For Quick Alerts
ALLOW NOTIFICATIONS  
For Daily Alerts
 

RCB vs SRH Preview: ಪ್ರಿವ್ಯೂ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್ ಹವಾಮಾನ ವರದಿ

RCB vs SRH

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡಗಳು ಮುಖಾಮುಖಿಯಾಗುತ್ತಿದ್ದು, ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.

ಕಳೆದ ಪಂದ್ಯದ ಫಲಿತಾಂಶ ನೋಡಿದ್ರೆ ಉಭಯ ತಂಡಗಳು ಉತ್ತಮ ಗೆಲುವಿನ ಲಯದಲ್ಲಿದ್ದು, ವೀಕೆಂಡ್ ಪಂದ್ಯ ಸಾಕಷ್ಟು ರೋಚಕತೆಗೆ ಎಡೆಮಾಡಿಕೊಟ್ಟಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದ್ರಾಬಾದ್ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದ್ದು, ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಮೂರನೇ ಸ್ಥಾನ ಅಲಂಕರಿಸಿದೆ.

ಸಂಜೆ 7.30ಕ್ಕೆ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ವರ್ಸಸ್ ಎಸ್‌ಆರ್‌ಎಚ್ ತಂಡಗಳ ಸಂಭಾವ್ಯ ತಂಡಗಳನ್ನ ಈ ಕೆಳಗೆ ಕಾಣಬಹುದು.

ಆರ್‌ಸಿಬಿ ಮತ್ತು ಎಸ್‌ಆರ್‌ಎಚ್‌ ಸಂಭಾವ್ಯ ತಂಡ

ಆರ್‌ಸಿಬಿ ಮತ್ತು ಎಸ್‌ಆರ್‌ಎಚ್‌ ಸಂಭಾವ್ಯ ತಂಡ

ಆರ್‌ಸಿಬಿ: ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಜಬಾಜ್ ಅಹಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್) ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಸ್ ಹೇಜಲ್‌ವುಡ್‌, ಮೊಹಮ್ಮದ್ ಸಿರಾಜ್

ಎಸ್‌ಆರ್‌ಎಚ್‌: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮಕ್ರಾಮ್, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್, ಶಶಾಂಕ್ ಸಿಂಗ್, ಜಗದೀಶ್ ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೊ ಯಾನ್ಸನ್, ಟಿ ನಟರಾಜನ್ ಮತ್ತು ಉಮ್ರಾನ್ ಮಲ್ಲಿಕ್

ಉಭಯ ತಂಡಗಳು 20 ಬಾರಿ ಮುಖಾಮುಖಿ

ಉಭಯ ತಂಡಗಳು 20 ಬಾರಿ ಮುಖಾಮುಖಿ

ಎಸ್‌ಆರ್‌ಎಚ್ ಮತ್ತು ಆರ್‌ಸಿಬಿ 20 ಐಪಿಎಲ್ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಎಸ್‌ಆರ್‌ಎಚ್ 11 ಮತ್ತು ಆರ್‌ಸಿಬಿ 8 ಪಂದ್ಯಗಳಲ್ಲಿ ಗೆದ್ದಿದೆ. ಈ ಎರಡು ತಂಡಗಳ ನಡುವಿನ ಒಂದು ಪಂದ್ಯವು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

IPL 2022: ಅಂಕಪಟ್ಟಿಯಲ್ಲಿ ರಾಯಲ್ಸ್ ಅಧಿಪತ್ಯ: ಎಲ್ಲಾ ವಿಭಾಗದಲ್ಲೂ ಆರ್‌ಆರ್‌ ಟಾಪ್

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ಬ್ರಬೋರ್ನ್ ಸ್ಟೇಡಿಯಂನಲ್ಲಿ ಹಿಂದಿನ ಪಂದ್ಯವು ಕಡಿಮೆ ಸ್ಕೋರ್ 115 ಅನ್ನು ಆರಾಮವಾಗಿ ಚೇಸ್ ಮಾಡುವುದನ್ನು ಕಂಡಿದೆ. ಆದ್ರೆ ಈ ಪಂದ್ಯದಲ್ಲಿ ಅದು ಆಗದೇ ಇರಬಹುದು. ಸ್ಪಿನ್ನರ್‌ಗಳು ಪಿಚ್‌ನಿಂದ ಸ್ವಲ್ಪ ಹೆಚ್ಚಿನ ಸಪೋರ್ಟ್ ಹೊಂದಿದ್ದಾರೆ. ಆದ್ದರಿಂದ, ಅವರು ಈ ಆಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಲು ಮುಂದಾಗುತ್ತಾನೆ.

David Warner ಹೊಡೆತದಿಂದ Padikkal ತಪ್ಪಿಸಿಕೊಂಡಿದ್ದು ಹೀಗೆ | Oneindia Kannada
ಪಂದ್ಯದ ಪ್ರೆಡಿಕ್ಷನ್

ಪಂದ್ಯದ ಪ್ರೆಡಿಕ್ಷನ್

ಎರಡೂ ತಂಡಗಳು ಐಪಿಎಲ್ 2022 ರಲ್ಲಿ ಉತ್ತಮ ಗೆಲುವಿನ ರನ್ ಗಳಿಸಿವೆ. ಸನ್‌ರೈಸರ್ಸ್ ಹೈದರಾಬಾದ್ ಸತತವಾಗಿ 4 ಪಂದ್ಯಗಳನ್ನು ಗೆದ್ದಿದೆ ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಕೊನೆಯ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿದೆ. ಆದ್ದರಿಂದ, ಕಾಗದದ ಮೇಲೆ ಉಭಯ ತಂಡಗಳು ಸಮಾನ ಶಕ್ತಿಯಾಗಿದ್ದಾರೆ. ಆರ್‌ಸಿಬಿ ಉತ್ತಮ ಸಮತೋಲಿತ ತಂಡವನ್ನು ಹೊಂದಿದೆ ಮತ್ತು ಹೆಚ್ಚು ಅನುಭವಿ ಆಟಗಾರರನ್ನು ಹೊಂದಿದೆ. ಆದ್ದರಿಂದ, ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ತಂಡದ ಪಂದ್ಯದಲ್ಲಿ ಕೊಂಚ ಬೆಂಗಳೂರು ಮೇಲುಗೈ ಹೊಂದಿದೆ.

ಎಸ್‌ಆರ್‌ಎಚ್ ಮೊದಲ ಬ್ಯಾಟಿಂಗ್ ಮಾಡಿದ್ರೆ 150-170 ರನ್ ಕಲೆಹಾಕಬಹುದು. ಅದೇ ಆರ್‌ಸಿಬಿ ಮೊದಲ ಬ್ಯಾಟಿಂಗ್ ಮಾಡಿದ್ರೆ 170-190 ರನ್ ಕಲೆಹಾಕಬಹುದು.

Story first published: Saturday, April 23, 2022, 0:29 [IST]
Other articles published on Apr 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+