For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್‌ ಸ್ಕ್ವಾಡ್‌ ಸೇರಿಕೊಂಡ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ

Jasprit bumrah

ಬೆಂಗಳೂರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನೇರವಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ಐದು ದಿನಗಳ ಕಾಲದ ಟೆಸ್ಟ್ ಪಂದ್ಯವು ಮೂರೇ ದಿನಕ್ಕೆ ಮುಕ್ತಾಯವಾದ ಹಿನ್ನಲೆಯಲ್ಲಿ ಸ್ವಲ್ಪ ಬೇಗನೆ ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಮುಂಬೈ ತಲುಪಿದ್ದು, ಉಳಿದ ಆಟಗಾರರು ತಂಗಿರುವ ಹೋಟೆಲ್‌ಗೆ ತಲುಪಿದ್ದಾರೆ. ಅದ್ರಲ್ಲೂ ಪಂದ್ಯ ಮುಗಿದ ಒಂದು ದಿನದೊಳಗೆ ಫ್ರಾಂಚೈಸಿ ಸೇರಿಕೊಂಡಿದ್ದು ವಿಶೇಷ.

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಸ್ಕ್ವಾಡ್‌ ಜೊತೆ ಸೇರಿಕೊಂಡಿರುವ ವೀಡಿಯೋವನ್ನ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮುಂಬೈ ಇಂಡಿಯನ್ಸ್ ಪೋಸ್ಟ್ ಮಾಡಿದ್ದು, ಈ ವೀಡಿಯೋ ಇದೀಗ ವೈರಲ್ ಆಗಿದೆ.

ಮುಂಬೈ ಇಂಡಿಯನ್ಸ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ರೋಹಿತ್ ಶರ್ಮಾ ತನ್ನ ಮಗಳು ಸಮಿರಾ ಮತ್ತು ಪತ್ನಿ ರಿತಿಕಾ ಸಜ್ದೆ ಅವರೊಂದಿಗೆ ಬರುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ, ಹಿಟ್‌ಮ್ಯಾನ್ ತನ್ನ ಮಗಳನ್ನು ಎತ್ತಿಕೊಂಡು ಓಡಾಡುತ್ತಿರುವುದನ್ನ ನೋಡುತ್ತಿರುವ ಜೊತೆಗೆ , ಮುಂಬೈ ಇಂಡಿಯನ್ಸ್ ಇದುವರೆಗೆ ಗೆದ್ದಿರುವ 5 ಟ್ರೋಫಿಗಳನ್ನು ಹೋಟೆಲ್ ನಲ್ಲಿ ಇಟ್ಟಿರುವ ಸ್ಥಳವನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಪುತ್ರಿಯೊಂದಿಗೆ ವೀಕ್ಷಿಸಿದ್ದಾರೆ. ಐಪಿಎಲ್ 2022 ಕ್ಕೆ ಕೇವಲ 10 ದಿನಗಳು ಬಾಕಿ ಉಳಿದಿದ್ದು, ಮುಂಬೈ ಇಂಡಿಯನ್ಸ್ ಈಗಾಗಲೇ ಅಭ್ಯಾಸ ಆರಂಭಿಸಿದೆ.

ಟೂರ್ನಿಯಲ್ಲಿ ಇದುವರೆಗೆ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ ಆರು ಟ್ರೋಫಿಗಳನ್ನು ಗೆಲ್ಲುವ ತವಕದಲ್ಲಿದೆ. ನಿಯಮಗಳ ಪ್ರಕಾರ, ಶ್ರೀಲಂಕಾ ವಿರುದ್ಧ ಸರಣಿ ಆಡುವ ಆಟಗಾರರು ಯಾವುದೇ ಕ್ವಾರಂಟೈನ್ ಇಲ್ಲದೆ ನೇರವಾಗಿ ತಂಡವನ್ನು ಸೇರಿಕೊಳ್ಳಬಹುದು. ಇತರ ಆಟಗಾರರು 3 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಈ ತಿಂಗಳ 27 ರಂದು ಎದುರಿಸಲಿದೆ.

ಮುಂಬೈ ಇಂಡಿಯನ್ಸ್ ಸ್ಕ್ವಾಡ್
ರೋಹಿತ್ ಶರ್ಮಾ , ಜಸ್ಪ್ರೀತ್ ಬುಮ್ರಾ , ಕೀರನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್ , ಇಶಾನ್ ಕಿಶನ್, ಟಿಮ್ ಡೇವಿಡ್ , ಜೋಫ್ರಾ ಆರ್ಚರ್ , ಡೇವಿಡ್ ಬ್ರೆವಿಸ್ , ಡೇನಿಯಲ್ ಸಾಮ್ಸ್, ತಿಲಕ್ ವರ್ಮಾ , ಮುರುಗನ್ ಅಶ್ವಿನ್ , ಟೈಮಲ್ ಮಿಲ್ಸ್, ಜಯದೇವ್ ಉನಾದ್ಕತ್ , ರಿಲೆ ಮೆರೆಡಿತ್, ಫ್ಯಾಬಿಯನ್ ಅಲೆನ್ , ಮಯಾಂಕ್ ಮಾರ್ಕಾಂಡೆ , ಸಂಜಯ್ ಯಾದವ್ , ಬಾಸಿಲ್ ಥಂಪಿ, ಅರ್ಜುನ್ ತೆಂಡೂಲ್ಕರ್ , ಆರ್ಯನ್ ಜುಯಲ್, ಹೃತಿಕ್ ಶೋಕೀನ್, ಮೊಹಮ್ಮದ್ ಅರ್ಷದ್ ಖಾನ್, ಅನ್ಮೋಲ್ಪ್ರೀತ್ ಸಿಂಗ್, ರಾಹುಲ್ ಬುದ್ಧಿ, ರಮಣ್ ದೀಪ್ ಸಿಂಗ್

Story first published: Tuesday, March 15, 2022, 17:55 [IST]
Other articles published on Mar 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+