
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆದ ಬಳಿಕ ಫ್ರಾಂಚೈಸಿಯ ಲಕ್ ಬದಲಾಗಿ ಹೋಯಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
2013ರ ಐಪಿಎಲ್ ಸೀಸನ್‌ನ ಮಧ್ಯದಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಯಿತು. ಆ ನಂತರ ಮುಂಬೈ ಇಂಡಿಯನ್ಸ್ ಹಿಂದಿರುಗಿ ನೋಡಿದ್ದೇ ಇಲ್ಲ. ರೋಹಿತ್ ಶರ್ಮಾ ಚಾಣಾಕ್ಯ ನಾಯಕತ್ವಕ್ಕೆ ಐದು ಟ್ರೋಫಿಗಳು ಮುಂಬೈ ಅಕೌಂಟ್‌ಗೆ ಸೇರಿದವು.
ರೋಹಿತ್ ಶರ್ಮಾ ಜೊತೆಗೆ ಡೆಕ್ಕನ್ ಚಾರ್ಜಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದ ಪ್ರಗ್ಯಾನ್ ಓಜಾ ರೋಹಿತ್ ಶರ್ಮಾ ಸಾಮರ್ಥ್ಯದ ಬಗ್ಗೆ ಅರಿವಿದ್ದರ ಕುರಿತಾಗಿ ಮಾತನಾಡಿದ್ದಾರೆ. ರೋಹಿತ್ ಶರ್ಮಾ ಮುಂಬೈ ನಾಯಕನಾಗುವ ಮೊದಲೇ ಡೆಕ್ಕನ್ ಚಾರ್ಜಸ್ ತಂಡವನ್ನ ರೋಹಿತ್ ಮುನ್ನಡೆಸಬೇಕಿತ್ತು ಎಂದು ಓಜಾ ಅಭಿಪ್ರಾಯ ಪಟ್ಟಿದ್ದಾರೆ.
2012ರಲ್ಲಿ ಡೆಕ್ಕನ್ ಚಾರ್ಜಸ್ ಫ್ರಾಂಚೈಸಿ ಮುಚ್ಚಿಹೋಯಿತು. ಆದ್ರೆ 2011ರ ಐಪಿಎಲ್ ಹರಾಜಿಗೂ ಮೊದಲೇ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾರನ್ನ ಖರೀದಿ ಮಾಡಬಹುದಿತ್ತು. ರೋಹಿತ್ ಐಪಿಎಲ್ ಮೊದಲ ಮೂರು ಸೀಸನ್‌ಗಳಲ್ಲಿ ಆ್ಯಡಂ ಗಿಲ್‌ಕ್ರಿಸ್ಟ್ ನಾಯಕತ್ವದಡಿಯಲ್ಲಿ ಆಡಿದ್ದರು.
ರೋಹಿತ್ ಶರ್ಮಾರನ್ನ ಮುಂಬೈ ಇಂಡಿಯನ್ಸ್ 2012ರ ಐಪಿಎಲ್ ಹರಾಜಿನಲ್ಲಿ $2,000,000 ಡಾಲರ್‌ಗೆ ಖರೀದಿಸಿತು. ರೋಹಿತ್ ಜೊತೆಗೆ ಡೆಕ್ಕನ್ ಚಾರ್ಜಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದಲ್ಲಿ ಡ್ರೆಸ್ಸಿಂಗ್ ರೂಂ ಶೇರ್ ಮಾಡಿರುವ ಓಜಾ ಆಡಂ ಗಿಲ್‌ಕ್ರಿಸ್ಟ್ ರೋಹಿತ್‌ನಲ್ಲಿರುವ ನಾಯಕತ್ವ ಗುಣಗಳನ್ನ ಗಮನಿಸಿದ್ದರು.
''ಬ್ಯಾಟ್ಸ್‌ಮನ್ ಆಗಿ ಅವರು ಅಸಾಧಾರಣರಾಗಿದ್ದರು. ಆಗ ಮುಂಬೈನ ದೇಶೀಯ ತಂಡ ಕೂಡ ಅವರನ್ನು ನಾಯಕನಾಗಿ ನೋಡಲಿಲ್ಲ. ಆದರೆ ಆಡಮ್ ಗಿಲ್‌ಕ್ರಿಸ್ಟ್ ನಾಯಕನಾಗಿದ್ದಾಗ ರೋಹಿತ್‌ರನ್ನು ನಾಯಕನಾಗಿ ಪಟ್ಟ ಕಟ್ಟಬೇಕೆಂದು ಮನಸ್ಸಿನಲ್ಲಿ ಇರಿಸಿಕೊಂಡಿದ್ದರು ಎಂದು ನನಗೆ ಸ್ಪಷ್ಟವಾಗಿ ನೆನಪಿದೆ" ಎಂದು ಓಜಾ ಕ್ರಿಕ್‌ಬಜ್‌ಗೆ ತಿಳಿಸಿದರು.

"ರೋಹಿತ್ ಬ್ಯಾಟಿಂಗ್ ಮಾಡುವ ರೀತಿ, ಅವರು ತೋರಿದ ಸ್ಪಷ್ಟತೆ ಮತ್ತು ಒತ್ತಡದ ಸಂದರ್ಭಗಳಲ್ಲಿ ಅವರು ತೋರಿದ ಸಾಮರ್ಥ್ಯ, ಅವರು ನಾಯಕತ್ವದ ಗುಣಗಳನ್ನು ಹೊಂದಿರಬಹುದು ಎಂದು ಅವರು ಭಾವಿಸಿದರು. ಮತ್ತು ಅವರ ಇನ್‌ಪುಟ್‌ಗಳು ಬರಲು ಪ್ರಾರಂಭಿಸಿದಾಗ, ಅವರು ನಾಯಕರಾಗಬಹುದು ಎಂದು ಖಂಡಿತವಾಗಿ ಭಾವಿಸಿದೆ, "ಎಂದು ಅವರು ಹೇಳಿದರು.
ನಾಲ್ಕನೇ ಐಪಿಎಲ್ ಸೀಸನ್‌ಗೆ ಮೊದಲು ಯಾವುದೇ ಹರಾಜಿಲ್ಲದಿದ್ದರೆ, ರೋಹಿತ್ ಮುಂಬೈಗಿಂತ ಮೊದಲು ಡೆಕ್ಕನ್ ಚಾರ್ಜರ್ಸ್ ಅನ್ನು ಮುನ್ನಡೆಸುತ್ತಿದ್ದರು ಎಂದು
ಮಾಜಿ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಹೇಳಿದ್ದಾರೆ.
