RCB VS RR: ಆರ್‌ಸಿಬಿಗೆ 145 ರನ್ ಟಾರ್ಗೆಟ್ ನೀಡಿದ ರಾಜಸ್ತಾನ್ ರಾಯಲ್ಸ್

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್, ಆರ್‌ಸಿಬಿಗೆ 145 ರನ್‌ಗಳ ಸಾಧಾರಣ ಗೆಲುವಿನ ಗುರಿಯನ್ನ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಮೊಹಮ್ಮದ್ ಸಿರಾಜ್ ಉತ್ತಮ ಬೌಲಿಂಗ್ ದಾಳಿಗೆ ಎಡವಿದ ದೇವದತ್ ಪಡಿಕ್ಕಲ್ 7ರನ್‌ಗಳಿಸಿದ್ದಾಗ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು.
ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದ ರವಿಚಂದ್ರನ್ ಅಶ್ವಿನ್ 4 ಬೌಂಡರಿ ಮೂಲಕ ತಂಡವನ್ನ ಆರಂಭಿಕ ಆಘಾತದಿಂದ ಮೇಲೆತ್ತುವ ಪ್ರಯತ್ನ ನಡೆಸಿದ್ರು. ಆದ್ರೆ ಸಿರಾಜ್ ಎರಡನೇ ಓವರ್‌ನಲ್ಲಿ ಕಾಟನ್ ಬೌಲ್ಡ್ ಆಗಿ ಪೆವಿಲಿಯನ್ ಮರಳಿದ್ರು. ಇದ್ರ ಬೆನ್ನಲ್ಲೇ ರಾಜಸ್ಥಾನ್‌ಗೆ ಬಹುದೊಡ್ಡ ಹೊಡೆತ ಬಿತ್ತು.
ಇನ್‌ಫಾರ್ಮ್ ಬ್ಯಾಟ್ಸ್‌ಮನ್, ಮೂರು ಶತಕ ಸಿಡಿಸಿರುವ ಜಾಸ್ ಬಟ್ಲರ್, ಆರ್‌ಸಿಬಿ ಟಾಪ್ ಬೌಲರ್ ಜೋಶ್ ಹೇಜಲ್‌ವುಡ್‌ನ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ನುಂಗಲಾರದ ತುತ್ತಾಯಿತು. ಎರಡು ವಿಕೆಟ್ ಪಡೆದಿದ್ದ ಸಿರಾಜ್ ಹಿಡಿದ ಉತ್ತಮ ಕ್ಯಾಚ್‌ನಿಂದಾಗಿ ಬಟ್ಲರ್ ಪೆವಿಲಿಯನ್‌ಗೆ ಸೇರಿದ್ರು.
ಕ್ಯಾಪ್ಟನ್ ಸಂಜು ಸ್ಯಾಮ್ಸನ್ ತಂಡವನ್ನ ಮೇಲೆತ್ತುವ ಪ್ರಯತ್ನ ನಡೆಸಿದ್ರು. ಆದ್ರೆ ಪ್ರಯೋಗಾತ್ಮಕ ಶಾಟ್‌ಗೆ ಮುಂದಾದ ವಿಕೆಟ್ ಕೀಪರ್ ಬ್ಯಾಟರ್ ಸ್ಯಾಮ್ಸನ್ 21 ಎಸೆತಗಳಲ್ಲಿ 27 ರನ್ ಕಲೆಹಾಕುವ ಮೂಲಕ ವಿಕೆಟ್ ಒಪ್ಪಿಸಿದ್ರು. ಡೆರಿಲ್ ಮಿಚೆಲ್ ಆಟಕ್ಕೆ (16) ಹೇಜಲ್‌ವುಡ್ ಮುಕ್ತಾಯ ಹಾಡಿದ್ರು.
ಅಬ್ಬರಿಸಿದ ರಿಯಾನ್ ಪರಾಗ್
ಕೆಳ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ರಿಯಾನ್ ಪರಾಗ್ 29 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿಸುವ ಮೂಲಕ ತಂಡದ ಸ್ಕೋರನ್ನು 140ರ ಗಡಿದಾಟಿಸಿದ್ರು. ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವನ್ನ ದಾಖಲಿಸಿದ ಪರಾಗ್ , ಹರ್ಷಲ್ ಪಟೇಲ್ ಮಾಡಿದ ಕೊನೆಯ ಓವರ್‌ನಲ್ಲಿ 18ರನ್ ಸಿಡಿಸಿದ್ರು.
31 ಎಸೆತಗಳಲ್ಲಿ 56 ರನ್ ಕಲೆಹಾಕಿದ ರಿಯಾನ್ ಪರಾಗ್ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 4 ಅಮೋಘ ಸಿಕ್ಸರ್‌ಗಳಿದ್ದವು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ರಾಜಸ್ತಾನ್ 8 ವಿಕೆಟ್ ನಷ್ಟಕ್ಕೆ 145 ರನ್ ಕಲೆಹಾಕಿದೆ.
ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್, ವಹಿಂದು ಹಸರಂಗ ತಲಾ 2 ವಿಕೆಟ್ ಪಡೆದರು. ಹರ್ಷಲ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications