Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ವಿರಾಟ್ ಕೊಹ್ಲಿಯ ಮಹತ್ವದ ರೆಕಾರ್ಡ್ ಮೇಲೆ ರೋಹಿತ್ ಶರ್ಮಾ ಕಣ್ಣು!

Virat and rohit sharma

ಐದು ಬಾರಿ ವಿಜೇತ ತಂಡ ಮುಂಬೈ ಇಂಡಿಯನ್ಸ್ 15 ನೇ ಐಪಿಎಲ್ ಸೀಸನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಪ್ರಮುಖ ತಂಡಗಳಲ್ಲಿ ಒಂದಾಗಿದೆ. ಇದು ಮುಂಬೈ ನಾಯಕ ರೋಹಿತ್ ಶರ್ಮಾ ಅವರು ಟೀಂ ಇಂಡಿಯಾದ ಹೊಸ ಪೂರ್ಣ ಸಮಯದ ನಾಯಕರಾದ ನಂತರ ಅವರ ಮೊದಲ IPL ಸೀಸನ್ ಆಗಿದೆ. ಇದಕ್ಕೂ ಮೊದಲು ಹಿಟ್‌ಮ್ಯಾನ್‌ನ ಅಡಿಯಲ್ಲಿ ಮುಂಬೈ ಐದು ಪ್ರಶಸ್ತಿಗಳನ್ನು ಗೆದ್ದಿದೆ.

ಮತ್ತೊಮ್ಮೆ ಪ್ರಶಸ್ತಿ ಗೆದ್ದು ಎದುರಾಳಿಗಳಿಗೆ ತಲುಪದ ರೀತಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಳ್ಳುವುದು ಮುಂಬೈ ತಂಡದ ಗುರಿಯಾಗಿದೆ. ಮಾರ್ಚ್‌ 27 ರಂದು ಮುಂಬೈನ ವಾಂಖೆಡೆಯಲ್ಲಿ ರಿಷಬ್ ಪಂತ್ ಅವರ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈ ಎದುರಿಸಲಿದೆ. ಇದೇ ವೇಳೆ ಮುಂಬೈ ತಂಡದ ನಾಯಕ ರೋಹಿತ್ ದೊಡ್ಡ ಮೈಲಿಗಲ್ಲಿನ ಹೊಸ್ತಿಲಲ್ಲಿದ್ದಾರೆ.

ರೋಹಿತ್ ಶರ್ಮಾ ಪ್ರಶಸ್ತಿ ಗೆಲ್ಲುವ ತುದಿಯಲ್ಲಿಲ್ಲ, ಆದರೆ ಬ್ಯಾಟ್ಸ್‌ಮನ್ ಆಗಿ ಪ್ರಮುಖ ಮೈಲಿಗಲ್ಲಿನ ಅಂಚಿನಲ್ಲಿದ್ದಾರೆ. ಟಿ20ಯಲ್ಲಿ ಹಿಟ್‌ಮ್ಯಾನ್‌ 10,000 ರನ್‌ಗಳು ಪೂರೈಸುವ ಹಾದಿಯಲ್ಲಿದ್ದಾರೆ. ರೋಹಿತ್ ಈಗಾಗಲೇ ರಾಷ್ಟ್ರೀಯ ತಂಡ ಮತ್ತು ಐಪಿಎಲ್‌ಗಾಗಿ ಟಿ20 ಮಾದರಿಯಲ್ಲಿ 9895 ರನ್ ಗಳಿಸಿದ್ದಾರೆ. ಮ್ಯಾಜಿಕ್ ಸಂಖ್ಯೆ 10,000 ತಲುಪಲು ಅವರಿಗೆ ಇನ್ನೂ 105 ರನ್‌ಗಳ ಅಗತ್ಯವಿತ್ತು.

ರೋಹಿತ್ ಟಿ20 ಮಾದರಿಯಲ್ಲಿ ಭರ್ಜರಿ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ಅವರು ಈಗಾಗಲೇ ಆರು ಶತಕ ಮತ್ತು 69 ಅರ್ಧಶತಕಗಳನ್ನು ಗಳಿಸಿದ್ದಾರೆ.

ಭಾರತ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ಶತಕ ಸಿಡಿಸಿದವರಲ್ಲಿ ನಾಲ್ಲು ರೋಹಿತ್ ಶರ್ಮಾನದ್ದೇ ಆಗಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯೂ ರೋಹಿತ್ ಹೆಸರಿನಲ್ಲಿದೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಈಗಾಗಲೇ 10,000 ರನ್ ಗಳಿಸಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8123 ರನ್ ಗಳಿಸಿದ್ದಾರೆ. ರೋಹಿತ್ ಶೀಘ್ರದಲ್ಲೇ ರೆಡ್ ಬಾಲ್ ಕ್ರಿಕೆಟ್‌ನಲ್ಲಿ 10,000 ರನ್ ಪೂರ್ಣಗೊಳಿಸುವ ಭರವಸೆಯಲ್ಲಿದ್ದಾರೆ.

ರೋಹಿತ್ ಶರ್ಮಾ ಐಪಿಎಲ್ 15ನೇ ಆವೃತ್ತಿಯ ಆರಂಭಿಕ ಕೆಲವು ಪಂದ್ಯಗಳಲ್ಲಿ 10,000 ರನ್ ಮೈಲುಗಲ್ಲು ಪೂರ್ಣಗೊಳಿಸುವ ವಿಶ್ವಾಸದಲ್ಲಿದ್ದಾರೆ. ಪ್ರಸ್ತುತ 10,000 ರನ್ ಕ್ಲಬ್‌ನಲ್ಲಿ ಒಬ್ಬ ಭಾರತೀಯ ಆಟಗಾರ ಮಾತ್ರ ಇದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ 10,000 ಟಿ20 ರನ್‌ಗಳ ಎಲೈಟ್ ಕ್ಲಬ್‌ನಲ್ಲಿರುವ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ರೋಹಿತ್ ಈ ದಾಖಲೆ ಸರಿಗಟ್ಟಲು ರೆಡಿಯಾಗಿದ್ದಾರೆ. ರೋಹಿತ್ 2007 ರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು ಮತ್ತು ಈಗಾಗಲೇ 370 ಟಿ20 ಗಳಲ್ಲಿ ಆಡಿದ್ದಾರೆ.

Story first published: Saturday, March 19, 2022, 15:28 [IST]
Other articles published on Mar 19, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+