RCB vs LSG: ರಜತ್ ಪಾಟೀದಾರ್ ಅಬ್ಬರದ ಶತಕ, ಪ್ಲೇ ಆಫ್‌ನಲ್ಲಿ ವೇಗದ ಶತಕದ ದಾಖಲೆ

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿಯ ರಜತ್ ಪಾಟೀದಾರ್ ಅಬ್ಬರಿಸಿದ್ದಾರೆ. ಎದುರಾಳಿ ತಂಡದ ಬೌಲರ್‌ಗಳನ್ನ ಮನಬಂದಂತೆ ದಂಡಿಸಿದ ಪಾಟೀದಾರ್ 49 ಎಸೆತಗಳಲ್ಲಿ ಅಮೋಘ ಶತಕ ದಾಖಲಿಸಿದ್ದಾರೆ.
ಆರಂಭಿಕ ಓವರ್‌ಗಳಲ್ಲಿ ಡುಪ್ಲೆಸಿಸ್ ಶೂನ್ಯಕ್ಕೆ ಔಟಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದೆ ಪಾಟೀದಾರ್ ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಮಿಂಚಿನ ಆಟವಾಡಿದ್ರು. ಒಂದು ಕ್ಯಾಚ್‌ನ ಜೀವನದ ಮೂಲಕ ಎದುರಾಳಿ ತಂಡವನ್ನ ನಡುಕ ತರಿಸಿದ ಪಾಟೀದಾರ್ ಆರ್‌ಸಿಬಿ ಪರ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ವಿಶೇಷ ದಾಖಲೆಯನ್ನು ಮಾಡಿದರು.
49 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದ ಪಾಟೀದಾರ್ ಐಪಿಎಲ್ ಇತಿಹಾಸದಲ್ಲಿ ಪ್ಲೇ ಆಫ್‌ನಲ್ಲಿ ವೇಗದ ಶತಕ ಸಿಡಿಸಿದ ಪಟ್ಟಿಯಲ್ಲಿ ವೃದ್ದಿಮಾನ್ ಸಾಹಾ ದಾಖಲೆ ಸರಿಗಟ್ಟಿದರು. ಪ್ಲೇ ಆಫ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಆಟಗಾರರನ್ನು ಈ ಕೆಳಗೆ ಕಾಣಬಹುದು.
ರಜತ್ ಪಾಟೀದಾರ್ 49 ಎಸೆತ
ವೃದ್ದಿಮಾನ್ ಸಾಹಾ 49 ಎಸೆತ
ವೀರೇಂದ್ರ ಸೆಹ್ವಾಗ್ 50 ಎಸೆತ
ಮುರಳಿ ವಿಜಯ್ 51 ಎಸೆತ
ಶೇನ್ ವ್ಯಾಟ್ಸನ್ 51 ಎಸೆತ
ಈ ಸೀಸನ್‌ನಲ್ಲಿ ಗಾಯಾಳು ಲವಿತ್ ಸಿಸ್ನೋಡಿಯಾ ಬದಲು ಆರ್‌ಸಿಬಿ ತಂಡವನ್ನು ಸೇರಿಕೊಂಡಿರುವ ರಜತ್ ಪಾಟೀದಾರ್ ಈ ಮಟ್ಟಿಗೆ ಬ್ಯಾಟಿಂಗ್ ಆಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 54 ಎಸೆತಗಳಲ್ಲಿ ಅಜೇಯ 112 ರನ್ ಕಲೆಹಾಕಿರುವ ಪಾಟೀದಾರ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್‌ಗಳಿದ್ದವು.
ರಜತ್ ಪಾಟೀದಾರ್ ಅಮೋಘ ಶತಕ ಹಾಗೂ ದಿನೇಶ್ ಕಾರ್ತಿಕ್ ಅಜೇಯ 37 ರನ್‌ಗಳ ನೆರವಿನಿಂದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿದೆ. ಲಕ್ನೋ ಸೂಪರ್ ಜೈಂಟ್ಸ್ ಗೆಲುವಿಗೆ 208ರನ್ ಟಾರ್ಗೆಟ್ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications