಕೆಕೆಆರ್ (2018)
131 ಸಿಎಸ್‌ಕೆ (2018)
128 ರಾಜಸ್ತಾನ್ ರಾಯಲ್ಸ್(2020)
ಆರ್‌ಸಿಬಿ ತಂಡದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ಕೆಟ್ಟ ದಾಖಲೆಯನ್ನ ತನ್ನ ಹೆಸರಿಗೆ ದಾಖಲಿಸಿದ್ದಾರೆ. ಐಪಿಎಲ್ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿಕೊಂಡ ಎರಡನೇ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
29 ಡಿ. ಬ್ರಾವೊ (2018)
28 ಯುಜವೇಂದ್ರ ಚಹಾಲ್ (2015)
28 ಮೊಹಮ್ಮದ್ ಸಿರಾಜ್ (2022)
28 ವಹಿಂದು ಹಸರಂಗ (2022)