RCB vs PBKS: ಆರ್‌ಸಿಬಿ ಗೆಲ್ಲಲು ಬೃಹತ್ ಮೊತ್ತದ ಗುರಿ ನೀಡಿದ ಪಂಜಾಬ್ ಕಿಂಗ್ಸ್

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಐಪಿಎಲ್ 15ನೇ ಆವೃತ್ತಿಯಲ್ಲಿನ 60ನೇ ಪಂದ್ಯದಲ್ಲಿ ಇಂದು (ಮೇ, 13) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಘಟ್ಟಕ್ಕೆ ತಲುಪಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಕಲೆ ಹಾಕಿದೆ.
ಮೊದಲು ಬ್ಯಾಟಿಂಗ್ ಮಾಡಿರುವ ಪಂಜಾಬ್ ಕಿಂಗ್ಸ್ ಜಾನಿ ಬೇರ್‌ಸ್ಟೋವ್ (66) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (70) ಅವರ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಕಲೆಹಾಕಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 210 ರನ್‌ಗಳ ಟಾರ್ಗೆಟ್ ನೀಡಿದೆ.

ಪಂಜಾಬ್ ಕಿಂಗ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಶಿಖರ್ ಧವನ್ ಮತ್ತು ಜಾನಿ ಬೇರ್‌ಸ್ಟೋವ್ ಅವರಿಂದ ಉತ್ತಮ ಆರಂಭ ಮಾಡಿದರು. ಮೊದಲ 5 ಓವರ್‌ಗಳಲ್ಲಿ 60 ರನ್ ಜೊತೆಯಾಟ ನೀಡಿದರು. ಜಾನಿ ಬೇರ್‌ಸ್ಟೋವ್ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ನಂತರ ಶಿಖರ್ ಧವನ್ 21 ರನ್ ಗಳಿಸಿ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಬೌಲ್ಡ್ ಆದರು.
ಮೂರನೇ ಕ್ರಮಾಂಕದಲ್ಲಿ ಬಂದ ಭಾನುಕಾ ರಾಜಪಕ್ಸ ಹೆಚ್ಚು ಹೊತ್ತು ನಿಲ್ಲದೆ 1 ರನ್ ಗಳಿಸಿ ಔಟಾದರು. ನಂತರ ಬಂದ ಮಯಾಂಕ್ ಅಗರ್ವಾಲ್ 19 ರನ್ ಗಳಿಸಿ ತಂಡದ ಹೆಚ್ಚಾಗಲು ಸಹಕರಿಸಿದರು. ಜಾನಿ ಬೇರ್‌ಸ್ಟೋವ್ 29 ಎಸೆತಗಳಲ್ಲಿ 66 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಯಾಂಕ್ ಔಟಾದ ನಂತರ ಜಿತೇಶ್ ಶರ್ಮ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹರ್ಪ್ರೀತ್ ಬ್ರಾರ್ ಹೆಚ್ಚು ಹೊತ್ತು ನಿಲ್ಲದೆ ಒಂದು ಸಿಕ್ಸರ್ ಬಾರಿಸಿ ಔಟಾದರು.
ಇನ್ನುಳಿದಂತೆ ಕೊನೆಯಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಆರ್‌ಸಿಬಿ ಬೌಲರ್‌ಗಳ ವಿರುದ್ಧ ಅಬ್ಬರಿಸಿದರು. ಕೊನೆಯ ಓವರ್‌ನಲ್ಲಿ 70 ರನ್ ಗಳಿಸಿ ಔಟಾದರೆ, ರಿಷಿ ಧವನ್ 7 ರನ್ ಗಳಿಸಿ ವಿಕೆಟ್ ನೀಡಿದರು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳಾದ ಹರ್ಷಲ್ ಪಟೇಲ್ 4 ಓವರ್ ಬೌಲಿಂಗ್ ಮಾಡಿ 34 ರನ್ ನೀಡಿ 4 ವಿಕೆಟ್ ಪಡೆದರು. ಅದೇ ರೀತಿ ವನಿಂದು ಹಸರಂಗಾ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 15 ರನ್ ನೀಡಿ 2 ವಿಕೆಟ್ ಪಡೆದರು. ಇನ್ನುಳಿದಂತೆ ಗ್ಲೆನ್ ಮ್ಯಾಕ್ಸ್‌ವೆಲ್, ಶಬಾಜ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.
ಜೋಶ್ ಹೆಜಲ್‌ವುಡ್ 4 ಓವರ್‌ಗಳಲ್ಲಿ 64 ರನ್ ನೀಡಿ ಯಾವುದೇ ವಿಕೆ ಟ್ ಪಡೆಯದೇ ದುಬಾರಿಯಾದರು. ಇವರ ಜೊತೆಗೆ ಮೊಹಮ್ಮದ್ ಸಿರಾಜ್ 2 ಓವರ್‌ಗಳಲ್ಲಿ 36 ರನ್ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications