For Quick Alerts
ALLOW NOTIFICATIONS  
For Daily Alerts
 

RCB vs RR: ಅಂತಿಮ ಹಂತದಲ್ಲಿ ಆರ್‌ಸಿಬಿಗೆ ಬೌಲರ್‌ಗಳೇ ವಿಲನ್ಸ್; 170 ರನ್‌ಗಳ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್

IPL 2022, RCB vs RR: Jos Buttler and Shimron Hetmyer shines as RR scored 169/3 against RCB

ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿರುವ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 170 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿದೆ.

Jos Buttler ಮುಂದೆ ಎದುರಾಳಿ ತಂಡದ ಎಲ್ಲಾ ಲೆಕ್ಕಾಚಾರ ಧೂಳೀಪಟವಾಗೋದು ಹೇಗೆ? | Oneindia Kannada

ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಜಸ್ತಾನ ರಾಯಲ್ಸ್ ಪರ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದರು.

ಈ ಪೈಕಿ ಯಶಸ್ವಿ ಜೈಸ್ವಾಲ್ 6 ಎಸೆತಗಳಲ್ಲಿ 4 ರನ್ ಕಲೆ ಹಾಕಿದ್ದಾಗ ಡೇವಿಡ್ ವಿಲ್ಲಿ ಎಸೆತಕ್ಕೆ ವಿಕೆಟ್ ಒಪ್ಪಿಸಿದರೆ, ಮೂರನೇ ವಿಕೆಟ್‌ಗೆ ಜತೆಯಾದ ಜೋಸ್ ಬಟ್ಲರ್ ಮತ್ತು ದೇವದತ್ ಪಡಿಕ್ಕಲ್ 70 ರನ್‌ಗಳ ಜತೆಯಾಟವನ್ನು ಆಡಿದರು. 29 ಎಸೆತಗಳಲ್ಲಿ 37 ರನ್ ಕಲೆಹಾಕಿದ್ದ ದೇವದತ್ ಪಡಿಕ್ಕಲ್ ಹರ್ಷಲ್ ಪಟೇಲ್ ಎಸೆದ 10ನೇ ಓವರ್‌ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದರು. ನಂತರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಂಡದ ನಾಯಕ ಸಂಜು ಸ್ಯಾಮ್ಸನ್ 8 ಎಸೆತಗಳಿಗೆ 8 ರನ್ ಗಳಿಸಿ ವನಿಂದು ಹಸರಂಗಗೆ ವಿಕೆಟ್ ಒಪ್ಪಿಸಿದರು.

ಹೀಗೆ 11.4 ಓವರ್‌ಗೆ 86 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಟಗಾರನಾಗಿ ಕಣದಲ್ಲಿದ್ದ ಜೋಸ್ ಬಟ್ಲರ್ ಮತ್ತು ನಂತರ ಕಣಕ್ಕಿಳಿದ ಶಿಮ್ರಾನ್ ಹೆಟ್ಮಾಯೆರ್ ಆಸರೆಯಾದರು. ಇನ್ನಿಂಗ್ಸ್‌‌ನ ಅಂತಿಮ ಹಂತದವರೆಗೂ ವಿಕೆಟ್ ಕಳೆದುಕೊಳ್ಳದೇ ಬ್ಯಾಟ್ ಬೀಸಿದ ಈ ಜೋಡಿ 83 ರನ್‌ಗಳ ಜತೆಯಾಟವನ್ನಾಡಿತು. 18 ಓವರ್‌ಗಳ ತನಕ 127 ರನ್ ಕಲೆ ಹಾಕಿದ್ದ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಮತ್ತು ಶಿಮ್ರಾನ್ ಹೆಟ್ಮಾಯೆರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 169 ರನ್ ಗಳಿಸಿತು.

19ನೇ ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ ಅವರಿಗೆ ಶಿಮ್ರಾನ್ ಹೆಟ್ಮಾಯೆರ್ 1 ಬೌಂಡರಿ ಮತ್ತು ಜೋಸ್ ಬಟ್ಲರ್ 2 ಸಿಕ್ಸರ್ ಬಾರಿಸಿದರು. ಈ ಮೂಲಕ ಮೊಹಮ್ಮದ್ ಸಿರಾಜ್ 19ನೇ ಓವರ್‌ನಲ್ಲಿ 19 ರನ್ ನೀಡಿ ದುಬಾರಿಯಾದರು. ನಂತರ ಅಂತಿಮ ಓವರ್ ಬೌಲಿಂಗ್ ಮಾಡಿದ ಆಕಾಶ್ ದೀಪ್ ಅವರಿಗೆ ಜೋಸ್ ಬಟ್ಲರ್ 2 ಸಿಕ್ಸರ್ ಮತ್ತು ಶಿಮ್ರಾನ್ ಹೆಟ್ಮಾಯೆರ್ ಓವರ್‌ನ ಅಂತಿಮ ಎಸೆತದಲ್ಲಿ 1 ಸಿಕ್ಸರ್ ಬಾರಿಸಿದ ಪರಿಣಾಮ ಈ ಒಂದು ಓವರ್‌ನಲ್ಲಿಯೇ 23 ರನ್ ಹರಿದು ಬಂತು. ಈ ಮೂಲಕ ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಮಾಡಿದ ಅಂತಿಮ 2 ಓವರ್‌ನಲ್ಲಿಯೇ ರಾಜಸ್ಥಾನ್ ರಾಯಲ್ಸ್ 42 ರನ್ ಪಡೆದುಕೊಂಡಿತು.

ಹೀಗೆ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಅಬ್ಬರಿಸಿದ ಜೋಸ್ ಬಟ್ಲರ್ 47 ಎಸೆತಗಳಲ್ಲಿ ಅಜೇಯ 70 ರನ್ ಕಲೆ ಹಾಕಿದರು. ಜೋಸ್ ಬಟ್ಲರ್ ಅವರಿಗೆ ತಕ್ಕ ಜತೆಯಾಟವನ್ನಾಡಿದ ಶಿಮ್ರಾನ್ ಹೆಟ್ಮಾಯೆರ್ 31 ಎಸೆತಗಳಲ್ಲಿ ಅಜೇಯ 42 ರನ್ ಕಲೆಹಾಕಿದರು.

Story first published: Tuesday, April 5, 2022, 21:47 [IST]
Other articles published on Apr 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+