ರಿಷಭ್ ಪಂತ್ ಸಹೋದರಿ ಜೊತೆಯೇ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿದ ಪಂತ್ ಪ್ರೇಯಸಿ; ಯಾರು ಈಕೆ?

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 41ನೇ ಪಂದ್ಯ ನಿನ್ನೆ ( ಏಪ್ರಿಲ್ 28 ) ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆದಿದೆ. ಈ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ.
ಈ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 2 ರನ್ ಗಳಿಸಿ ಔಟ್ ಆದರೂ ಸಹ ವೈಯಕ್ತಿಕ ವಿಚಾರದಿಂದಾಗಿ ಸದ್ದು ಮಾಡುತ್ತಿದ್ದಾರೆ. ಹೌದು, ಈ ಪಂದ್ಯವನ್ನು ವೀಕ್ಷಿಸಲು ರಿಷಭ್ ಪಂತ್ ಅವರ ಪ್ರೇಯಸಿ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದನ್ನು ಮಾಡುತ್ತಿದೆ. ಪಂತ್ ಪ್ರೇಯಸಿ ಪಂದ್ಯ ವೀಕ್ಷಿಸಲು ಬಂದಿದ್ದ ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುವ ಕ್ರಿಕೆಟ್ ಪ್ರೇಮಿಗಳು ಪಂತ್ ಪ್ರೇಯಸಿ ಪಂತ್‌ಗೆ ಲಕ್ಕಿ ಗರ್ಲ್, ಆಕೆ ಪಂದ್ಯ ವೀಕ್ಷಿಸಲು ಬಂದದ್ದೇ ಸಾಲು ಸಾಲು ಸೋಲು ಕಂಡಿದ್ದ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಜಯದ ನಗೆ ಬೀರಿದೆ ಎಂದು ಬರೆದುಕೊಂಡು ಭಿನ್ನ ವಿಭಿನ್ನ ಟ್ರೋಲ್ ಮಾಡಿ ಜೋಡಿಯ ಕಾಲೆಳೆದಿದ್ದಾರೆ.
ಇನ್ನು ಈ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ರಿಷಭ್ ಪಂತ್ ಪ್ರೇಯಸಿ ಯಾರು ಎಂಬುದರ ಕುರಿತಾದ ಮಾಹಿತಿ ಮುಂದೆ ಇದೆ ಓದಿ..

ಪಂತ್ ಪ್ರೇಯಸಿ ಯಾರು?
ರಿಷಭ್ ಪಂತ್ ಪ್ರೇಯಸಿ ಹೆಸರು ಇಶಾ ನೇಗಿ. ಉದ್ಯಮಿ ಮತ್ತು ಇಂಟೀರಿಯರ್ ಡೆಕೋರ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿರುವ ಇಶಾ ನೇಗಿ ಅಮಿಟಿ ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಾಂಗ ಮಾಡಿದ್ದು, ಸಾಹಿತ್ಯ ಮತ್ತು ತತ್ವಶಾಸ್ತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಇನ್ನು ರಿಷಭ್ ಪಂತ್ ಮತ್ತು ಇಶಾ ನೇಗಿ 2020ರ ಹೊಸವರ್ಷದ ದಿನವನ್ನು ಒಟ್ಟಿಗೆ ಸಂಭ್ರಮಿಸಿದ್ದರು ಹಾಗೂ ಆ ದಿನ ರಿಷಭ್ ಪಂತ್ ಹಂಚಿಕೊಂಡಿದ್ದ ಇನ್ಸ್ಟಾಗ್ರಾಮ್ ಪೋಸ್ಟ್‌ನಿಂದ ಇಶಾ ನೇಗಿ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡು ವೈರಲ್ ಆಗಿದ್ದರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅನುಯಾಯಿಗಳನ್ನು ಪಡೆದುಕೊಂಡಿದ್ದರು. ಸದ್ಯ ಇಶಾ ನೇಗಿ 185000 ಅನುಯಾಯಿಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹೊಂದಿದ್ದಾರೆ.

ಪಂತ್ ಸಹೋದರಿಯ ಜೊತೆಯೇ ಪಂದ್ಯ ವೀಕ್ಷಿಸಿದ ಇಶಾ
ಇನ್ನು ಇಶಾ ನೇಗಿ ಪಂದ್ಯ ವೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಸದ್ದು ಮಾಡಿದ್ದು, ಆಕೆ ರಿಷಭ್ ಪಂತ್ ಸೋದರಿ ಸಾಕ್ಷಿ ಪಂತ್ ಜೊತೆ ಪಂದ್ಯ ವೀಕ್ಷಿಸಿದರು ಎಂಬ ವಿಷಯ. ಹೌದು, ಸಾಕ್ಷಿ ಪಂತ್ ಜೊತೆ ಸ್ಟೇಡಿಯಮ್‌ಗೆ ಬಂದಿದ್ದ ಇಶಾ ನೇಗಿ ಪಂದ್ಯದುದ್ದಕ್ಕೂ ಸಾಕ್ಷಿ ಪಂತ್ ಜೊತೆ ನಗುನಗುತ್ತಾ ಮಾತನಾಡುತ್ತಾ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹುರಿದುಂಬಿಸಿದ್ದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನು ಕಂಡ ನೆಟ್ಟಿಗರು ರಿಷಭ್ ಪಂತ್ ತಮ್ಮ ಪ್ರೇಯಸಿ ಇಶಾರನ್ನು ಮದುವೆಯಾಗುವುದು ಖಚಿತ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಕೂಡ ಮಾಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಸಾಧ್ಯತೆ
ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 8 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಗೆದ್ದು, ಇನ್ನುಳಿದ 4 ಪಂದ್ಯಗಳಲ್ಲಿ ಸೋಲುಂಡು 8 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಪ್ರವೇಶಿಸಬೇಕೆಂದರೆ ಉಳಿದ 6 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿದೆ. ಹಾಗೂ ಟಾಪ್ ಎರಡಕ್ಕೆ ಏರಿ ಫೈನಲ್ ಪ್ರವೇಶಿಸಲು ಎರಡು ಅವಕಾಶಗಳನ್ನು ಪಡೆದುಕೊಳ್ಳಬೇಕೆಂದರೆ ಉಳಿದ ಎಲ್ಲಾ ಪಂದ್ಯಗಳಲ್ಲಿಯೂ ಗೆಲ್ಲಲೇಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications